ಸಮೂಹ ಬೋಧನಾ ಪಾಠಗಳ ಮುಕ್ತಾಯ ಸಮಾರಂಭ
Closing Ceremony of Mass Teaching Lessons
ಸಮೂಹ ಬೋಧನಾ ಪಾಠಗಳ ಮುಕ್ತಾಯ ಸಮಾರಂಭ
ಹುಬ್ಬಳ್ಳಿ 31: ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯ ವಿದ್ಯಾನಗರ ಹುಬ್ಬಳ್ಳಿ-31 ಬಿ. ಎಡ್. ತೃತೀಯ ಸೆಮಿಸ್ಟರನ್ ಸಮೂಹ ಬೋಧನಾ ಪಾಠಗಳ ಮುಕ್ತಾಯ ಸಮಾರಂಭವನ್ನು ಸರಕಾರಿ ಪ್ರೌಢ ಶಾಲೆಯಲೆ ಹೊಸೂರು ಹುಬ್ಬಳ್ಳಿಯಲ್ಲಿ 30-01-2025ರ ಗುರುವಾರದಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಸಿ. ಕೋಲಕಾರ ಮುಖ್ಯೋಪಾಧ್ಯಾಯರು ವಹಿಸಿ ಬಾವಿ ಶಿಕ್ಷಕರು ತಮ್ಮ ವಿಷಯದ ಬಗ್ಗೆ ಪ್ರೀತಿ ಮತ್ತು ಗೌರವವಿರಬೇಕು ಶಿಕ್ಷಣ ವೃತ್ತಿಯನ್ನು ಆರಿಸಿಕೊಂಡದ್ದೆಯಾದಲ್ಲಿ ಬೈ ಚಾನ್ಸ ಆಗಿರಬಾರದು ಬೈ ಚ್ವಾಯಿಸ್ ಆಗಿರಬೇಕೆಂದು ಹೇಳಿದರು.
ತದನಂತರ ಪ್ರೋ. ಎಚ್. ಆರ್.ಕುರಿ ಶಿಕ್ಷಕರು ವಿಜಯನಗರ ಮಹಾವಿದ್ಯಾ ಲಯದ ದೈಹಿಕ ಶಿಕ್ಷಕರು ಈ ಸಮಾರಂಭದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು ಇನ್ನೋರ್ವ ಶಿಕ್ಷಕಿಯಾದ ಶ್ರೀಮತಿ ವಿ.ಜಿ. ಗಲಬಿ ಶಿಕ್ಷಕರು ಸಹ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದ ಸ್ವಾಗತವನ್ನು ನೇತ್ರಾ ಹೊಸಮನಿಯವರು ಮಾಡಿದರು. ನಿರೂಪನೆಯನ್ನು ಮಧುರಾ ಹಡಪದ ರವರು ನಡೆಸಿಕೊಟ್ಟರು. ವಿಷಯವಾರು ಅಂಕಗಳಿಂದ ವಿದ್ಯಾರ್ಥಿಗಳಿಗೆ ಮತ್ತು ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಮತ್ತು ಸಿಹಿಯನ್ನು ಹಂಚಿಕೊಂಡರು. ವಿದ್ಯಾರ್ಥಿಗಳಾದ ನಿಖಿಲ್,ರಾಕೇಶ್, ಮತ್ತು ಪ್ರಿಯಾಂಕಾ ಇವರು ಸಹ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ರತ್ನಾರವರು ವಂದನಾರೆ್ಣ ಮಾಡುವುದರ ಮೂಲಕ ಎಲ್ಲಾ ಬಿ. ಎಡ್.ಪ್ರಶಿಕ್ಷಣಾರ್ಥಿಗಳದ ಕೆ.ಎಂ. ವೀಣಾ,ಮಧುರಾ. ಬಿ.. ನೇತ್ರಾ , ಎಂ.ಎಚ್.ಶ್ವೇತಾ.ಎಚ್.ರುಕ್ಮಿಣಿ .ಸಿ, ರತ್ನಾ.ಡಿ.ಇವರೆಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 