ಲಕ್ಷ್ಮೀ ಸಿದ್ದಿ ಸಾವಿನ ಸುದ್ದಿ ಕುರಿತು ಸ್ಪಷ್ಟೀಕರಣ
Clarification on Lakshmi Siddhi's death News
ಕಾರವಾರ,ಆ.9:- ಯಲ್ಲಾಪುರ ತಾಲೂಕಿನ ಅನಗೋಡ ಗ್ರಾಮದಲ್ಲಿ ಶ್ರೀಮತಿ ಲಕ್ಷ್ಮೀ ಸಿದ್ದಿ ರವರು ದಿ. 02-08-2025 ರ ರಾತ್ರಿ ಮನೆಯಲ್ಲಿದ್ದ ಡಿಸೇಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿ ಪುನ: ಅಲ್ಲಿಂದ ಅವರ ವಾಸದ ಊರಿಗೆ ತರಲಾಗಿದ್ದು ಸದ್ರಿಯವರು ದಿ: 05-08-2025 ರಂದು ಮೃತಪಟ್ಟಿರುವುದಾಗಿರುತ್ತದೆ.
ಈ ಕುರಿತು ವರದಿಯನ್ನು ಪಡೆಯಲಾಗಿ , ಮೃತರು ವೈಯಕ್ತಿಕ/ಕೌಟುಂಬಿಕ ಕಾರಣಗಳಿಂದ ಮನನೊಂದು ಸ್ಥಿರವಾಗಿ ಒಂದು ಕಡೆ ವಾಸ್ತವ್ಯವಿರುತ್ತಿರಲಿಲ್ಲ. ಮೃತರು ವಿವಾಹಿತರಾಗಿ ಮಕ್ಕಳಿದ್ದರೂ ಕುಟುಂಬದೊಂದಿಗೆ ವಾಸಿಸುತ್ತಿರಲಿಲ್ಲ ಎಂಬುದಾಗಿ ತಿಳಿದುಬಂದಿರುತ್ತದೆ. ಮೃತ ಲಕ್ಷ್ಮೀ ಸಿದ್ದಿ ರವರು ಅವರ ಪಾಲಕರು ವಾಸಿಸುತ್ತಿರುವ ಮನೆಯ ತೀರಾ ಹತ್ತಿರದಲ್ಲಿಯೇ ಗುಡಿಸಲೊಂದರಲ್ಲಿ ವಾಸಕ್ಕೆ ಇರುತ್ತಿದ್ದರೆಂದು ಹಾಗೂ ಊಟವನ್ನು ತಂದೆ ತಾಯಿಯವರ ಮನೆಯಲ್ಲಿಯೇ ಮಾಡುತ್ತಿದ್ದರೆಂಬ ಬಗ್ಗೆ ವರದಿಯಾಗಿದೆ.
ಮೃತರ ತಂದೆ ತಾಯಿಯವರಿಗೆ ಅನ್ನಭಾಗ್ಯ ಯೋಜನೆಯಡಿ ಹಾಗೂ ಸಿದ್ದಿ ಸಮುದಾಯಕ್ಕೆ ನೀಡಲಾಗುವ ಆಹಾರ ಕಿಟ್ ದೊರೆಯುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ.
ಕಾರಣ ಮೃತ ಲಕ್ಷ್ಮೀ ಸಿದ್ದಿ ರವರು ತಮ್ಮ ಕೌಟುಂಬಿಕ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 