ಧಾರವಾಡ 01: ಧಾರವಾಡ ಶಹರ ವಲಯದ ಮದಾರಮಡ್ಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪಧರ್ಾ ಕಾರ್ಯಕ್ರಮ ಇಂದು ಕೆಪಿಇಎಸ್ ಶಾಲೆಯಲಿ ಜರುಗಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ ಅವರು ಉದ್ಘಾಟಿಸಿ ಮಾತನಾಡಿ, ಮಕ್ಕಳು ಅಂಕ ಗಳಿಕೆಗೆ ಸೀಮಿತವಾಗದೆ ಸಂಗೀತ, ನೃತ್ಯ, ಭಾಷಣ, ಪಠ್ಯೇತರ ಕ್ಷೇತ್ರಗಳಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದಶರ್ಿಸಬೇಕು. ಅಂತಹ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸಕರ್ಾರ ಪ್ರೋತ್ಸಾಹಿಸುತ್ತಲಿದೆ ಎಂದರು. ಹಿರಿಯ ವಕೀಲರಾದ ಬಿ.ಎಸ್. ಸೋಮಾಪೂರ ಮಾತನಾಡಿ, ಮಕ್ಕಳಲ್ಲಿನ ವಿಶೇಷ ಪ್ರತಿಭೆ ಹೊರಹೊಮ್ಮಲು ಸಕರ್ಾರ ಇಂತಹ ವೇದಿಕೆಗಳನ್ನು ನಿಮರ್ಿಸಿರುವುದು ಸಹಕಾರಿಯಾಗಿದೆ. ವಿಜೇತ ಮಕ್ಕಳು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಲ್ಲಮ್ಮ ಜಿ. ಪಾಟೀಲ, ಲತಾ ಮುಳ್ಳೂರ, ಆರ್.ಬಿ. ಲಿಂಗದಾಳ, ಎಸ್.ಬಿ. ಮುತವಾಡ, ಬಿಆರ್ಪಿ ವೈ.ಎಚ್. ಪಾಟೀಲ, ಡಿ.ವ್ಹಿ. ಸಜ್ಜನ್ ಉಪಸ್ಥಿತರಿದ್ದರು.