ಬೀಜಿಂಗ್, ಡಿಸೆಂಬರ್ 17 ಚೀನಾದ
ಗುಯಿ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಮಂಗಳವಾರ
ಮುಂಜಾನೆ ಸಂಭವಿಸಿದ ಅನಿಲ ಸ್ಫೋಟ ದುರಂತದಲ್ಲಿ
14 ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ.ಈ ದುರಂತದಲ್ಲಿ ಇಬ್ಬರು ಭೂಗರ್ಭದಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಅವರ ಪ್ರಕಾರ,
ಅನ್ಲಾಂಗ್ ಕೌಂಟಿಯ ಗುವಾಂಗ್ಲಾಂಗ್ ಕಲ್ಲಿದ್ದಲು ಗಣಿಯಲ್ಲಿ ಈ ಅಪಘಾತ ಸಂಭವಿಸಿದೆ.ಆ ಸಮಯದಲ್ಲಿ ಸುಮಾರು
23 ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು.7
ಜನ ಕಾರ್ಮಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಪಾರುಮಾಡಲಾಗಿದೆ
ಎಂದು ಅಧಿಕಾರಿಗಳು ಹೇಳಿದ್ದಾರೆ.