ದಿ. 10 ಶನಿವಾರದಂದು ಹಾಸ್ಯರಸಾಯನ ಕಾರ್ಯಕ್ರಮ

Comedy Rasayana program on Saturday

ಬೆಳಗಾವಿ 8: ನಗರದ ಹಾಸ್ಯಕೂಟ ಮತ್ತು ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 10 ಶನಿವಾರದಂದು ಸಾ. 4.30ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಾಸ್ಯ ರಸಾಯನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ಅರವಿಂದ ಹುನಗುಂದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.   

ಪ್ರಮುಖ ನಗೆಮಾತುಗಾರರಾಗಿ ಜಿ. ಎಸ್‌. ಸೋನಾರ ಅವರು ಆಗಮಿಸಲಿದ್ದಾರೆ. ಲೇಖಕ ಚಿದಂಬರ ಮುನವಳ್ಳಿ ನಗೆಪ್ರಸಂಗಗಳನ್ನು ಹಂಚಿಕೊಳ್ಳಲಿದ್ದಾರೆ. ರಾಚಂದ್ರ ಕಟ್ಟಿಯವರು ಉಪಸ್ಥಿತರಿರುತ್ತಾರೆ. ಪ್ರಾಯೋಜಕತ್ವವನ್ನು ಡಾ. ಪಿ. ಜಿ. ಪಡಗುರಿ ಅವರು ವಹಿಸಿಕೊಂಡಿದ್ದಾರೆ. ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸುನಂದಾ ಹಾಲಬಾವಿ, ಕೆ. ತಾನಾಜಿ, ಬಸವರಾಜ ಗಾರ್ಗಿ, ಸತ್ಯನಾರಾಯಣ, ರವಿ ದಂಡಗಿ ಹಾಸ್ಯ ಕವನ, ಹನಿಗವನ, ಅಣಕು ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ.