ಪ್ರತಿಷ್ಠಿತ ಸಂಸ್ಥೆಗಳ ಸಹಯೋಗ ಮತ್ತು ಬೆಳವಣಿಗೆ
Collaboration and growth of prestigious institutions
ಲೋಕದರ್ಶನ ವರದಿ
ಸವಣೂರ 12: ತಾಲ್ಲೂಕಿನಲ್ಲಿ 20 ವರ್ಷಗಳ ಕಾಲ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ದಿ:ಶಿವಾನಂದ ಬಡಶೆಟ್ಟಿ ಅವರು 1967 ರಿಂದ 1970ರಲ್ಲಿ ಹುಬ್ಬಳ್ಳಿಯ ಶ್ರೀ ಜಗದ್ಗುರು ಗಂಗಾಧರ ಪ್ರೌಢ ಶಾಲೆಯಲ್ಲಿ ಶಿಕ್ಷಣ ಕಲಿತ ಸ್ಮರಣಾರ್ಥ ದಿ:ಶಿವಾನಂದ ಬಡಶೆಟ್ಟಿ ಅವರ ಧರ್ಮಪತ್ನಿಗಳಾದ ಶ್ರೀಮತಿ ಕವಿತಾ ಬಡಶೆಟ್ಟಿ ಅವರು 50 ಸಾವಿರ ರೂಪಾಯಿಗಳನ್ನು ಶಾಲೆಗೆ ದತ್ತಿನಿಧಿಯಾಗಿ ನೀಡಿದರು.ಪ್ರತಿ ವರ್ಷ ದತ್ತಿನಿಧಿಯಿಂದ ಬಂದ ಬಡ್ಡಿ ಮೂತ್ತವನ್ನು ದೈಹಿಕ ಶಿಕ್ಷಣದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲು ನೀಡುವ ಉದ್ದೇಶ ಹೊಂದಿದ್ದಾರೆ.
ಇದೇ ಅವಧಿಯಲ್ಲಿ ಹುಬ್ಬಳ್ಳಿಯ ಮೂರು ಸಾವಿರಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ಆರ್ಶಿವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಕವಿತಾ ಬಡಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯರಾದ ಅಂಜಲಿ ಕರಬಸಣ್ಣನವರ,ಹಿರಿಯ ಸಾಹಿತಿಗಳಾದ ಎಸ್.ಆರ್.ಆಶಿ,ಶಿಕ್ಷಣ ಪ್ರೇಮಿಗಳಾದ ಧಾರವಾಡ ಶೆಟ್ಟರು,ಅಮ್ಮಾ ಸಂಸ್ಥೆಯ ಸಂಸ್ಥಾಪಕರಾದ ನಿಂಗಪ್ಪ ಆರೇರ,ಶಿಕ್ಷಕರಾದ ಎಸ್.ಆರ್.ಗಂಗಾವತಿ, ಎಸ್.ವ್ಹಿ. ಪಟ್ಟಣಶೆಟ್ಟಿ,ಗುರು ಹಿರೇಮಠ ಹಾಗೂ ಗುರು ಬಳಗದವರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 