ಅಡುಗೆ ಮನೆಯಲ್ಲಿ ನಾಗರಹಾವು; ಸುರಕ್ಷಿತ ಸೆರೆ

ಅಡುಗೆ ಮನೆಯಲ್ಲಿ ನಾಗರಹಾವು; ಸುರಕ್ಷಿತ ಸೆರೆ Cobra in the kitchen; safely captured.

ಲೋಕದರ್ಶನ ವರದಿ

ಮುಂಡಗೋಡ  ೨೪: ತಾಲೂಕಿನ ಅಗಡಿ ಗ್ರಾಮದ ಪ್ರವೀಣ ಸಿಂಗ್ ಕಿಲ್ಲೆದಾರ್ ಅವರ ಮನೆಯ ಅಡುಗೆ ಕೋಣೆಗೆ ನಾಗರಹಾವು ನುಗ್ಗಿ ಆತಂಕ ಸೃಷ್ಟಿಸಿತ್ತು. 

ವಿಷಯ ತಿಳಿದು ಇಂದೂರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುನೀತಾ ಅವರ ಸೂಚನೆಯ ಮೇರೆಗೆ ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಸ್ಥಳಕ್ಕೆ ಧಾವಿಸಿದರು. ಅಡುಗೆ ಮನೆಯಲ್ಲಿ ಅಡಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಮನೆಯವರು ಹಾಗೂ ಸ್ಥಳೀಯರಿಗೆ ಹಾವುಗಳ ಸಂರಕ್ಷಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.