ಚಿಕ್ಕೋಡಿಯಲ್ಲಿ ಸಹ ಶಿಕ್ಷಕರ ಬಡ್ತಿ ಕೌನ್ಸೆಲಿಂಗ್ ಯಶಸ್ವಿ: ಡಿಡಿಪಿಐ ಸೀತಾರಾಮು
Co-teacher promotion counseling in Chikkodi successful: DDPI Seetharam
ಚಿಕ್ಕೋಡಿ 01 : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಮಾರು 20 ರಿಂದ 25 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಬಡ್ತಿ ಕೌನ್ಸೆಲಿಂಗ್ ಏಪ್ರಿಲ್ 29 ಮತ್ತು 30, 2026ರಂದು ಎರಡು ದಿನಗಳ ಕಾಲ ಚಿಕ್ಕೋಡಿ ಡಯಟ್ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ಮೂಡಲಗಿ, ರಾಯಬಾಗ್, ಗೋಕಾಕ್ ಮತ್ತು ಹುಕ್ಕೇರಿ ತಾಲೂಕುಗಳ ಸಹ ಶಿಕ್ಷಕರು ಈ ಕೌನ್ಸೆಲಿಂಗ್ನಲ್ಲಿ ಭಾಗವಹಿಸಿ ತಮ್ಮ ಆಯ್ಕೆಯ ಶಾಲೆಗಳನ್ನು ಮುಖ್ಯ ಶಿಕ್ಷಕರಾಗಿ ಆರಿಸಿಕೊಂಡರು.
ಈ ಪ್ರಕ್ರಿಯೆಯಲ್ಲಿ ಕನ್ನಡ ಮಾಧ್ಯಮದ 390, ಮರಾಠಿ ಮಾಧ್ಯಮದ 41 ಹಾಗೂ ಉರ್ದು ಮಾಧ್ಯಮದ 35 ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಬಡ್ತಿ ನೀಡಲು ಕೌನ್ಸೆಲಿಂಗ್ ನಡೆಸಲಾಯಿತು. ಒಟ್ಟು ಎಂಟು ತಾಲೂಕಿನ 972 ಸಹ ಶಿಕ್ಷಕರು ಭಾಗವಹಿಸಿದ್ದು, ಯಾವುದೇ ಗೊಂದಲಗಳಿಲ್ಲದೆ ತಮ್ಮ ಇಷ್ಟದ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಂತೋಷದಿಂದ ಮನೆಗಳಿಗೆ ತೆರಳಿದರು ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಆರ್. ಸೀತಾರಾಮು ತಿಳಿಸಿದ್ದಾರೆ.
ರಾಜ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿದ್ರಾಮ ಲೋಕಣ್ಣವರ್ ಅವರು ಮಾತನಾಡಿ, ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದರಿಂದ ಶಿಕ್ಷಕರು ಸುಗಮವಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು ಎಂದು ಹೇಳಿದರು. ಈ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವೈ.ಎಸ್. ಬುಡ್ಡಗೋಳ, ಜಿಲ್ಲಾ ಸಹ ಕಾರ್ಯದರ್ಶಿ ಜಿ.ಆರ್. ಪೂಜಾರಿ, ಮ್ಯಾನೇಜರ್ ದೀಪಕ್ ಮಾನೆ, ಎ.ಎಸ್.ಓ. ಖಾಂಡೇಕರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಸೂಪರಿಂಟೆಂಡೆಂಟ್ ಸಂಗೀತ ಪಾಟೀಲ್, ಎಸ್.ಕೆ. ಶೇಖ್, ಪ್ರಥಮ ದರ್ಜೆ ಗುಮಾಸ್ತ ಕೆ.ಆರ್. ಮೋಶಿ, ಎಸ್.ಡಿ.ಎ ಸಂತೋಷ್ ಸಿದ್ದಣ್ಣನವರ್, ಎಫ್.ಡಿ.ಎ ರಾಜಸಾಬ್ ತಹಸೀಲ್ದಾರ್, ಎಸ್.ಡಿ.ಎ ಪವಿತ್ರ, ಎಫ್.ಡಿ.ಎಂ ಶ್ರೀಶೈಲ ಪುಟ್ಟಣ್ಣ ಶೆಟ್ಟಿ ಹಾಗೂ ಡಿ ಗ್ರೂಪ್ ಸಿಬ್ಬಂದಿ ತುಕಾರಾಂ ಪಾಂಡ್ರೆ, ಕಲ್ಲಂದರ್ ಪಾಟೀಲ್, ಅನಿಲ್ ಕಾಂಬಳೆ, ರಾಹುಲ್ ಶಿಂದೆ, ಮಹೇಶ್ ಬೀರುಣಗಿ, ಚಾಲಕ ಮಹಬಾತ್ ಬಾಗವಾಲೇ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 