ಸಾಮೂಹಿಕ ಶ್ರಮದಾನದಲ್ಲಿ ಅಪರ ಜಿಲ್ಲಾಧಿಕಾರಿ-ವಿವಿಧ ಅಧಿಕಾರಿಗಳು ಭಾಗಿ

ಸಾಮೂಹಿಕ ಶ್ರಮದಾನದಲ್ಲಿ ಅಪರ ಜಿಲ್ಲಾಧಿಕಾರಿ-ವಿವಿಧ ಅಧಿಕಾರಿಗಳು ಭಾಗಿ Cleaning of various circles and roads in the city on the occasion of Gandhi Jayanti

ಗಾಂಧಿ ಜಯಂತಿ ಅಂಗವಾಗಿ ನಗರದ ವಿವಿಧ ವೃತ್ತಗಳ ಹಾಗೂ ರಸ್ತೆಗಳ ಸ್ವಚ್ಛತೆ 

ಹಾವೇರಿ 30 : ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ನಗರದ ವಿವಿಧ ರಸ್ತೆಗಳು ಹಾಗೂ ವೃತ್ತಗಳ ಸ್ವಚ್ಛತಾ ಕಾರ್ಯದಲ್ಲಿ  ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್ ಅವರು ಭಾಗಿಗಳಾಗಿ ಶ್ರಮದಾನ ಮಾಡಿದರು. 

ಗಾಂಧೀಜಿ ವೃತ್ತದ ಸ್ವಚ್ಛತಾ ಕಾರ್ಯದ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಲಾಯಿತು, ಮಹಾನ್ ವ್ಯಕ್ತಿಗಳ ಪುತ್ಥಳಿಯ ಸುತ್ತಮುತ್ತ ಕಸ ಹಾಕದಂತೆ  ಹಾಗೂ ನಗರ ಸ್ವಚ್ಛತೆ ಬಗ್ಗೆ ಕಾಳಜಿಸಬೇಕು. ಸುಂದರ ನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು    ಎಂದು ಸಾರ್ವಜನಿಕರಿಗೆ ಕರೆ ನೀಡಲಾಯಿತು.  

ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಅಧಿಕಾರಿ -ನೌಕರರು  ತಂಡ ತಂಡವಾಗಿ ಇಂದಿನ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡು ಜೆ.ಎಚ್‌.ಪಟೇಲ್ ವೃತ್ತ, ವಿ.ಕೃ.ಗೋಕಾಕ ವೃತ್ತ, ಶ್ರೀ ಬಸವೇಶ್ವರ ವೃತ್ತ, ಸುಭಾಸ ವೃತ್ತ, ವಿ.ಕೃ.ಗೋಕಾಕ, ಜೆ.ಪಿ.ವೃತ್ತ, ಮಹಾತ್ಮಗಾಂಧಿ ವೃತ್ತ, ಮೈಲಾರ ಮಹದೇವಪ್ಪ ವೃತ್ತ,  ಹೊಸಮನಿ ಸಿದ್ದಪ್ಪ ವೃತ್ತ,  ಕಿತ್ತೂರ ಚನ್ನಮ್ಮ ವೃತ್ತ, ಮಹರ್ಷಿ ವಾಲ್ಮೀಕಿ  ವೃತ್ತ, ನಗರದ ಪ್ರಮುಖ ಬೀದಿಗಳ ಸ್ವಚ್ಛತೆ ಕಾರ್ಯ ನೆರವೇರಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್‌.ಹಾವನೂರ, ತಹಶೀಲ್ದಾರ ಶರಣಮ್ಮ, ನಗರಸಭೆ ಪೌರಾಯುಕ್ತ ಕಾಂತರಾಜು, ವಾರ್ತಾಧಿಕಾರಿ ಶ್ರೀಮತಿ ಭಾರತಿ ಎಚ್‌.,  ಜಿಲ್ಲಾಧಿಕಾರಿಗಳ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪಶು ಸಂಗೋಪನೆ ಇಲಾಖೆ,  ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಶ್ರಮದಾನದ ಮೂಲಕ ನಗರ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.