ಪಿ.ಎಂ-ಉಷಾ (ಮೇರು) ಅಡಿಯಲ್ಲಿ ಸಂವಹನ ಕಾರ್ಯಾಗಾರ

ಪಿ.ಎಂ-ಉಷಾ (ಮೇರು) ಅಡಿಯಲ್ಲಿ ಸಂವಹನ ಕಾರ್ಯಾಗಾರ  Communication workshop under PM-USHA (Meru)

ಬೆಳಗಾವಿ, 18 ; ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಸಾಫ್ಟ್‌ ಕಾಂಪೊನೆಂಟ್ ಕ್ರಮ ಸಂಖ್ಯೆ: 23 ಅಡಿಯಲ್ಲಿ ಸಾಫ್ಟ್‌ ಸ್ಕಿಲ್ಸ್‌, ನಾಯಕತ್ವ ಮತ್ತು ಸಂವಹನಾಭಿವೃದ್ಧಿ ಕುರಿತ ಕಾರ್ಯಾಗಾರವನ್ನು 18-09-2025 ರಂದು ಆಯೋಜಿಸಲಾಯಿತು.  

ಈ ಕಾರ್ಯಗಾರದಲ್ಲಿ  ಮಂಗಳೂರ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ನಿಕಟಪೂರ್ವ ಪ್ರಾಧ್ಯಾಪಕರಾದ         ಡಾ. ಆರ್‌. ಜಿ. ಹೆಗ್ಡೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಮುಖ ಭಾಷಣ ಮಾಡಿದರು ಹಾಗೂ ಸಾಫ್ಟ್‌ ಸ್ಕಿಲ್ಸ್‌ ಮತ್ತು ಸಂವಹನ ಕುರಿತಂತೆ ಎರಡು ಅರ್ಥಪೂರ್ಣ ಅಧಿವೇಶನಗಳನ್ನು ನಡೆಸಿದರು.  

ಪ್ರತಿಷ್ಠಿತ ಸಾಫ್ಟ್‌ ಸ್ಕಿಲ್ಸ್‌ ತರಬೇತುದಾರ ಹಾಗೂ ಲೇಖಕರಾದ ಡಾ. ಆರ್‌. ಜಿ. ಹೆಗ್ಡೆ ಅವರು ತಮ್ಮ ಉಪನ್ಯಾಸದಲ್ಲಿ ಸಾಫ್ಟ್‌ ಸ್ಕಿಲ್ಸ್‌ಗಳು ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ರೂಪಾಂತರಕಾರಿ ಪಾತ್ರ ವಹಿಸುತ್ತವೆ ಎಂದು ಒತ್ತಿ ಹೇಳಿದರು. “ಶೈಕ್ಷಣಿಕ ಜ್ಞಾನವು ಆಧಾರವಾದರೂ, ಸಂವಹನ, ನಾಯಕತ್ವ ಹಾಗೂ ಭಾವನಾತ್ಮಕ ಬುದ್ಧಿಮತ್ತೆಯೇ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ನಿರ್ಧರಿಸುತ್ತವೆ” ಎಂದು ಅವರು ಮನದಟ್ಟು ಮಾಡಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸ, ಹೊಂದಾಣಿಕೆ ಹಾಗೂ ಅಂತರವ್ಯಕ್ತಿತ್ವ  ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪರಿಣಾಮಕಾರಿ ನಾಯಕತ್ವವು ಸಹಾನುಭೂತಿ ಮತ್ತು ಚಿಂತನೆಯ ಸ್ಪಷ್ಟತೆಯ ಮೇಲೆ ಆಧಾರಿತವಾಗಿದ್ದು, ಅಭ್ಯಾಸ ಮತ್ತು ಆತ್ಮಪರೀಶೀಲನೆಯ ಮೂಲಕ ಅದನ್ನು ಬೆಳೆಸಿಕೊಳ್ಳಬೇಕೆಂದು ಅವರು ಸೂಚಿಸಿದರು.  

ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ಅಧ್ಯಕ್ಷೀಯ ಭಾಷಣದಲ್ಲಿ ಸಂವಹನ ಮತ್ತು ಸಾಫ್ಟ್‌ ಸ್ಕಿಲ್ಸ್‌ ವೈಯಕ್ತಿಕ ಜೀವನದಲ್ಲಷ್ಟೇ ಅಲ್ಲದೆ ಯಶಸ್ವಿ ವ್ಯವಹಾರ ಮತ್ತು ವೃತ್ತಿಜೀವನ ನಿರ್ಮಾಣದಲ್ಲಿಯೂ ಮಹತ್ವದ್ದಾಗಿವೆ ಎಂಬುದನ್ನು ಹಲವು ಘಟನೆಗಳ ಮೂಲಕ ವಿವರಿಸಿದರು. ಇಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಇಂಗ್ಲಿಷ್ ವಿಭಾಗವನ್ನು ಶ್ಲಾಘಿಸಿ, ಉದ್ಯೋಗಾರ್ಹತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಂವಹನ ಹಾಗೂ ನಾಯಕತ್ವ ತರಬೇತಿ ಅತ್ಯಂತ ಅಗತ್ಯ ಎಂದು ಅವರು ಹೇಳಿದರು.  

ಪ್ರೊ. ವಿಜಯ ಎಫ್‌. ನಾಗಣ್ಣವರ, ಹಿರಿಯ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗವು ತರಗತಿ ಅಧ್ಯಯನವನ್ನು ಕೌಶಲ್ಯಾಧಾರಿತ ತರಬೇತಿಗಳೊಂದಿಗೆ ಸಂಪರ್ಕಿಸಲು ಅಗತ್ಯವಿರುವ ಮಹತ್ವವನ್ನು ವಿವರಿಸಿದರು.  

ಕಾರ್ಯಕ್ರಮದ ಸಂಯೋಜಕರಾದ ಡಾ. ಪೂಜಾ ಹಲ್ಯಾಳ ಅವರು ಸ್ವಾಗತ ಭಾಷಣದೊಂದಿಗೆ ಕಾರ್ಯಗಾರ ಪ್ರಾರಂಭಿಸಿದರು. ಡಾ. ಕವಿತಾ ಕುಸುಗಲ್ ಅವರು ಅತಿಥಿಯನ್ನು ಪರಿಚಯಿಸಿದರು. ರೇಣುಕಾ ಅವರು ಮನೋಹರ ಗಾಯನವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಅಶ್ವಿನಿ ಜವಳಿಮಠ ನಿರ್ವಹಿಸಿದ್ದು, ಮಂಜುಳಾ ಕುಸುಗಲ್ ಧನ್ಯವಾದಗಳನ್ನರ​‍್ಿಸಿದರು.  

ಕಾರ್ಯಾಗಾರದಲ್ಲಿ ಎಲ್ಲ ನಿಖಾಯಗಳ ಡೀನರುಗಳು, ಡಾ. ಎಸ್‌. ಎಸ್‌. ಅಂಗಡಿ, ಸಿಂಡಿಕೇಟ್ ಸದಸ್ಯರು, ಡಾ. ನಂದಿನಿ ದೇವರಮಣಿ, ನೋಡಲ್ ಅಧಿಕಾರಿ, ಕಒಹಿಗಖಊಂ (ಒಇಖಗ), ಇಂಗ್ಲಿಷ್ ವಿಭಾಗದ ಅಧ್ಯಾಪಕರು, ಅಧ್ಯಕ್ಷರು, ಸಂಯೋಜಕರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 180 ವಿದ್ಯಾರ್ಥಿಗಳು ವಿಭಿನ್ನ ವಿಷಯಗಳಿಂದ ನೋಂದಾಯಿಸಿಕೊಂಡು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.