ಜನಪದ ಕಲೆ, ಸಂಸ್ಕöÈತಿ ಉಳಿಸುವಲ್ಲಿ ಜಾತ್ರೆಗಳ ಪಾತ್ರ ಪ್ರಮುಖ: ಶಾಸಕ ವಿಶ್ವಾಸ ವೈದ್ಯ
Fairs play a pivotal role in preserving folk art and culture: MLA Vishwas Vaidya
ಯರಗಟ್ಟಿ ೨೪: ಸಮೀಪದ ರೈನಾಪುರ ಗ್ರಾಮದಲ್ಲಿ ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಅವರು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನ ಜನಪದ ಕಲೆ, ಸಂಸ್ಕöÈತಿ ಹಾಗೂ ಪರಂಪರೆಗಳನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಸಂಸ್ಕöÈತಿಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಜಾತ್ರೆ ಹಾಗೂ ಉತ್ಸವಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಗ್ರಾಮದ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಪರಸ್ಪರ ಬೆಳೆಸುವ ಹಾಗೂ ಜನಪದ ಸಂಸ್ಕöÈತಿಯನ್ನು ಜೀವಂತವಾಗಿಡುವ ಪ್ರಮುಖ ವೇದಿಕೆಗಳಾಗಿವೆ ಎಂದರು. ರೈತರು, ಕಾರ್ಮಿಕರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಸಾಮರಸ್ಯ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ ಮಾತನಾಡಿ, ಜನಪದ ಕಲೆ ಮತ್ತು ಸಾಹಿತ್ಯದ ಉಳಿವಿಗೆ ಇಂತಹ ಕಾರ್ಯಕ್ರಮಗಳು ಪ್ರಮುಖ ಹೆಜ್ಜೆಯಾಗಿವೆ. ಡೊಳ್ಳು, ತಾಳ ಹಾಗೂ ಹಿಮ್ಮೇಳದ ಗತ್ತು ಗ್ರಾಮೀಣ ಸೊಗಡಿನ ಭಕ್ತಿ ಮತ್ತು ಜೀವನದ ಮೌಲ್ಯಗಳನ್ನು ಸಾರುತ್ತದೆ. ಕರ್ನಾಟಕದ ಜನಪದ ಕಲೆ ಹಾಗೂ ಸಂಸ್ಕöÈತಿಯ ಪ್ರಮುಖ ಭಾಗವಾಗಿರುವ ಡೊಳ್ಳಿನ ಪದಗಳ ಕಾರ್ಯಕ್ರಮಗಳು ರಾಜ್ಯದ ವಿವಿಧೆಡೆ ಸಾಂಸ್ಕöÈತಿಕ ವೇದಿಕೆಗಳಲ್ಲಿ, ಹಬ್ಬ ಹಾಗೂ ಜಾತ್ರೆಗಳಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು. ಬೇಮೂಲ್ ನಿರ್ದೇಶಕ ಹಾಗೂ ಯರಗಟ್ಟಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಶಂಕರ ಇಟ್ನಾಳ ಮಾತನಾಡಿ, ಹಾಲುಮತ ಸಮಾಜದ ಕಲೆ, ಸಂಸ್ಕöÈತಿ ಹಾಗೂ ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಇಂತಹ ಜಾತ್ರಾ ಮಹೋತ್ಸವಗಳು ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯುವಜನತೆ ನಮ್ಮ ಜನಪದ ಕಲೆ ಮತ್ತು ಸಂಸ್ಕöÈತಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಲಿಕಸಾಬ್ ಭಾಗವಾನ, ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ, ಸಂತೋಷ ಹಾದಿಮನಿ, ವಿಠ್ಠಲಗೌಡ ದೇವರಡ್ಡಿ, ವೆಂಕಣ್ಣ ಕಳ್ಳಿಗುಡ್ಡಿ, ಛಾಯಪ್ಪ ಹುಂಡೇಕಾರ, ವಿಠ್ಠಲ ಹುಲಕುಂದ, ಎಸ್.ಎಫ್. ಸಿದ್ದನಾಳ, ಶಿವಪ್ಪ ಪಟ್ಟಣಶೆಟ್ಟಿ, ಮಹಾಂತೇಶ ಉಪ್ಪಿನ, ಲಕ್ಕಪ್ಪ ಸಣ್ಣಲಿಂಗಣ್ಣವರ, ಹಣಮಂತ ಸಿದ್ದನಾಳ, ಪಡೆಪ್ಪ ನರಗಟ್ಟಿ, ಕಲ್ಲಪ್ಪ ಕಡೇಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 