ದುಶ್ಚಟಗಳ ಬಿಕ್ಷೆ, ಸದ್ಗುಣಗಳ ದೀಕ್ಷೆ ಜನಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭ
Closing ceremony of the Janajagruti Yatra, the begging of vices, the initiation of virtues
ಜಮಖಂಡಿ 20: ಓಲೇಮಠವು ಯಾವುದೇ ದವಸ, ದಾನ್ಯ, ಧನ, ಹಣವನ್ನು ಕೇಳದೆ. ನನ್ನ ಜೋಳಿಗಿಗೆ ಗುಟ್ಕಾ, ಸಿಗರೇಟ್, ಸಾರಾಯಿ ಮಾರಾಟ ಮಾಡುವ ಪ್ರತಿಯೊಂದು ಅಂಗಡಿಯ ಮಾಲಿಕರು ನನ್ನ ಜೋಳಿಗಿಗೆ ಹಾಕಿ ದುಶ್ಚಟಗಳಿಂದ ಜನರನ್ನು ದೂರ ಮಾಡಲು ಗ್ರಾಮವನ್ನು ವ್ಯಸನ ಮುಕ್ತ ಗ್ರಾಮ ಮಾಡಿದಕ್ಕಾಗಿ ಶ್ಲಾಘನೀಯ ಎಂದು ಓಲೇಮಠದ ಆನಂದ ದೇವರು ಹೇಳಿದರು.
ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ದುಶ್ಚಟಗಳ ಬಿಕ್ಷೆ, ಸದ್ಗುಣಗಳ ದೀಕ್ಷೆ ಜನಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲವನ್ನ್ಲು ವ್ಯಸನ ಮುಕ್ತ ಗ್ರಾಮವನ್ನು ಮಾಡಲಾಗುತ್ತದೆ. ಮಹಿಳೆಯರು, ಮಕ್ಕಳು ಸೇರಿಕೊಂಡು ಸಾರಾಯಿ ನಿಷೇಧ ಮಾಡಲು ನನ್ನ ಜೊತೆಗೆ ಕೈ ಜೋಡಿಸಿದರು. ಹಣ ಗಳಿಕೆ ಮಾಡುವ ಉದ್ದೇಶ ನಮ್ಮದು ಇಲ್ಲ. ವ್ಯಸನ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಮನೆ, ಮನೆಗೆ, ಅಂಗಡಿಗಳಿಗೆ ಪಾದಯಾತ್ರೆ ಮಾಡುವ ಮೂಲಕ ನಿಮ್ಮ ಊರಿಗೆ ಬಂದು ನನ್ನ ಜೋಳಿಗೆಗೆ ಹಾಕಿದ್ದಿರಿ. ಇಂದಿನಿಂದ ಗ್ರಾಮ ವ್ಯಸನ ಮುಕ್ತ ಗ್ರಾಮವಾಗಿದೆ ಎಂದರು.
ನಿಮ್ಮ ಪ್ರೀತಿ, ಸಹಾಯ, ಸಹಕಾರವನ್ನು ನಮ್ಮ ಮೇಲೆ ಇರುವ ಕಾರಣ ಅದು ನನಗೆ ಖುಷಿ ನೀಡಿದೆ. ದುಷ್ಠಗಳನ್ನು ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದೆ. ಗ್ರಾಮದಲ್ಲಿ ಯಾರು ದುಶ್ಚಟಗಳನ್ನು ಮಾಡದ್ದಿರಿ ಎಂದು ಮನವಿ ಮಾಡಿದರು. ಯುವಕರು ದುಶ್ಚಟಗಳಿಂದ ಹಾಳಾಗುತ್ತಿರುವ ಹಿನ್ನಲೆಯಲ್ಲಿ ತಾಯಿಯಂದಿಯರು ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರು ಒರೆಸುವ ಕೆಲಸ ನಾವುಗಳು, ನೀವುಗಳು ಮಾಡಬೇಕು. ಮತ್ತೆ ದುಶ್ಚಟಗಳು ಮುಂದುವರಿಸಿದರೆ ಎಲ್ಲ ತಾಯಿಯಂದಿರನ್ನು ಮತ್ತು ಮಕ್ಕಳನ್ನು ಕರೆದುಕೊಂಡು ಅಂಗಡಿಗಳ ಮುಂದೆ ಬಂದು ನಿಲ್ಲಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.
ಯುವಕರು ಯಾರು ದುಶ್ಚಟಗಳನ್ನುಮಾಡಬಾರದು. ನಿಜವಾದ ಯುವಕರನ್ನು ಯಾರನ್ನು ಕರೆಯುತ್ತಾರೆ ಎಂದರೆ. ಅದು ಹೆತ್ತ ತಂದೆ, ತಾಯಿ, ಗ್ರಾಮದ ಕೀರ್ತಿ ತರುವ ಜೊತೆಗೆ ಸಾಧನೆ ಮಾಡುವವರನ್ನು ಯುವಕರು ಮಾತ್ರ ನಿಜವಾದ ಯುವಕರಾಗಿರುತ್ತಾರೆ. ಯವಕರು ದುಶ್ಚಟಗಳಲ್ಲಿ ಇರುವ ಯುವಕರು ಆಗುವುದಿಲ್ಲ. ಯಾವಗಲು ಚಟುವಟ್ಟಿಕೆಯಲ್ಲಿ ಇದ್ದರೆ ಮಾತ್ರ ಅಂತವರಿಗೆ ಮಾತ್ರ ಯುವಕರು ಎನ್ನಲು ಸಾಧ್ಯ. 4 ಜಿ, 5ಜಿ. ಕೊಡುವರು ಇದ್ದಾರೆ ಆದರೆ ದೇಶಕ್ಕೆ ಗಂಜಿಕೊಂಡುವರು ಯಾರಾದರೂ ಇದ್ದರೆ ಅದು ರೈತ ಮಾತ್ರ. ಎಂದು ಆಶೀರ್ವಚನ ನೀಡಿದರು. ತಾಲೂಕಿನ ಎಲ್ಲ ಪತ್ರಿಕಾ ಮಾಧ್ಯಮ ಮಿತ್ರರರಿಗೆ ಸಮಾಜಸೇವಾ ರತ್ನ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಿ, ಗೌರವಿಸಿದರು.
ವೇದಿಕೆಯಲ್ಲಿ ಸದಾಶಿವ ಮಠದ ಸಂಗಯ್ಯ ಸ್ವಾಮಿಗಳು,.ಶಿವಯ್ಯ ಸ್ವಾಮಿಗಳು ಇದ್ದರು. ನಿಂಗಪ್ಪ ಮಾಸ್ತರ ಭಕ್ತಿ ಗೀತೆ ಹಾಡಿದರು. ವಿದ್ಯಾಭವನ ಶಾಲೆಯ ಸಾನಿಯಾ ಹುನಗುಂದ ತಂಡದಿಂದ ಭರತನಾಟ್ಯವನ್ನು ಶಾಲಾ ಮಕ್ಕಳು ನೇರವೆರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 