ಶಿಕ್ಷಣ, ಜಾಗೃತಿಯಿಂದಲೇ ಸಮುದಾಯದ ಅಭಿವೃದ್ಧಿ: ಸತೀಶ್ ಜಾರಕಿಹೊಳಿ

ಶಿಕ್ಷಣ, ಜಾಗೃತಿಯಿಂದಲೇ ಸಮುದಾಯದ ಅಭಿವೃದ್ಧಿ: ಸತೀಶ್ ಜಾರಕಿಹೊಳಿ  Community development comes through education and awareness: Satish Jarkiholi


ಬೆಳಗಾವಿ 01 : ಬೆಳಗಾವಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಾಲ್ಮೀಕಿ ಸಮ್ಮೇಳನವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿ, ಶಿಕ್ಷಣ ಹಾಗೂ ಜಾಗೃತಿಯಿಂದ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು. ಸರ್ಕಾರದ ಸೌಲಭ್ಯಗಳನ್ನು ಸಮರ​‍್ಕವಾಗಿ ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು. ಡಾ. ಬಿ.ಆರ್‌. ಅಂಬೇಡ್ಕರ್ ಅವರ ಸಂವಿಧಾನದಿಂದ ಸಮಾನ ಹಕ್ಕು, ಗೌರವ ಹಾಗೂ ಸಾಮಾಜಿಕ ನ್ಯಾಯ ದೊರೆತಿದ್ದು, ಸಂವಿಧಾನದ ಆಶಯಗಳ ಬಗ್ಗೆ ನಿರಂತರ ಜಾಗೃತಿ ಅಗತ್ಯ ಎಂದರು. ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಮ್ಮೇಳನಕ್ಕೂ ಮುನ್ನ ಆರ್ಟಿಓ ವೃತ್ತದಿಂದ ಕುಮಾರಗಂಧರ್ವ ರಂಗಮಂದಿರದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.