ಕಂದಗಲ್ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಮರೆ್ಣ
Clean drinking water unit ready for Kandagal school
ಲೋಕದರ್ಶನ ವರದಿ
ಹೂವಿನಹಡಗಲಿ 29: ಶಾಲೆಗಳ ಸಬಲೀಕರಣ ಹಾಗೂ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ ಯೊಂದಿಗೆ ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಪಾತ್ರ ಅತ್ಯವಶ್ಯಕ ಎಂದು ಕಸಾಪ ಮಾಜಿ ಹೆಚ್.ಜಿ.ಪಾಟೀಲ್ ಅಭಿಪ್ರಾಯ ಪಟ್ಟರು.ತಾಲ್ಲೂಕಿನ ಕಂದಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಬೆಳಕು ಶೈಕ್ಷಣಿಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕ , ಉಚಿತ ಶಾಲಾ ಬ್ಯಾಗ್ ,ನೋಟ್ ಪುಸ್ತಕ ವಿತರಣೆ ಕಾರ್ಯ ಕ್ರಮದಲ್ಲಿ ಮಾತನಾಡಿ ದರು.ಹಳ್ಳಿ ಶಾಲೆಗಳಲ್ಲಿ ಓದಿ ಬೆಂಗಳೂರಿನಲ್ಲಿ ವೃತ್ತಿ ನಿರತರಾಗಿದ್ದರೂ ತಾವು ಓದಿದ ಶಾಲೆಗಳ ಪ್ರಗತಿಗೆ ಟ್ರಸ್ಟ್ ನಿಂದ ನೆರವು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಕು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮೇಟಿ ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿ ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಯ ಉದ್ದೇಶ ದಿಂದ 28ಜನ ಖಾಸಗಿ ಸಂಸ್ಥೆ ಉದ್ಯೋಗಿಗಳಿಂದ ಟ್ರಸ್ಟ್ ಆರಂಭವಾಗಿದೆ ಎಂದ ಅವರು 94 ವಿದ್ಯಾರ್ಥಿಗಳಿಗೆ ನೋಟು ಪುಸ್ತಕ, ಬ್ಯಾಗ ಮತ್ತು ಶುದ್ದಕುಡಿಯುವ ನೀರಿನ ಘಟಕ ಸಮರ್ಿಸಿದೆ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.ಟ್ರಸ್ಟ್ ಅದ್ಯಕ್ಷ ಕೃಷ್ಣ ಪೂಜಾರ, ಉಪಾಧ್ಯಕ್ಷ ಮಂಜುನಾಥ ಮಾತನಾಡಿ ಟ್ರಸ್ಟ್ ಸದಸ್ಯರು ಎಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿ ಭವಿಷ್ಯ ಕಂಡು ಕೊಂಡಿದ್ದಾರೆ. ಗ್ರಾ.ಪಂ.ಮಾಜಿ ಸದಸ್ಯರಾದ ಪರಮೇಶ್ವರ್ಪ, ಜಾತಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅದ್ಯಕ್ಷ ವೈ.ನಾಗರಾಜ, ಮಾಜಿ ಅದ್ಯಕ್ಷ ಮೇಟಿ ದೇವೇಂದ್ರ್ಪ ಇದ್ದರು. ಮುಖ್ಯಶಿಕ್ಷಕ ಐ.ವೀರಣ್ಣ ಸ್ವಾಗತಿಸಿದರು.ಶಿಕ್ಷಕ ಗಂಗಾನಾಯ್ಕ ನಿರೂಪಿಸಿದರು.ಪ್ರಕಾಶ್ ವಂದಿಸಿದರು.ಟ್ರಸ್ಟ್ ಪದಾಧಿಕಾರಿಗಳು ಸನ್ಮಾನಿಸಲಾಯಿತು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 