ಇಂದಿನಿಂದ ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹ
Commemoration week of Shri Madhavananda Prabhuji from today
ಶಿವಾಪೂರ(ಹ): ಸಮೀಪದ ಮುನ್ಯಾಳ ಗ್ರಾಮದ ಮಾಧವಾನಂದ ನಗರದ ಇಂಚಗೇರಿ ಶಾಖಾ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರಾಂತಿಯೋಗಿ ಸದ್ಗುರು ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಸಪ್ತಾಹ ಹಾಗೂ ಸಮುದಾಯ ಭವನದ ಉದ್ಘಾಟನ ಕಾರ್ಯಕ್ರಮ ಇಂದಿನಿಂದ ಎರಡು ದಿನಗಳ ಕಾಲ ಜರುಗಲಿದೆ.ದಿವ್ಯ ಸಾನಿಧ್ಯ ಮತ್ತು ಅಧ್ಯಕ್ಷತೆಯನ್ನು ಇಂಚಗೇರಿ ಮಠದ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಮಹಾರಾಜರು ವಹಿಸುವರು,ಸಾನಿಧ್ಯ ಡಾ.ಮ. ಘ.ಚ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಸದಾಶಿವ ಯೋಗೀಸ್ವರ ಮಠ ಮುನ್ಯಾಳ ,ಉದ್ಘಾಟಕರಾಗಿ ಅರಬಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಆಗಮಿಸುವರು ,ಕಾರ್ಯಕ್ರಮದ ನಿಮಿತ್ಯವಾಗಿ ವಿವಿಧ ಧಾರ್ಮಿಕ ಹಾಗೂ ಮಾಧವಾನಂದ ಪ್ರಭುಜಿ ನಾಟ್ಯ ಸಂಘ ಮುನ್ಯಾಳ ಇವರ ವತಿಯಿಂದ ರೈತ ಮನೆತನ ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ ಎಂದು ಪ್ರಕಟಣೆಯಲ್ಲಿ ಸಂಘಟಕರು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 