17ಕ್ಕೆ ಹೊಸಕೇರಿಮಠದಲ್ಲಿ ಶ್ರೀಗಳ ಪುಣ್ಯಸ್ಮರಣೆ ಮತ್ತು ಕಾರ್ತಿಕೋತ್ಸವ
Commemoration of the saint and Kartikotsava at Hosakeri Math at 17th
ಹಾವೇರಿ 14 : ಹಾವೇರಿಯಲ್ಲಿ 63 ಮಠಗಳಿದ್ದು ಮರಿಕಲ್ಯಾಣವೆಂದೇ ಪ್ರಸಿದ್ಧವಾಗಿದೆ, ಹುಕ್ಕೇರಿಮಠದ ಶಾಖಾ ಹೊಸಕೇರಿಮಠವು ನಾಗೇಂದ್ರನಮಟ್ಟಿಯಲ್ಲಿದ್ದು ಸರ್ವಧರ್ಮ ಸಮನ್ವಯ ಹಾಗೂ ಶ್ರದ್ಧೆ ಭಕ್ತಿಯ ಪರಮ ಪವಿತ್ರ ಸ್ಥಾನವಾಗಿದೆ.ಮಹಾಮಹಿಮರು ಶಿವಬಸವ ಶಿವಯೋಗಿಗಳು ಈ ಮಠದಲ್ಲಿ ತಪವಗೈದು ಪುಣ್ಯಭೂಮಿಯನ್ನಾಗಿಸಿದ್ದಾರೆ, ಎಲ್ಲಿ ನೋಡಿದರಲ್ಲಿ ಚಿಗುರಲೆಯಿಂದ ಕೂಡಿದ ಬಿಲ್ವಪತ್ರೆಯ ವನ ಕಣ್ಣಿಗೆೆ ಆನಂದವನ್ನುಂಟು ಮಾಡುತ್ತದೆ. ಈ ಮಠದ ಸ್ಥಾಪನೆ ಕುರಿತಂತೆ ಇಲ್ಲಿ ದೊರೆತ ಶಾಸನದಲ್ಲಿ ಶ್ರೀಂಗಳಸ ಶಕೆ 1719 ಸಾಧೂಛತ್ರ ಎಂದು ಉಲ್ಲೇಖಗೊಂಡಿದೆ. 300 ವರ್ಷಗಳ ಹಿಂದೆ ಬಸವಲಿಂಗ ಶಿವಯೋಗಿಗಳು ಲೋಕಸಂಚಾರ ಕೈಗೊಂಡಂಹ ಸಾಧೂ ಸತ್ಪುರುಷರಿಗೆ ಧರ್ಮಾರ್ಥವಾಗಿ ಪ್ರಸಾದ, ವಸತಿಗಳನ್ನು ಒದಗಿಸಲು ಮಠವನ್ನು ನಿರ್ಮಿಸಿದ್ದಾರೆ ಎನ್ನಬಹುದು.
ಈ ಮಾತನ್ನು ಪುಷ್ಟಿಕರಿಸಲು ಇಲ್ಲಿ ಹಾಳು ಬಿದ್ದ ಬಾವಿ ಹಾಗೂ ಅನುಷ್ಠಾನಕ್ಕೆ ಬಳಸುತ್ತಿದ್ದ ಹಳೆಯ ಗವಿಗಳು ಮೂಕ ಸಾಕ್ಷಿಗಳಾಗಿ ನಿಂತಿವೆ. ಬಸವಲಿಂಗ ಶಿವಯೋಗಿಗಳು ಮತ್ತು ಸಿದ್ಧಲಿಂಗ ಶಿವಯೋಗಿಗಳು ಶಿವಪೂಜಾ ತಪೋನಿಷ್ಠರು, ವಾಕ್‌ಸಿದ್ಧಿಪುರುಷರು ಆಗಿದ್ದರು. ಉಭಯ ಪೂಜ್ಯರು ತಮ್ಮ ಇಚ್ಛಾ ಅನುಸಾರ ಅವರ ಸಮಾಧಿಗಳನ್ನು ಈ ಮಠದಲ್ಲಿ ಮಾಡಿಸಿಕೊಂಡರು. ಇವರ ನಂತರ ವಿಭೂತಿ ಪುರುಷ ಶಿವಬಸವ ಶಿವಯೋಗಿಗಳು ಹುಕ್ಕೇರಿಮಠದ ಅಧಿಕಾರವನ್ನು ವಹಿಸಿಕೊಂಡರು. ಹೊಸಕೇರಿಮಠವು ಅನೇಕ ಪೂಜ್ಯರ ತಪೋಭೂಮಿಯಾಗಿದೆ. ಈ ಪ್ರಶಾಂತವಾದ ಹೊಸಕೇರಿಮಠದಲ್ಲಿ ಪ್ರತಿ ವರುಷ ಕಾರ್ತಿಕ ಮಾಸದಲ್ಲಿ ಉಭಯ ಶ್ರೀಗಳ ಪುಣ್ಯಸ್ಮರಣೆ ಮತ್ತು ಕಾರ್ತಿಕೋತ್ಸವ ಪ್ರಸ್ತುತ ಮಠಾಧ್ಯಕ್ಷರಾದ ಶ್ರೀ ಸದಾಶಿವ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಅದ್ಧೂರಿಯಾಗಿ ನೆರವೇರುತ್ತದೆ.
ಈ ವರ್ಷ ದಿ,17 ಸೋಮವಾರ ಬೆಳಗ್ಗೆ ಉಭಯ ಪೂಜ್ಯರ ಗದ್ದುಗೆಗೆ ಮಹಾರುದ್ರಾಭಿಷೇಕ ನಂತರ ಷಟಸ್ಥಲ ಧ್ವಜಾರೋಹಣ, ಸಂಜೆ ಪೂಜ್ಯ ಸದಾಶಿವ ಮಹಾಸ್ವಾಮಿಗಳವರ ರುದ್ರಾಕ್ಷಿ ತುಲಾಭಾರ, ಕಾರ್ತಿಕೋತ್ಸವ ಹಾಗೂ ಮಹಾಪ್ರಸಾದ ನೆರವೇರುವುದು. ಕಾರಣ ಸರ್ವ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕೆಂದು ರಾಜಯೋಗಿ ಶಿವಬಸವ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 