ಮಹಾರಾಣಾ ಪ್ರತಾಪಸಿಂಹರ ಜೀವನ-ಸಾಧನೆಗಳ ಸ್ಮರಣೆ

ಮಹಾರಾಣಾ ಪ್ರತಾಪಸಿಂಹರ ಜೀವನ-ಸಾಧನೆಗಳ ಸ್ಮರಣೆ   Commemoration of the life and achievements of Maharana Pratap Singh

ಲೋಕದರ್ಶನ ವರದಿ 

ಬೆಟಗೇರಿ17 :  ನಗರದ  ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಾಷ್ಟ್ರವೀರ ಪುರುಷ ಮಹಾರಾಣಾ ಪ್ರತಾಪಸಿಂಹರ 486ನೇ ಜಯಂತಿಯನ್ನು ಆಚರಿಸಲಾಯಿತು. ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ  ಗಣೇಶಸಿಂಗ್ ಬ್ಯಾಳಿಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಸಿ ಪುಷ​‍್ಾರೆ್ಪಣ ಮಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಸ್‌.ಎಂ. ಉಳ್ಳಾಗಡ್ಡಿ, ಪ್ರೌಢಶಾಲಾ ವಿಭಾಘದ ಮುಖ್ಯೋಪಾಧ್ಯಾಯರಾದ ಎಸ್‌.ಎಸ್‌. ಬಡಿಗೇರ ಹಾಗೂ ಶಿಕ್ಷಣ ಸಂಸ್ಥೆಯ  ಸಮಸ್ತ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.