2 ವರ್ಷಗಳ ಸತತ ಪ್ರಯತ್ನದಿಂದ ಯುದ್ಧ ಟ್ಯಾಂಕರ್ ತರಲಾಗಿದೆ: ಶಾಸಕ ಪ್ರಕಾಶ ಕೋಳಿವಾಡ
Combat tanker brought after 2 years of continuous efforts: MLA Prakash Koliwada
ರಾಣಿಬೆನ್ನೂರು 16: ಸ್ವಾತಂತ್ರ ಭಾರತದ ಗತ ವೈಭವವನ್ನು ಪ್ರತಿಬಿಂಬಿಸುವ ಹಾಗೂ ನಮ್ಮ ಯೋಧರ ಸಾಮರ್ಥ್ಯ ಇಂದಿನ ಪೀಳಿಗೆಗೆ ತಿಳಿಸುವ ಸದುದ್ದೇಶದಿಂದ ಸತತ 2 ವರ್ಷಗಳ ಕಾಲ ಪ್ರಯತ್ನಿಸಿ ತಾಲೂಕಿನ ಸರ್ವರ ಗಮನಕ್ಕೆ ತಂದು ಪಕ್ಷಬೇಧ ಮರೆತು ಜ್ಯಾತ್ಯಾತೀತವಾಗಿ ಎಲ್ಲರ ಸಹಕಾರದಿಂದ ರಾಣಿಬೆನ್ನೂರು ನಗರಕ್ಕೆ ಯುದ್ಧದ ಟ್ಯಾಂಕರ್‌ನ್ನು ತರಲಾಗಿದ್ದು ಅ.15 (ಇಂದು) ರಂದು ಮಿನಿವಿಧಾನಸೌಧದ ಎದುರು ಪ್ರತಿಷ್ಠಾಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿನ ಮಿನಿವಿಧಾನಸೌಧದ ಸಭಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರಗಳ ಎಲ್ಲಿಯೂ ಪ್ರತಿಷ್ಠಾಪಿಸಲಾಗದ ಯುದ್ಧ ಟ್ಯಾಂಕರ್‌ನ್ನು ತಾಲೂಕಿನಲ್ಲಿ ಪ್ರತಿಷ್ಠಾಪಿಸಿ ದೇಶದ ಸ್ವಾಭಿಮಾನ ಹಾಗೂ ಇತಿಹಾಸ ಸೃಷ್ಠಿಸುವ ಕನಸು ಇಂದು ನೆರವೇರಲಿದೆ ಎಂದರು.
1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಈ ಶಿವಶಕ್ತಿ ಯುದ್ಧ ಟ್ಯಾಂಕರ್ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಪಾಕಿಸ್ತಾನವನ್ನು ಸೆದೆಬಡಿಯುವಲ್ಲಿ ಯಶಸ್ವಿಯಾಗಿತ್ತು. ಅಂತಹ ಯುದ್ಧದ ಟ್ಯಾಂಕರ್‌ನ್ನು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಹೆಮ್ಮೆಯನಿಸುತ್ತಿದೆ. ಈ ಟ್ಯಾಂಕರ್‌ನ್ನು ರಾಣಿಬೆನ್ನೂರಿಗೆ ತರಲು ನನ್ನ ಸ್ನೇಹಿತ ಹಾಗೂ ನಿವೃತ್ತ ಸೇನಾನಿ ಹಿರೇಮಠ ಅವರ ಪ್ರಯತ್ನ ಮತ್ತು ತಾಲೂಕಿನ ಎಲ್ಲಾ ಪಕ್ಷಗಳ ಮುಖಂಡರ ಸಹಮತದೊಂದಿಗೆ ತರಲಾಗಿದೆ. ಇದು ಇತಿಹಾಸ ಪ್ರಸಿದ್ಧವಾಗಿದೆ ಎಂದರು.
ಶಾಸಕರ ಅನುದಾನ 15 ಲಕ್ಷ ಮತ್ತು ನಗರಸಭೆಯ ಅನುದಾನ 9 ಲಕ್ಷದ 85 ಸಾವಿರ ವ್ಯಯ ಮಾಡಿ ಸಾಗಾಣಿಕೆಯ ವೆಚ್ಚ ಮತ್ತು ಪ್ರತಿಷ್ಠಾಪಿಸುವ ಪ್ರದರ್ಶನ ಕಟ್ಟೆಯನ್ನು ಹಾಗೂ ಪ್ರೇಕ್ಷಕರ ವೀಕ್ಷಣೆಗಾಗಿ ವಿದ್ಯುತ್ ದ್ವೀಪಗಳ ಅಲಂಕಾರ ಸೇರಿದಂತೆ ಭಾರತ ನಡೆಸಿದ ಯುದ್ಧಗಳ ಪರಿಚಯಿಸುವ ಶಿಲನ್ಯಾಸಗಳನ್ನು ಅಳವಡಿಸಲಾಗಿದೆ. ನಾಳೆ ಪ್ರತಿಷ್ಠಾಪನೆಗೊಳ್ಳುವ ಯುದ್ಧದ ಟ್ಯಾಂಕರ್ ಮೆರವಣಿಗೆ ಹಾಗೂ ಪ್ರತಿಷ್ಠಾಪನೆಯ ಕಾರ್ಯಕ್ರಮಗಳಿಗೆ ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರು. ಹಾಲಿ-ಮಾಜಿ ಶಾಸಕರುಗಳು, ನಗರಸಭೆಯ ಸರ್ವ ಸದಸ್ಯರುಗಳು, ಸಾರ್ವಜನಿಕರು ನಿವೃತ್ತ ಯೋಧರು, ಚಿಂತಕರು, ಸಾಹಿತಿಗಳು, ಶಿಕ್ಷಕರು, ಎಲ್ಲಾ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ತಾಲೂಕಿನ ಭವ್ಯ ಇತಿಹಾಸ ನಿರ್ಮಿಸಲು ಸಹಕಾರಿಯಾಗಬೇಕೆಂದು ಮನವಿ ಮಾಡಿದರು.
ತಾಲೂಕಿನ ಅರೇಮಲ್ಲಾಪುರ ಗ್ರಾಮದ ಬಳಿ ಇರುವ ಬೆಟ್ಟಮಲ್ಲಪ್ಪನ ಗುಡ್ಡದ ಪ್ರವಾಸಿಗರಿಗಾಗಿ ಸಫಾರಿ ಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿರುವ ದೊಡ್ಡಕೆರೆಗೆ ತೆರಳಿ ಅಲ್ಲಿ ಪ್ರವಾಸಿಗರಿಗೆ ಬೋಟ್ ಚಾಲನೆ ನೀಡಲಾಗುವುದು. ಬನ್ನಿ, ಭಾಗವಹಿಸಿ ರಾಣಿಬೆನ್ನೂರು ಹೆಮ್ಮೆಯ ಇತಿಹಾಸ ನಿರ್ಮಿಸೋಣ ಎಂದು ಪ್ರಕಾಶ ಕೋಳಿವಾಡ ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 