ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ: ಶಶಿಕಲಾ ಮೇಟಿ

ಭಗತ್ ಸಿಂಗ್ ಕನಸು ಕಂಡ ಭಾರತ ಕಟ್ಟಲು ಮುಂಬನ್ನಿ: ಶಶಿಕಲಾ ಮೇಟಿ Come forward to build the India that Bhagat Singh dreamed of

ಲೋಕದರ್ಶನ ವರದಿ 

ಧಾರವಾಡ 23: ಸ್ವಾತಂತ್ರ ಸಂಗ್ರಾಮನ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ 95ನೇ ಹುತಾತ್ಮ ದಿನದ ಅಂಗವಾಗಿ ಇಂದು ಎಐಡಿಎಸ್‌ಓ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ನಗರದ ಕೆ ಸಿ ಡಿ ಮೈದಾನ, ಆರ್ ಎನ್ ಶೆಟ್ಟಿ ಮೈದಾನ ಸೇರಿದಂತೆ ಹಲವಾರು ಶಾಲೆಗಳು,ಹಳ್ಳಿ, ಕೊಳಗೇರಿಗಳಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಯಿತು. 

ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿಗಳಾದ ಶಶಿಕಲಾ ಮೇಟಿ ಮಾತನಾಡಿ ಕಳೆದ 120 ದಿನಗಳಿಂದ ಕೆ.ಪಿ.ಎಸ್ ಮ್ಯಾಗ್ನೆಟ್ ನೀತಿಯ  ವಿರುದ್ಧ ವಿದ್ಯಾರ್ಥಿ ಪೋಷಕರು  ಭದ್ರ ಕೋಟೆಯಂತೆ ನಿಂತು ಹೋರಾಟವನ್ನು ಕಟ್ಟುತ್ತಿದ್ದಾರೆ ನಾಲ್ಕು ತಿಂಗಳುಗಳಿಂದ ಜನರ ಪ್ರತಿಭಟನೆಯ ಧ್ವನಿ ಕರ್ನಾಟಕದ ಬೀದಿ ಬೀದಿಗಳಲ್ಲಿ  ಪ್ರತಿಧ್ವನಿಸುತ್ತಿದೆ.ಇಂತಹ ಸಂದರ್ಭದಲ್ಲಿ  ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ ಹುತಾತ್ಮ ದಿನ ನಮ್ಮ ಮುಂದೆ ಬಂದಿದೆ.ಮುಂದಿನ ಹಂತದ ಹೋರಾಟಕ್ಕೆ ಸ್ಫೂರ್ತಿ ತುಂಬಲು, ಜಿಲ್ಲೆಯ ಜನತೆ ಶಹೀದ್‌-ಎ-ಅಜಮ್ ಭಗತ್ ಸಿಂಗ್ ಅವರ ಅದ್ವಿತೀಯ ಸಂಘರ್ಷದ ಕಡೆ ನೋಡಬೇಕಿದೆ.ಈ ಹಿನ್ನಲೆಯಲ್ಲಿ ಮಾರ್ಚ್‌ 21, 22 ಮತ್ತು 23 ರಂದು, ಅವರ ಪರಮೋಚ್ಚ ಬಲಿದಾನದ ಸ್ಮರಣಾರ್ಥವಾಗಿ, ನಾವು ಪ್ರತಿಯೊಂದು ಹಳ್ಳಿಯನ್ನು ಪ್ರತಿರೋಧದ ಕೋಟೆಯನ್ನಾಗಿ ಪರಿವರ್ತಿಸಬೇಕು. ಇದು ಕೇವಲ ಸಾಂಕೇತಿಕ ಗೌರವ ಸಲ್ಲಿಸುವ ಸಮಯವಲ್ಲ, ಬದಲಾಗಿ ‘ಪೂರ್ಣ ಪ್ರತಿರೋಧದ ಪ್ರತಿಜ್ಞೆ’ ಮಾಡುವ ಸಮಯ. “ಕ್ರಾಂತಿಯ ಖಡ್ಗವು ವೈಚಾರಿಕತೆಯ ಸಾಣೆಕಲ್ಲಿನ ಮೇಲೆ ಹರಿತಗೊಳ್ಳುತ್ತದೆ” ಎಂದು ಭಗತ್ ಸಿಂಗ್ ನಮಗೆ ನೆನಪಿಸಿದ್ದರು.ಮಹಾನ್ ಕ್ರಾಂತಿಕಾರಿಯ ವಿಚಾರಗಳನ್ನು ಬಳಸಿಕೊಂಡು ನಮ್ಮ ಸಂಕಲ್ಪವನ್ನು ಹರಿತಗೊಳಿಸಬೇಕು. ಕರ್ನಾಟಕದ ಅತ್ಯಂತ ದೂರದ ಮೂಲೆಯಲ್ಲಿರುವ ಬಡ ಮಗುವಿನ ಶಿಕ್ಷಣದ ಹಕ್ಕನ್ನು ಯಾವ ನೀತಿಯೂ ಕಿತ್ತುಕೊಳ್ಳದಂತೆ ನಾವು ನೋಡಿಕೊಳ್ಳಬೇಕು. 

ಕೆ.ಪಿ.ಎಸ್ ಮ್ಯಾಗ್ನೆಟ್ ನೀತಿಯು ಭಗತ್ ಸಿಂಗ್ ಅವರು ಯಾವ ಉದ್ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರೋಶ್ರಿಅಂದರೆ ಮನುಷ್ಯನಿಂದ ಮನುಷ್ಯನ ಶೋಷಣೆಯಿಲ್ಲದ ಸಮಾಜಶ್ರಿಆ ದೃಷ್ಟಿಕೋನದ ಮೇಲಿನ ನೇರ ದಾಳಿಯಾಗಿದೆ. ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವ ಬದಲು “ಅನುಕೂಲಕ್ಕೆ ತಕ್ಕಂತೆ ಬಳಸುವ ಸಂಪನ್ಮೂಲ” ಎಂದು ನೋಡುವ ಮೂಲಕ, ರಾಜ್ಯ ಸರ್ಕಾರವು ಒಂದು ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಕೇವಲ ಕೆಲವು “ಕೇಂದ್ರಗಳು”  ಮಾತ್ರ ಉಳಿಯುತ್ತವೆ ಮತ್ತು  ಹಳ್ಳಿಯ ಶಾಲೆಗಳು ನಶಿಸಿಹೋಗುತ್ತವೆ. ಅವರ ಎಚ್ಚರಿಕೆಯನ್ನು ನಾವು ನೆನಪಿಸಿಕೊಳ್ಳಲೇಬೇಕು: “ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ ಮತ್ತು ಬದಲಾವಣೆಯ ಕಲ್ಪನೆಯನ್ನು ಕೇಳಿಯೇ ನಡುಗುತ್ತಾರೆ. ಈ ಜಡ ಮನೋಭಾವದ ಜಾಗದಲ್ಲಿ ಕ್ರಾಂತಿಕಾರಿ ಚೈತನ್ಯ ಬರಬೇಕಿದೆ.” ನಮ್ಮ ಶಾಲೆಗಳ ಮುಚ್ಚುವಿಕೆಗೆ ಒಗ್ಗಿಕೊಳ್ಳಲು ನಾವು ನಿರಾಕರಿಸುತ್ತೇವೆ. ಆಡಳಿತಾತ್ಮಕ ಅನುಕೂಲಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಗೊಡುವ ಈ “ಜಡ ಮನೋಭಾವ”ವನ್ನು ನಾವು ಒಪ್ಪುವುದಿಲ್ಲ ಎಂದು ಘೋಷಿಸುವ ಸಮಯ ಇದಾಗಿದೆ ಎಂದು ಹೇಳಿದರು. 

ಮುಂದುವರೆದು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನವು ನಮಗೆ ಅಚಿತಿಮ ವಿಜಯದತ್ತ ಸಾಗಲು ಸ್ಫೂರ್ತಿ ನೀಡಲಿ. ಕೆ.ಪಿ.ಎಸ್ ಮ್ಯಾಗ್ನೆಟ್ ನೀತಿಯನ್ನು ಹಿಂಪಡೆಯುವವರೆಗೆ ಮತ್ತು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವವರೆಗೆ  ಹಿಂದೆ ಸರಿಯುವುದಿಲ್ಲ ಎಂದು ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.  

ಕಾರ್ಯಕ್ರಮಕದಲ್ಲಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರಾದ ಸಿಂಧೂ ಕೌದಿ, ಕಾರ್ಯಕರ್ತರಾದ ಶಾಂತೇಶ್,ಸಿದ್ದು ಹಾಗೂ ಮಲ್ಲೇಶ್ ಕಟಗಿ, ಬಸವರಾಜ್ ಸೂರ್ಯವಂಶಿ, ಈರ​‍್ಪ ಮೇಲಿನ ಮನಿ, ಮುದುಕಪ್ಪ ಮೇಲಿನಮನಿ ನೂರಾರು ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು.