ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸಾಮೂಹಿಕ ಹೊಣೆಗಾರಿಕೆ ಅಗತ್ಯ : ಅಂಬಿಗೇರ
Collective responsibility is necessary for good student results: Ambigera
ಶಿಗ್ಗಾವಿ 18 : ತಾಲೂಕಿನ ಶಿಕ್ಷಕರು ಮುಂದಿನ 60 ದಿನಗಳಲ್ಲಿ ಹೆಚ್ಚಿನ ಶ್ರಮವಹಿಸಿ ಆಸಕ್ತಿಯಿಂದ ಕೆಲಸ ಮಾಡಿದರೆ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿರುವ 3165 ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ತಾಲೂಕಿನ ಪ್ರತಿಯೊಂದು ಶಾಲೆ ಯಿಂದ ಶೇ.100 ಫಲಿತಾಂಶ ನೀರೀಕ್ಷಿಸಲಾಗುತ್ತಿದೆ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಹೇಳಿದರು. ಪಟ್ಟಣದ ಜೆಎಂಜೆ ಮರು ನಡೆದ ಎಜ್ಯು ಕನೆಕ್ಟ್ ಕಾರ್ಯಾಗಾರದಲ್ಲಿ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ನಾವು ನೀಡುವ 2025-26ನೇ ಸಾಲಿನ ಫಲಿತಾಂಶ ಕೇವಲ ಅಂಕಗಳಾಗಿರದೇ, ಅದು ಮಗುವಿನ ಭವಿಷ್ಯದ ಬಾಗಿಲು ಆಗಬೇಕು. ಪ್ರತಿ ಮಗು ಲಿಖಿತ ಪರೀಕ್ಷೆಯಲ್ಲಿ ಕನಿಷ್ಟ 40 ಅಂಕಗಳನ್ನು ಪಡೆಯುವಂತಾಗಬೇಕು. ತಾಲೂಕಿನಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಇದೆ.
ಇಲಾಖೆ ಪ್ರತಿ ಶಿಕ್ಷಕರಿಗೂ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದತ್ತು ಪಡೆದಿರುವ ತಾಲೂಕಿನ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಶಿಕ್ಷಕರ ಕಾರ್ಯ ಫೋನ್ ಮೂಲಕ ಸಂಪರ್ಕಿಸಿ ಓದಲು ಸೂಚಿಸುವುದಕ್ಕೆ ಮಾತ್ರ ಮೀಸಲಾಗಿರದೇ, ನಿಯಮಿತವಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪ್ರತಿ ವಿಷಯದಲ್ಲಿ ಮಕ್ಕಳು ಸಾಧಿಸಿದ ಪ್ರಗತಿ ಪರೀಶೀಲಿಸಿ, ಪ್ರೋತ್ಸಾಹಿಸಬೇಕು ಎಂದರು. ತಾಲೂಕು ಪಂಚಾಯತ್ ಇಒ ಮಂಜುನಾಥ ಸಾಳುಂಕೆ ಮಾತನಾಡಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ನಮ್ಮ ತಾಲೂಕು 4ನೇ ಸ್ಥಾನ ಪಡೆದುಕೊಂಡಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಸ್ಥಾನದಲ್ಲಿ ಬರುವಂತೆ ತಾಲೂಕಿನ ಪ್ರತಿಯೊಬ್ಬ ಶಿಕ್ಷಕರು ವಿಷಯವಾರು ಹೆಚ್ಚಿನ ಒತ್ತುಕೊಟ್ಟು, ಮಕ್ಕಳು ಹೆಚ್ಚಿನ ಪ್ರಗತಿ ಸಾಧಿಸುವಂತೆ ಶ್ರಮ ವಹಿಸಬೇಕು. ಶಿಕ್ಷಕರು ವಿದ್ಯಾರ್ಥಿ ಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಿ, ಅವರ ಕಲಿಕೆಯಲ್ಲಿನ ಭೌತಿಕ,ಮಾನಸಿಕ ಸಮಸ್ಯೆಗಳನ್ನು ಗುರುತಿಸಿಕೊಂಡು ಸೂಕ್ತ ಪರಿಹಾರೋಪಾಯ ಗಳನ್ನು ನೀಡುವ ಮೂಲಕ ನೈತಿಕ ಬೆಂಬಲ ನೀಡಿದರೆ ಹೆಚ್ಚಿನ ಫಲಿತಾಂಶ ನೀರೀಕ್ಷಿಸಲು ಸಾಧ್ಯ ಎಂದು ಹೇಳಿದರು.
ಕ್ಷೇತ್ರದಲ್ಲಿ ಕೆಲ ವಸತಿ ಶಾಲೆಗಳ ಫಲಿತಾಂಶ ಅತ್ಯುತ್ತಮವಾಗಿದ್ದು, ಆಂಗ್ಲಮಾಧ್ಯಮ ಶಾಲೆಗಳ ಫಲಿತಾಂಶಕ್ಕಿಂತ, ಕನ್ನಡ ಮಾಧ್ಯಮ ಶಾಲೆಗಳ ಫಲಿತಾಂಶ ಕಡಿಮೆ ಇದೆ. ಉರ್ದು ಶಾಲೆಗಳ ಫಲಿತಾಂಶ ಅತ್ಯಂತ ಕೆಳಹಂತದಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಅತ್ಯಂತ ಜಾಣರಿರುವ ಕಾರಣಕ್ಕೆ ಸರ್ಕಾರಿ ನೌಕರಿ ಪಡೆದವರಾಗಿದ್ದು, ಅವರು ನೀಡುವಂತ ಫಲಿತಾಂಶ ತೃಪ್ತಿಕರವಾಗಿಲ್ಲ. ನಾನು ಕ್ಷೇತ್ರದ ಬಹುತೇಕ ಶಾಲೆಗಳಿಗೆ ಭೇಟಿ ನೀಡಿ ಪರೀಶೀಲಿಸಿ ಉತ್ತಮ ಫಲಿತಾಂಶ ನೀಡುವಂತೆ ಶಿಕ್ಷಕರಿಗೆ ಹೇಳಿದ್ದೇನೆ. ವಿದ್ಯಾರ್ಥಿಗಳು ಭಯಮುಕ್ತರಾಗಿ ಪರೀಕ್ಷೆ ಎದುರಿಸಲು ಇಲಾಖೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿದೆ.ಯಾಸೀರಖಾನ್ ಪಠಾಣ ಶಾಸಕ
ಹೊಸ ಪ್ರಯೋಗ: ತಾಲೂಕಿನ ಎರಡೆರಡು ಪ್ರೌಢಶಾಲೆಗಳನ್ನು ಸಂಯೋಜನೆ ಮಾಡುವ ಮೂಲಕ ಪರಸ್ಪರ ಶಾಲೆಯ ವಿಷಯವಾರು ಶಿಕ್ಷಕರನ್ನು ಅದಲು ಬದಲು ಮಾಡಿ, ಮಕ್ಕಳೊಂದಿಗೆ ಸಮಾಲೋಚನೆಗೆ ಅವಕಾಶ ಕಲ್ಪಿಸಿ, ವಿಷಯದಲ್ಲಿನ ಮಕ್ಕಳ ಗೊಂದಲ ನಿವಾರಿಸುವ ಮತ್ತು ವಿಷಯವಾರು ವಿದ್ಯಾರ್ಥಿ ಮಾಡಿ, ಫಲಿತಾಂಶವನ್ನು ಉತ್ತಮಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. 2025-26ನೇ ಸಾಲಿನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಗೈರು ಪ್ರಮಾಣವನ್ನು ತಗ್ಗಿಸಲು ವಿಶೇಷ ಪ್ರಯತ್ನ ಮಾಡುತ್ತಿರುವುದು ಎಲ್ಲರ ಶ್ಲಾಘನೆಗೆ ಕಾರಣವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೌಕರ ಸಂಘದ ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ, ಕವಿತಾ ಮಠದ, ಶೇಖರ ಹಂಚಿನಮನಿ, ಗೀತಾಂಜಲಿ ತೆಪ್ಪದ, ಶ್ರೀನಿವಾಸ, ಅನಿಜಾಜನ್, ರಾಜಶೇಖರ ಹೆಸರೂರ, ಗುರುರಾಜ ಹುಚ್ಚಣ್ಣನವರ, ಶಬ್ಬಿರ ಮನಿಯಾರ,ಪಿ.ಎಫ್.ಕರಿಶಿವಣ್ಣವರ,ಉಮೇಶ ಎಸ್.ಆರ್ ,ಬಿ.ಎಸ್. ಹಿರೇಮಠ, ಅಬ್ದುಲ್ ಖಾದರ್ ಕಡೆಮನಿ, ಸುರೇಶ ಕ್ಷೌರದ ಸೇರಿದಂತೆ ತಾಲೂಕಿನ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 