ಅಥಣಿ ರಾಯರ ಮಠದ ಅಭಿವೃದ್ಧಿಗೆ ಬದ್ಧ: ಶಾಸಕ ಲಕ್ಷ್ಮಣ ಸವದಿ
Committed to the development of Athani Raya Mutt: MLA Lakshman Savadi
ಅಥಣಿ ರಾಯರ ಮಠದ ಅಭಿವೃದ್ಧಿಗೆ ಬದ್ಧ: ಶಾಸಕ ಲಕ್ಷ್ಮಣ ಸವದಿ
ಅಥಣಿ 10: ಗುರು ರಾಘವೇಂದ್ರ ಸ್ವಾಮೀಜಿ ಕಲಿಯುಗದ ಕಲ್ಪವೃಕ್ಷರಾಗಿ ತಮ್ಮ ಭಕ್ತರನ್ನು ಉದ್ಧರಿಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಭಿನವ ಮಂತ್ರಾಲಯ ಎಂದೇ ಪ್ರಖ್ಯಾತಿ ಪಡೆದ ಅಥಣಿ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.
ರಾಜಕೀಯ ಜೀವನ ಪ್ರವೇಶಿಸುವ ಮೊದಲಿನಿಂದಲೂ ನಾನು ರಾಘವೇಂದ್ರ ಸ್ವಾಮಿಗಳ ಭಕ್ತನಾದ ನಾನು ವರ್ಷಕ್ಕೆ ಎರಡು ಬಾರಿಯಾದರೂ ಮಂತ್ರಾಲಯಕ್ಕೆ ಹೋಗಿ ರಾಯರ ವೃಂದಾವನದ ದರ್ಶನ ಪಡೆಯುತ್ತೇನೆ ಮತ್ತು ನನ್ನ ರಾಜಕೀಯ ಜೀವನ ಯಶಸ್ವಿಯಾಗುವಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗೃಹ ಕೂಡ ಇದೆ ಎಂದ ಅವರು ಅಥಣಿ ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿಗಾಗಿ ನಾನು ಸದಾ ಬದ್ಧನಾಗಿರುವೆ ಎಂದರು.
ರಾಘವೇಂದ್ರ ಸ್ವಾಮಿ ಮಠದ ವಿಶ್ವಸ್ಥ ಮಂಡಳಿಯ ಅನೀಲರಾವ ದೇಶಪಾಂಡೆ (ಸರಾಫ), ಅನೀಲ ದೇಶಪಾಂಡೆ ( ಹಿಡಕಲ್), ಎಲ್.ವ್ಹಿ.ಕುಲಕರ್ಣಿ, ರಾಜು ಪಾಟೀಲ, ಶ್ರೀನಿವಾಸಾಚಾರ್ಯ ಜೋಶಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಗೌರವಿಸಿದರು. ಧುರೀಣರಾದ ಶ್ರೀರಾಮ ಕಟ್ಟಿ, ಅಜಿತ ಇನಾಮದಾರ, ಸುಧೀಂದ್ರ ಬಾದರಾಯಣಿ, ವಾಸುದೇವ ಕುಲಕರ್ಣಿ, ಸೌರಭ ಮಾಶ್ಯಾಳ, ವೆಂಕಟೇಶ ದೇಶಪಾಂಡೆ, ಅನೀಲ ಕುಲಕರ್ಣಿ, ದೀಪಕ್ ಟಿಕಾರೆ, ವೆಂಕಟೇಶ ಕುಲಕರ್ಣಿ, ಅಥರ್ವ ದೇಶಪಾಂಡೆ, ಶ್ರೀಹರಿ ಕುಲಕರ್ಣಿ, ಅಜಯ ದೇಶಪಾಂಡೆ, ಭಾರ್ಗವ ಕೊಕಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ನಿಮಿತ್ಯ ಸಾವಿರಾರು ಭಕ್ತರು ಅನ್ನ, ಪ್ರಸಾದ ಸ್ವೀಕರಿಸಿದರು. ಸಂಜೆ ಬೆಂಗಳೂರಿನ ಅನುರಾಧಾ .ಎ. ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 