ಬೈಲಹೊಂಗಲ 27: ಆರೋಗ್ಯವಂತ, ಸ್ವಸ್ಥ, ಸದೃಢ ಸಮಾಜ ನಿಮರ್ಾಣಕ್ಕೆ ಸ್ವಚ್ಛತೆಯೆ ಮೂಲಾಧಾರವಾಗಿದೆ ಎಂದು ನವಚೇತನ ಯುವಕ ಸಂಘದ ಅಧ್ಯಕ್ಷ ನಾರಾಯಣ ನಲವಡೆ ಹೇಳಿದರು.
ಅವರು ತಾಲೂಕಿನ ನಯಾನಗರ ಸಕರ್ಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ನವಚೇತನ ಯುವಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ "ಸ್ವಚ್ಛ ಭಾರತ ಅಭಿಯಾನದಲ್ಲಿ ನನ್ನ ಪಾತ್ರ ಪ್ರಭಂದ ಸ್ಪಧೆರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಪಾಲಕರು ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳು ಪ್ರಭಂದ ಬರೆದರೆ ಸಾಲದು ಸ್ವಚ್ಛತೆಗಾಗಿ ಸ್ವ ನೈರ್ಮಲಿಕರಣ ಅನುಸರಿಸಿ ಮತ್ತು ಸುತ್ತಲಿನ ಪರಿಸರ ಕಾಪಾಡುವ ಮೂಲಕ ನಿತ್ಯ ಆಚರಣೆಯಲ್ಲಿ ತಂದು ಸ್ವಚ್ಛ ಸದೃಢ, ಸ್ವಸ್ಥ ಹಾಗೂ ಆರೋಗ್ಯವಂತ ಸಮಾಜ ನಿಮರ್ಾಣದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಪ್ರಕಾಶ ಅಡಕಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಸ್ಪಧರ್ೆ ಏರ್ಪಡಿಸಿ ಸಂಪೂರ್ಣ ಬಹುಮಾನಗಳ ಪ್ರಾಯೋಜಕತ್ವ ವಹಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಕ್ಕಳಿಗೆ ಪ್ರೇರೆಪಿಸಲು ಶ್ರಮಿಸುತ್ತಿರುವ ನವಚೇತನ ಯುವಕ ಸಂಘದ ಅಧ್ಯಕ್ಷ ನಾರಾಯಣ ನಲವಡೆ ಇವರ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದರು.
ಸಮಾರಂಭದಲ್ಲಿ ಹಿರಿಯ ಶಿಕ್ಷಕಿ ಪಿ.ಬಿ.ಮಂತ್ರೋಪಕರ, ಜಿ.ಟಿ.ದೊಡವಾಡ, ಜಿ.ಬಿ.ಪಟ್ಟಣಶೆಟ್ಟಿ, ವಿ.ಪಿ.ಹಿರೇಮಠ, ಪಿ.ಎಮ್.ನಿಕ್ಕಮನವರ, ಸಿ,ಡಿ ಕುಲಕಣರ್ಿ, ಮೀನಾಕ್ಷಿ ಹರಿಜನ, ಜೆ.ಬಿ.ಕಲಾಜ, ವೈ.ಡಿ.ಗಾಣಿಗಿ ಮತ್ತಿತರರು ಇದ್ದರು.
ಫಲಿತಾಂಶ : 1 ರಿಂದ 8 ನೇ ತರಗತಿಯ ಸ್ನೇಹಾ ಅರವಳ್ಳಿ, ಕಾತರ್ಿಕ ನಲವಡೆ, ಸ್ಪೂತರ್ಿ ನಲವಡೆ, ಲಕ್ಷ್ಮೀ ಪಾಟೀಲ, ಸುಮಿತ ಅಡಕಿ, ಕಿರ್ತನಾ ಪೂಜೇರ, ಪ್ರಶಾಂತಕುಮಾರ ಹಿರೇಮಠ, ಭುವನೇಶ್ವರಿ ಅಡಕಿ ಪ್ರಥಮ. ಐಶ್ವಯರ್ಾ ಕಲಾಲ, ವೈಷ್ಣವಿ ಅಳಗೋಡಿ, ಶಿವನಗೌಡ ಪಾಟೀಲ, ವೈಶಾಲಿ ಸೂರ್ಯವಂಶಿ, ಶಶಾಂಕ ನಲವಡೆ, ಸೃಷ್ಠಿ ಹಿರೇಮಠ, ಸಂತೋಷ ಬೋಗಪ್ಪನವರ, ಐಶ್ವಯರ್ಾ ಸೂರ್ಯವಂಶಿ ದ್ವಿತೀಯ. ಗಾಯತ್ರಿ ಉಳ್ಳಿಗೇರಿ, ಪ್ರೀತಿ ಸುಣಗಾರ, ಕಾವೇರಿ ಗೌಡರ, ಸಿದ್ದಲಿಂಗೇಶ್ವರ ಏಣಗಿ, ಭಕ್ತಿ ಕೋಲಕಾರ, ಪ್ರಿಯಾಂಕಾ ನೇಗಿನಹಾಳ, ಸ್ಪೂತರ್ಿ ಮಾಳಗಿ, ಸಿಂದೂ ಅಳಗೋಡಿ, ರಕ್ಷಿತಾ ಅಸುಂಡಿ, ಮುತ್ತಪ್ಪ ತೇಗೂರ, ಸಂಜನಾ ಕಲಾಲ, ನಂದಿತಾ ಹುಡೇದ, ವಿವೇಕ ನಲವಡೆ, ಚೇತನ ಮೂಲಿಮನಿ ತೃತೀಯ ಸ್ಥಾನ ಪಡೆದಿದ್ದಾರೆ.
ಮುಖ್ಯೋಪಾಧ್ಯ್ಯಾಯ ಡಿ.ಎಸ್.ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಆಯ್.ಜಿ ಬಾಗಲಕೋಟ ನಿರೂಪಿಸಿದರು. ಶಿಕ್ಷಕಿ ಡಿ.ಬಿ.ಕುಂಕೂರ ವಂದಿಸಿದರು.