ಅಂಜುಮನ್ ಇಸ್ಲಾಂ ಸಮಿತಿಯ ವೈಭವ ಮರುಸ್ಥಾಪನೆಗೆ ಬದ್ಧ: ಅಭ್ಯರ್ಥಿಗಳ ಭರವಸೆ
Committed to restoring the glory of the Anjuman-e-Islam Committee: Candidates' assurance
ಮುದ್ದೇಬಿಹಾಳ 31 : ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ ಸ್ಥಾಪಿಸುವ ಯತ್ನ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕಮೀಟಿಗೆ ಸ್ಪರ್ಧಿಸಿರುವ ಅಬ್ದುಲಗಫೂರ ಮಕಾನದಾರ ಹೇಳಿದರು. ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1936ರಲ್ಲಿ ಇಲ್ಲಿನ ಅಂಜುಮನ್ ಸಂಸ್ಥೆಯನ್ನು ಹಿರಿಯರು ಹುಟ್ಟು ಹಾಕಿದ್ದಾರೆ.
ಅಂಜುಮನ್ ಸಂಸ್ಥೆಯ ಬೆಳವಣಿಗೆಯಲ್ಲಿ ಹಿಂದೂ ಬಾಂಧವರ ಸಹಕಾರವೂ ಇತ್ತು.ಆದರೆ ಕಾರಣಾಂತರಗಳಿಂದ ಸಂಸ್ಥೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಹೊಸಬರು, ಒಳ್ಳೆಯವರ ಆಯ್ಕೆಗೆ ಮತದಾರರು ಮುಂದಾಗಬೇಕು ಎಂದು ಮನವಿ ಮಾಡಿದರು. ಇನ್ನೊರ್ವ ಅಭ್ಯರ್ಥಿ, ಜನರಕೂಗು ವಾಹಿನಿ ಸಂಸ್ಥಾಪಕ ಗುಲಾಮ್ಮೊಹ್ಮದ್ ವೈ.ದಫೇದಾರ ಮಾತನಾಡಿ, ಮುದ್ದೇಬಿಹಾಳದ ಅಂಜುಮನ್ ಸಂಸ್ಥೆಯ ಚುನಾವಣೆಯನ್ನು ಶಾಂತ ರೀತಿಯಲ್ಲಿ ಮಾದರಿಯಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ. ಸಂಸ್ಥೆಯಡಿ ಆಸ್ಪತ್ರೆ,ಅಂಜುಮನ್ ಶಾಲೆ, ಮಳಿಗೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಸಮಾಜದ ಬಾಂಧವರಿಗಾಗಿ ಕಾರ್ಯಗತಗೊಳಿಸಬೇಕಾಗಿದೆ.
ಸಮಾನ ಮನಸ್ಕರೆಲ್ಲ ಸೇರಿಕೊಂಡು ಸಂಸ್ಥೆಯ ಅಭಿವೃದ್ಧಿಗೆ ಆಸರೆಯಾಗುವವರನ್ನು ಆಯ್ಕೆ ಮಾಡುವಂತೆ ಮತದಾರರಲ್ಲಿ ವಿನಂತಿಸುವುದಾಗಿ ಹೇಳಿದರು. ಅಭ್ಯರ್ಥಿ ಅಲ್ಲಾಭಕ್ಷ್ಯ ದೇಸಾಯಿ, ಮುಖಂಡರಾದ ಮಹೆಬೂಬ ಮುಲ್ಲಾ, ಬಾಪ್ ಢವಳಗಿ, ಮಹೆಬೂಬ ಹಡಲಗೇರಿ ಸಂಸ್ಥೆಯ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಡಾ.ಯಾಸೀನ್ ಮುಲ್ಲಾ, ಅಬ್ದುಲಸಲಾಂ ಮುಲ್ಲಾ, ಹುಸೇನ್ಭಾಷಾ ಹುಣಚಗಿ, ಯಾಸೀನ ಸೋಠೆ, ಮುರ್ತುಜ ದಖನಿ, ಹೆಸ್ಕಾಂ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯ ಸಿಕಂದರ್ ಜಾನ್ವೇಕರ ಅಸ್ಲಾಂ ಕಿತ್ತೂರ, ಅಲ್ಲಾಭಕ್ಷ್ಯ ಮಕಾನದಾರ, ಅಬ್ದುಲಮಜೀದ ಮಕಾನದಾರ, ಮೈನೂದ್ದೀನ ಹವಾಲ್ದಾರ, ಆರೀಫ ಮುಲ್ಲಾ, ರಹೆಮಾನ ದಫೇದಾರ, ಅಕ್ಬರ ದೇಸಾಯಿ, ಮೋದಿನ ಕಾರಗನೂರ ಸೇರಿದಂತೆ ಮೊದಲಾದವರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 