ಲಿಂಗರಾಜ ಕಾಲೇಜಿನಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

ಲಿಂಗರಾಜ ಕಾಲೇಜಿನಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ   Closing ceremony of sports and cultural activities at Lingaraj College

       ಬೆಳಗಾವಿ 22: ಯುವಕರು ಜೀವನದಲ್ಲಿ ಸಾಧನೆಯನ್ನು ಮಾಡಿ. ಇಂದಿನ ತಾಂತ್ರಿಕಯುಗದಲ್ಲಿ ಜ್ಞಾನವಂತರಾಗಿ ದೇಶದ ಸೇವೆಗೆ ತೊಡಗಿ. ಶಿಸ್ತು ಅಗತ್ಯವಾಗಿದ್ದು ಜೀವನದ ಪ್ರತಿಹಂತದಲ್ಲಿ ಅದನ್ನು ಅಳವಡಿಸಿಕೊಳ್ಳಿ. ಭಾರತೀಯ ಸೇವೆಯಲ್ಲಿ ಸಾಕಷ್ಟು ಅವಕಾಶಗಳು ಇವೆ. ಸತತ ಪ್ರಯತ್ನ ಅಧ್ಯಯನಗಳು ಬೇಕೆಂದು ಬೆಳಗಾವಿ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಸಿ. ರಾಜಶೇಖರ ಅವರು ಹೇಳಿದರು.

      ಅವರು ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಯುವ ವಿದ್ಯಾರ್ಥಿಗಳಲ್ಲಿ ಕನಸುಗಳು ಇರಬೇಕು. ಅದನ್ನು ಮುಟ್ಟುವವರೆಗೆ ಕಷ್ಟಪಟ್ಟು ಪ್ರಯತ್ನಿಸಬೇಕು. ಕಾಲೇಜು ಜ್ಞಾನವನ್ನು ನೀಡುತ್ತವೆ, ಅದನ್ನು ಪಡೆದ ನೀವು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು. ಲಿಂಗರಾಜ ಕಾಲೇಜು ಹೆಸರಾಂತ ಪದವಿ ಕಾಲೇಜಾಗಿದ್ದು ನೀವು ಉತ್ತಮವಾದ ಸಾಧನೆ ಮಾಡಿ, ಪಾಲಕರ ಹಾಗೂ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿ. ಪ್ರತಿ ಆರು ತಿಂಗಳಿಗೊಮ್ಮೆ ಜಾಗತಿಕ ತಂತ್ರಜ್ಞಾನ ಬದಲಾಗುತ್ತಿದೆ.  

       ಅದರ ವೇಗಕ್ಕೆ ಅನುಗುಣವಾಗಿ ನೀವು ಕೂಡ ಬದಲಾಗುವುದು ಅಗತ್ಯವಾಗಿದೆ. ನಾವು ಇಂದಿನ ವೇಗಕ್ಕೆ ತಕ್ಕದಾಗಿ ಆಲೋಚಿಸುವ ಹಾಗೂ ಮುನ್ನಡೆಯುವುದನ್ನು ಕಲಿಯಬೇಕೆಂದು ಕರೆನೀಡಿದರು. ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಭಾರತೀಯ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುವಂತಾಗಬೇಕು. ಎನ್‌ಸಿಸಿ ಕೆಡೆಟ್‌ಗಳಲ್ಲಿ ಶಿಸ್ತು ಹಾಗೂ ಸಂಘಟನೆಯನ್ನು ಕಲಿಸುತ್ತದೆ. ಅವರ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಎಚ್‌.ಎಸ್‌.ಮೇಲಿನಮನಿ ವಹಿಸಿದ್ದರು.

ಗೌರವ ಅತಿಥಿಗಳಾಗಿ 26 ಕರ್ನಾಟಕ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಸುನೀಲ ದಾಗರ ಆಗಮಿಸಿದ್ದರು. ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ವಂದಿಸಿದರು. ಪ್ರೊ ಶ್ರದ್ಧಾ ಜೋಶಿ ವರದಿ ವಾಚಿಸಿದರು. ಸಿ.ಎಸ್‌.ಪಾಟೀಲ, ಪ್ರೊ. ನಿಕಿತಾ ಬೇಡರ್, ಪ್ರೊ. ಸಿದ್ದಗೌಡ ಪಾಟೀಲ ನಿರೂಪಿಸಿದರು.  ವಿನಾಯಕ ವರೂಟೆ, ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಮೇಜರ್ ಡಾ.ಮಹೇಶ ಗುರನಗೌಡರ, ಕ್ಯಾಫ್ಟನ್ ಡಾ.ಶಿವಾನಂದ ಬುಲಬುಲೆ, ಚಂದ್ರಶೇಖರ ಸವಡಿ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.