ಜನರ ಸೇವೆಗಾಗಿ ನಿಂತ ಪೌರ ಕಾರ್ಮಿಕರು ಈ ದೇಶದ ಆಸ್ತಿ: ಮನಗೂಳಿ
Civic workers who stand in service of the people are an asset to this country: Managuli
ಲೋಕದರ್ಶನ ವರದಿ
ಸಿಂದಗಿ 10: ಪೌರ ಸೇವಾ ನೌಕರರು ಹಲವಾರು ಸಮಸ್ಯೆಗಳ ಮಧ್ಯಯು ಸರಕಾರದಿಂದ ನೀಡುವ ಸೌಲಭ್ಯಗಳು ಮುಟ್ಟದಿದ್ದರು ಕೂಡಾ ಇಡೀ ತಮ್ಮ ಜೀವನುದ್ದಕ್ಕೂ ಸೂರ್ಯ ಹುಟ್ಟವ ಮುನ್ನ ಬೀದಿಗಿಳಿದು ಜನರ ಸೇವೆಗಾಗಿ ನಿಂತವರು ಪೌರ ಕಾರ್ಮಿಕರು ಈ ದೇಶದ ಆಸ್ತಿಯಾಗಿದ್ದಾರೆ ಅಂತವರ ಎಲ್ಲ ಸಮಸ್ಯೆಗಳ ಈಡೇರಿಕೆ ಮುಖ್ಯಮಂತ್ರಿಗಳ ಚರ್ಚಿಸಿ ಬಗೆ ಹರಿಸುವದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ನಗರದ ಗುಂದಗಿ ಪಂಕ್ಷನ್ ಹಾಲ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಬೆಂಗಳೂರು ವಿಜಯಪುರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ಮಾನ್ಯ ರಾಜ್ಯಾಧ್ಯಕ್ಷರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯ ಪರಿಷತ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರ ಮಗನಿಗೆ ಮಂತ್ರಿಸ್ಥಾನ ನೀಡಿದ ಕಾಂಗ್ರೆಸ್ ಸರಕಾರ ಪೌರ ಕಾರ್ಮಿಕರ ಸಮಸ್ಯೆಗಳೀಗೆ ಸ್ಪಂದಿಸುತ್ತದೆ ಎಂದರು.
ಸಾನಿದ್ಯತೆ ವಹಿಸಿದ ಮನಗೂಳಿ ಸಂಸ್ಥಾನ ಹಿರೇಮಠ ಷ.ಬ್ರ. ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಪೌರ ಕಾರ್ಮಿಕರೆಂದರೆ ದೇವರು ಇದ್ದ ಹಾಗೆ ಅವರನ್ನು ಕಸವನ್ನಾಗಿ ನೋಡದೇ ದೇವರನ್ನಾಗಿ ಕಾಣಬೇಕು. ಸ್ವಚ್ಚತೆ ಇಲ್ಲದಿದ್ದರೆ ಊರೆಲ್ಲ ತಿಪ್ಪೆ ಆಗುತ್ತಿದೆ. ಪೌರ ಕಾರ್ಮಿಕರೆ ಸ್ವಚ್ಚತೆ ಮಾಡಬೆಕು ಎನ್ನುವ ಭಾವನೆಯಿಂದ ಹೊರಬಂದು ಕಾರ್ಮಿಕರ ಜೊತೆ ಕೈಜೋಡಿಸಬೇಕು. ಅಲ್ಲದೆ ಪೌರ ಸೆವಾ ನೌಕರರು ಹಲವು ವರ್ಷಗಳಿಂದ ಹೊರ ಗುತ್ತಿಗೆಯಿಂದ ಕಾರ್ಯನಿರ್ವಹಿಸುತ್ತಿದೆ ಅವರನ್ನು ಖಾಯಂಗೊಳಿಸುವ ಕಾರ್ಯ ಮಾಡಿ ಎಂದು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 