ವರದಿಗಾರಿಕೆಯಲ್ಲಿ ನೈಜತೆಯನ್ನು ಸ್ಪಷ್ಟಪಡಿಸಿಕೊಳ್ಳಿ : ಗಲಗಲಿ
Clarify the truth in reporting: Galagali
ವರದಿಗಾರಿಕೆಯಲ್ಲಿ ನೈಜತೆಯನ್ನು ಸ್ಪಷ್ಟಪಡಿಸಿಕೊಳ್ಳಿ : ಗಲಗಲಿ
ಬಾಗಲಕೋಟೆ 02: ಸುದ್ದಿ ವರದಿಗಳನ್ನು ಸ್ವಾರಸ್ಯವಾಗಿ ರಚಿಸಲು ಓದು ಮತ್ತು ಬರವಣಿಗೆ ಕೌಶಲ್ಯ ಅಗತ್ಯ. ಸುದ್ದಿ ನಿರ್ಮಾಣದಲ್ಲಿ ನೈಜತೆ ಮತ್ತು ಸಂಕ್ಷಿಪ್ತತೆ ಓದುಗರನ್ನು ಹಿಡಿದಿಡುತ್ತವೆ ಎಂದು ಪತ್ರಕರ್ತರಾದ ರವಿರಾಜ ಗಲಗಲಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಸಸಿಗೆ ನೀರೆರಿಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವರದಿ ಬರವಣಿಗೆಯ ಕೌಶಲ್ಯ ಬೆಳೆಸಿಕೊಳ್ಳಲು ಭಾಷಾ ಪ್ರಾವೀಣ್ಯತೆ ಮತ್ತು ಶಬ್ದ ಸಂಗ್ರಹಣೆ ಅಗತ್ಯ. ಸುದ್ದಿಯ ಸ್ಪಷ್ಟವಾದ ಮಾಹಿತಿಯನ್ನು ತಿಳಿದುಕೊಂಡಿರಬೇಕು. ವರದಿ ಎಷ್ಟು ಗಾತ್ರದಲ್ಲಿದೆ ಎನ್ನುವುದಕ್ಕಿಂತ ಮುಖ್ಯವಾಗಿ ವರ್ಣನೆ ಮತ್ತು ಸ್ವಾರಸ್ಯಕರ ವಿವರಣೆಯ ಮೇಲೆ ಅದರ ಮೌಲ್ಯ ನಿರ್ಣಯವಾಗುತ್ತದೆ. ಸೂಕ್ಷ್ಮ ವರದಿಗಾರಿಕೆಯಲ್ಲಿ ನೈಜತೆಯನ್ನು ಸ್ಪಷ್ಟಪಡಿಸಿಕೊಳ್ಳುವುದು ಅವಶ್ಯಕ ಎಂದರು.
ವಿಶೇಷ ಸುದ್ದಿ ರಚನೆಯಲ್ಲಿ ಸೈಡ್ ಲೈನ್ ಮತ್ತು ಬಾಟಮ್ ನ್ಯೂಸ್ ಗಳನ್ನು ಕಲೆ ಹಾಕುವುದು ಮುಖ್ಯವಾಗಿರುತ್ತದೆ. ವಿಷಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಭಾವನೆಯನ್ನು ಹೊಂದಿರಬೇಕು. ಸತತ ಪ್ರಯತ್ನದಿಂದ ಉತ್ತಮ ವರದಿಗಾರರಾಗಲು ಸಾಧ್ಯ. ಗ್ರಹಿಕೆ ಜ್ಞಾನ, ಬರವಣಿಗೆ ಮತ್ತು ಓದುವ ಕೌಶಲ್ಯವನ್ನು ಬೆಳಸಿಕೊಳ್ಳಿ ಎಂದು ಸಲಹೆ ನೀಡಿ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಅವರು ಮಾತನಾಡಿ ಲೇಖನಿಗೆ ವಿಶೇಷ ಶಕ್ತಿ ಇದೆ. ಖಡ್ಗಕ್ಕಿಂತ ಹೆಚ್ಚು ಸಾಮರ್ಥ್ಯ ಪತ್ರಕರ್ತರು ಬಳಸುವ ಶಬ್ದಕ್ಕಿದೆ. ಮಾತನ್ನು ವರದಿಯ ರೂಪದಲ್ಲಿ ತರುವವರು ವರದಿಗಾರರು.
ಸಂವಿಧಾನದ ಹಕ್ಕನ್ನು ರಕ್ಷಣೆ ಮಾಡುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ನೀವು ಪ್ರಜಾಪ್ರಭುತ್ವದಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರವನ್ನು ತಿಳಿದುಕೊಳ್ಳಬೇಕು. ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕೋದ್ಯಮ ಸ್ವಾತಂತ್ರ್ಯ ಮತ್ತು ಅದರ ಹಾದಿಯನ್ನು ನೆನಸಿಕೊಳ್ಳಬೇಕು. ನಿರ್ಲಕ್ಷ್ಯಿತರ ಧ್ವನಿಯಾಗಿ, ವಿಮರ್ಶಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುವ ಸಾಮರ್ಥ್ಯ ಈ ಕ್ಷೇತ್ರಕ್ಕಿದ್ದು ಡಿವಿಜಿ ಅವರು ಹೇಳಿದಂತೆ ಕಾವಲು ನಾಯಿಯಾಗಿ ಸಮಾಜ ರಕ್ಷಣೆ ಮಾಡುತ್ತಿದೆ. ಡಿಜಿಟಲ್, ಎಐ ತಂತ್ರಜ್ಞಾನವನ್ನು ಈ ಕ್ಷೇತ್ರ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದು ಅದನ್ನು ಈಗಿನಿಂದ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಐ. ಬಿ. ಚಿಕ್ಕಮಠ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಎ. ಯು ರಾಠೋಡ್ ಉಪಸ್ಥಿತರಿದ್ದರು. ಪತ್ರಿಕೋದ್ಯಮದ ಪ್ರಾಧ್ಯಾಪಕರಾದ ಮಹಾಂತೇಶ. ಪಿ. ದೊಡವಾಡ ವಂದಿಸಿದರು, ಗಂಗಾ ಅಮಾತೆಪ್ಪನವರ, ಶಾಂತಾ ಪಾಟೀಲ್ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 