ಏಪ್ರಿಲ್ 10 ರ ಒಳಗೆ ಕೆರೆಯನ್ನು ಸ್ವಚ್ಛಗೊಳಿಸಿ ಇಲ್ಲವಾದರೆ ರಸ್ತೆ ಬಂದ್ ಮಾಡಿ ,ಬೃಹತ್ ಪ್ರತಿಭಟನೆ

ಏಪ್ರಿಲ್ 10 ರ ಒಳಗೆ ಕೆರೆಯನ್ನು ಸ್ವಚ್ಛಗೊಳಿಸಿ ಇಲ್ಲವಾದರೆ ರಸ್ತೆ ಬಂದ್ ಮಾಡಿ ,ಬೃಹತ್ ಪ್ರತಿಭಟನೆ Clean the lake by April 10th or else the road will be blocked, massive protest

ಲೋಕದರ್ಶನ ವರದಿ 

  ಬ್ಯಾಡಗಿ 01:  ಪಟ್ಟಣದ ಗಾಂಧಿನಗರ ಹಾಗೂ ಇಸ್ಲಾಂಪುರವರಿಗೆ ಹೊಂದಿಕೊಂಡಿರುವ ಶತಮಾನ ಕಂಡಿರುವ ಬಸನಕಟ್ಟಿ ಕೆರೆ ಇದ್ದು ಇದರಲ್ಲಿ ಕೊಳಚೆ ನೀರು ಹಾಗೂ ರಾಜಕಾಲುವೆ ನೀರು ಬಂದು ಸೇರಿ ಕೆರೆ ಗಬ್ಬೆದ್ದು ನಾರುತ್ತಿದೆ ಶೀಘ್ರವೇ ಕೆರೆಯನ್ನು ಸ್ವಚ್ಛಗೊಳಿಸದೆ ಇದ್ದರೆ ಇದೇ  ಏಪ್ರಿಲ್ 10 ನೇ ತಾರೀಖಿನಂದು ರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪುರಸಭೆಯ ಆವರಣದಲ್ಲಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಮಾತನಾಡಿದವರು ಪಟ್ಟಣದ ಗಾಂಧಿನಗರದ ದೊಡ್ಡ ನೀರಿನ ಟ್ಯಾಂಕ್ ಹತ್ತಿರ ಇರುವ ಬಸವನಕಟ್ಟೆ ಕೆರೆಯಲ್ಲಿ ಹುಳು.

ಗಿಡ ಗಂಟೆ ಹಾಗೂ ಕೊಳಚೆ ನೀರಿನಿಂದ ತುಂಬಿಕೊಂಡು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಇತ್ತೀಚೆಗೆ ನಿರ್ಮಿಸಿರುವ ರಾಜ ಕಾಲುವೆ ಕೊಳಚೆ ನೀರು ಸಹ ಈ ಬಸವನ ಕಟ್ಟಿಗೆ ಕೆರೆಗೆ ಬಂದು ಸೇರುತ್ತದೆ ಸಂಜೆಯಾದೊಡನೆ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಕೂಡಲೇ ಕೆರೆ ಸ್ವಚ್ಛಗೊಳಿಸಿ ಕೊಳಚೆ ನೀರು ಕೆರೆಗೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕೆರೆ ಕೂಡಿ ದುರ್ಗಾದೇವಿ ದೇವಸ್ಥಾನದ ಕಮಿಟಿಯ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ ಮೊದಲು ಈ ಬಸವನಕಟ್ಟೆಕೆರೆಯು ರೈತರ ದನಗಳು ಕರಗಳು ನೀರು ಕುಡಿಯಲು ಈಕೆರೆಯನ್ನು ಉಪಯೋಗಿಸುತ್ತಿದ್ದರು ಈ ಕೆರೆಗೆ ಬೆಟ್ಟದ ಮಲ್ಲೇಶ್ವರ ಗುಡ್ಡದಿಂದ ಮಳೆಯ ನೀರು ಬಂದು ಸೇರುತ್ತಿತ್ತು ಇದೀಗ ರಾಜಕಾಲುವೆ ಕೊಳಚೆ ನೀರು ಬಂದು ಸೇರಿ ಗಬ್ಬು ನಾರುತ್ತಿದೆ ಇದರ ಪಕ್ಕದಲ್ಲಿ ಕೆರೆ ಕೋಡಿ ದುರ್ಗಾದೇವಿ ದೇವಸ್ಥಾನ ಇದ್ದು ದೇವಸ್ಥಾನ ಬರುವ ಭಕ್ತರ ಮೂಗು ಮುಚ್ಚಿಕೊಂಡು ಬರುವ ಪರಿಸ್ಥಿತಿ ಬಂದಿದೆ.

ಹಲವು ಬಾರಿ ಪುರಸಭೆಯವರಿಗೆ ಮನವಿ ಮಾಡಿದರು ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಕೆರೆಯನ್ನು ಸ್ವಚ್ಛಗೊಳಿಸಿ ಶುದ್ಧವಾದ ಕುಡಿಯುವ ನೀರನ್ನು ಬಿಡಬೇಕು ಈ ಕೆರೆಯ ಪಕ್ಕದಲ್ಲಿ ಕುಡಿಯುವ ನೀರಿನ ಹೊಂಡವಿದ್ದು ಅದಕ್ಕೂ ಸಹ ಈ ಕೊಳಚೆ ನೀರು ಹೋಗಿ ಸೇರುವ ಪರಿಸ್ಥಿತಿ ಉಂಟಾಗಿದೆ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕೆರೆಯನ್ನು ಶುಭ್ರಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಎಂ ಕೋರಿ ಶೆಟ್ಟರ್ .ಎಸ್ ಜಿ ಕುಡಕೇರ. ಆನಂದ್ ಚೌತಿಹಾಳ್‌. ಎಸ್ ಜಿ ಕುಡಕೆರ.ಸಿ ಸಿ ಮಧ್ಯಾಹ್ನದ.ಸಿ ಎನ್ ಹುಚ್ಚೇರಿ.ಎಂ ಬಿ ಬಣಕಾರ.ಚೌಡಪ್ಪ ಹೊನ್ನಮ್ಮನವರ.ಫಕ್ಕೀರೆಶ ಹೋನ್ನಮ್ಮನವರ.ಮೊದಿನಸಾಬ ಬಡಿಗೇರ. ಶಂಕರ್ ಬಾರ್ಕಿ. ಮಂಜಣ್ಣ ಬಾಕಿ. ಸದಾನಂದ ಚನ್ನಗೌಡ ಹಾಗೂ ಅನೇಕರು ಉಪಸ್ಥಿತರಿದ್ದರು.