ಆರೋಪ ಪ್ರತ್ಯಾರೋಪಗಳ ಮಧ್ಯ ನಗರ ಸಾಧಾರಣ ಸಾಮಾನ್ಯ ಸಭೆ ಮುಕ್ತಾಯ

ಆರೋಪ ಪ್ರತ್ಯಾರೋಪಗಳ ಮಧ್ಯ ನಗರ ಸಾಧಾರಣ ಸಾಮಾನ್ಯ ಸಭೆ ಮುಕ್ತಾಯ City Ordinary General Meeting concludes amid accusations and counter-accusations

ರಾಣೇಬೆನ್ನೂರು 28: ಇಲ್ಲಿನ ನಗರಸಭಾ ಸರ್ ಎಂ. ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ಕಳೆದ ಬಾರಿ ಸದಸ್ಯರಗೈರಿನಿಂದಾಗಿ ಮುಂದೂಡಲಾಗಿದ್ದ 4ನೇ ಸಾಧಾರಣ  ಸಾಮಾನ್ಯ ಸಭೆಯು ಮಂಗಳವಾರ ನೀರೀಕ್ಷೆಯಂತೆ ಬಹುವಿಧದಚರ್ಚೆಯೊಂದಿಗೆ ಆರೋಪ ಪ್ರತ್ಯಾರೋಪಗಳ ಮಧ್ಯ ನಗರಸಭೆಯಲ್ಲಿಕೋಟಿಗೂಅಧಿಕರೂ.ಕಾಮಗಾರಿ ವಿಚಾರವಾಗಿ  ಭ್ರಷ್ಟಾಚಾರ ನಡೆದಿರುವ ಅಂಕಿ ಸಂಖ್ಯೆಯೊಂದಿಗೆಪ್ರಚುರಪಡಿಸಿದ ಪ್ರತಿ ಪಕ್ಷದ ಸದಸ್ಯರಗದ್ದಲದ ನಡುವೆ ನಾಲ್ಕು ತಾಸುಗಳ ಕಾಲ ಜರುಗಿತು. 

ಆರಂಭದಲ್ಲಿ  ಹಿಂದಿನ ಸಾಧಾರಣ ಸಭೆಯ ವಿಷಯವನ್ನು ಓದಿ ದೃಢೀಕರಿಸಿದ ನಂತರ ಮಂಡಿಸಿದ ಒಟ್ಟು 84 ವಿಷಯಗಳಲ್ಲಿ ವಿಷಯ ಸಂಖ್ಯೆ 3ಕ್ಕೆ ಸಂಬಂಧಿಸಿದಂತೆ ಒಳ ಚರಂಡಿ, ವಿಳಂಬ, ರಸ್ತೆ ಗುಂಡಿಗಳು, ಆಡಳಿತದಲ್ಲಿ ಭ್ರಷ್ಟಾಚಾರತುಂಬಿ ತುಳುಕಿರುವುದಾಗಿ ಆರೋಪಿಸಿದ ಲಿಂಗರಾಜ ಕೋಳಿಹಳ್ಳಿ ಮತ್ತು ಪ್ರಕಾಶ ಬುರುಡಿಕಟ್ಟೆ ಅವರುಗಳು ಸೂಕ್ತ ದಾಖಲಾತಿಯೊಂದಿಗೆ ಸಭೆಯಲ್ಲಿಪ್ರಚುರಪಡಿಸಿದರು. 

ಆರೋಪಗಳಿಗೆ ಸೂಕ್ತವಾಗಿ ಉತ್ತರಿಸಲಾಗದೆಅಧ್ಯಕ್ಷರು-ಪೌರಾಯುಕ್ತರುಆಯಾ ಇಲಾಖೆಗೆ ಸಂಬಂಧಿಸಿದ ಅಭಿಯಂತರರುತಡಕಾಡುವಂತ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿತ್ತು. 

ಉದ್ಯಾನವನಅಭಿವೃದ್ಧಿಕುರಿತು ಸುಧೀರ್ಘಚರ್ಚೆ ನಡೆದು, ಪ್ರತಿವಾದದ ನಂತರಅಂತಿಮವಾಗಿ ಬಿಗಿಪಟ್ಟು ಸಡಿಲಿಸದ ಪ್ರತಿಪಕ್ಷ ಸದಸ್ಯರ​‍್ರಭಾವದಿಂದ ಉಪ ಸೂಚನೆ ಮಂಡಿಸಿದ ಪ್ರಕಾಶ್ ಪ್ರಕಾಶ್ ಬುರಡಿಕಟ್ಟಿಅವರುಒಟ್ಟುಕ್ರಮ ಸಂಖ್ಯೆ 23ರ ವರೆಗೆಬೀದಿ ನಾಯಿಗಳ ಸಂತಾನ ಹರಣಕುರಿತು ಬಹುತೇಕ ಸದಸ್ಯರು ನಗೆಗಡಲಲ್ಲಿ ತೇಲುವಂತಾಗಿತ್ತು. 

ನಗರ ಸಭೆಯ 23 ಮತ್ತು 24ನೇ ಸಾಲಿನ ನಿಯಮಕಾಮಗಾರಿಕುರಿತುಚರ್ಚೆ ಮುನ್ನಲೆಗೆ ಬಂದ ವಿಷಯಕ್ಕೆ ಅಧಿಕಾರಿಗಳು ಭ್ರಷ್ಟಾಚಾರ ಹೆಸಗುವ ಗುತ್ತಿಗೆದಾರರಿಗೆಕಾಮಗಾರಿ ನೀಡಿದ್ದಾರೆಎಂದು ಬಲವಾಗಿ ಆರೋಪಿಸಿದರು.ಕೂಡಲೇಅವರನ್ನುಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಗುತ್ತಿಗೆದಾರರು, ಹೊರಗುತ್ತಿಗೆದಾರರಿಗೆ ನಾಲ್ಕಾರು ತಿಂಗಳುಗಳಿಂದ ವೇತನದ ಹಣನೀಡದೆ ಸತಾಯಿಸುತ್ತಿರುವುದು ಸರ್ವ ಸದಸ್ಯರಿಗೂಗೊತ್ತಿದೆ. ಈ ಕುರಿತು ಪೌರಾಯುಕ್ತರುಯಾವುದೇಕ್ರಮ ಕೈಗೊಳ್ಳದೆಕಾರ್ಮಿಕರ ವಿರೋಧಿಧೋರಣೆಅನುಸರಿಸುತ್ತಿದ್ದಾರೆಎಂದು ಆರೋಪಿಸಿದ ಸದಸ್ಯರುಗುತ್ತಿಗೆ ರದ್ದುಪಡಿಸಿ, ನೇರವಾಗಿ ಪೌರಕಾರ್ಮಿಕರಿಗೆ ವೇತನದೊರಕಿಸಲು ಮುಂದಾಗಬೇಕೆಂದು ಆಗ್ರಹಿಸಿದರು.ಈ ವಿಷಯವಾಗಿ ಪಕ್ಷಾತೀತವಾಗಿಎಲ್ಲ ಸದಸ್ಯರು ಹೊರಗುತ್ತಿಗೆ ಪೌರಕಾರ್ಮಿಕರ ಪರವಾಗಿತಮ್ಮ ವಾದ ಮಂಡಿಸಿದರು. 

ವಾಣಿಜ್ಯ ನಗರದಲ್ಲಿ ಎಸ್‌ಎಪ್‌ಸಿ ವಿಶೇಷ ಅನುದಾನದಲ್ಲಿಟೋಯಿಂಗ್ ವಾಹನ ಖರೀದಿಸಲು ಮುಂದಾಗಿದ್ದು ಸರಿಯಲ್ಲ, ಅದರಅಗತ್ಯವೂ ನಗರಕ್ಕಿಲ್ಲ.ಇಲ್ಲಿಯವರೆಗೂಸಂಚಾರಿ ನಿಯಮಗಳು ಸಾರ್ವಜನಿಕರಿಗೆ ಸರಿಯಾಗಿಗೊತ್ತೇಇಲ್ಲ. ಹೀಗಿರುವಾಗಅದರಅಗತ್ಯತೆ ಏನು? ಎಂದು ಬಹು ಸದಸ್ಯರು ಪ್ರಶ್ನಿಸಿದರು. 

ಈ ಹಿಂದೆಜನಸಾಮಾನ್ಯರಅನುಕೂಲತೆಗಾಗಿ, ಮುಕ್ತಿ ಕೈಲಾಸ ವಾಹನ ಖರೀದಿಸಬೇಕು ಎಂಬ ಠರಾವ ಪಾಸ್‌ಆಗಿತ್ತು.ಇದುವರೆಗೂಕಾರ್ಯರೂಪಕ್ಕೆ ಬಂದಿಲ್ಲ. ಹಾಗಾದರೆ ಸದಸ್ಯರಒಮ್ಮತದಠರಾವಿಗೆಕಿಮ್ಮತ್ತೆಲ್ಲಿದೆಎಂದುಪ್ರಕಾಶ್ ಬುರಡಿಕಟ್ಟಿ ಹಾಗೂ ನಿಂಗರಾಜ ಕೋಡಿಹಳ್ಳಿ ತಮ್ಮಆಕ್ರೋಶ ಹೊರಹಾಕಿದರು. 

ವಿಷಯ 48ಕ್ಕೆ ಸಂಬಂಧಿಸಿದಂತೆ ನಗರಸಭೆ ಸ್ವತ್ತಿನಕ್ರೀಡಾಂಗಣಕ್ರೀಡಾ ಇಲಾಖೆಗೆ ಹಸ್ತಾಂತರಕುರಿತು ನಡೆದಚರ್ಚೆಗೆ, ಇಲಾಖೆಗೆ ವರ್ಗಾಯಿಸುವುದು ಬೇಡ. ಯಾವುದೇ ಸಮುದಾಯಗಳ ಸಾರ್ವಜನಿಕ ಕಾರ್ಯಕ್ರಮಗಳು ಇಲ್ಲೇ ನಡೆಯುವುದು.ಹೀಗಿರುವಾಗ ಹಸ್ತಾಂತರ ಬೇಡ, ನಗರಸಭೆಯಲ್ಲಿಯೇ ಮುಂದುವರಿಯಲಿ ಎಂದು ಸದಸ್ಯರು ಪ್ರತಿಪಾದಿಸಿದರು. 

ಈಗಿರುವ ಹೆಸರಿಸಲಾಗುತ್ತಿರುವ ಬಿಜೆಪಿ ಕಚೇರಿಯನ್ನುಕಾಂಗ್ರೆಸ್‌ವಶಪಡಿಸಿಕೊಳ್ಳಲು ಹೊರಟಿರುವಕ್ರಮಕ್ಕೆ ಬಹು ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದವರು,ಯಾವುದೇಕಾರಣಕ್ಕೂಅದನ್ನು ಹಸ್ತಾಂತರಿಸಲು ಸಾಧ್ಯವಾಗಲಾರದುಎಂದುಕಿಡಿಕಾರಿದರು.ಈ ವಿಚಾರಕೋರ್ಟನಲ್ಲಿಇರುವುದರಿಂದಇದನ್ನು ಪ್ರಸ್ತುತಪಡಿಸುವುದು ಸಮಂಜಸವಲ್ಲ. ಇತ್ಯರ್ಥವಾದ ಬಳಿಕ ಮುಂದಿನ ವಿಚಾರ ಮಾಡೋಣವೆಂದು ಪೌರಾಯುಕ್ತರು ಹೇಳಿದರು. 

ಅಭಿವೃದ್ಧಿ ವಿಷಯದಲ್ಲಿ ನಮ್ಮದೇನೂತಕರಾರಿಲ್ಲ.ಆದರೆ, ನಿಯಮ ಬಾಹಿರವಾಗಿ ನಡೆಯುವುದು ಸರಿಯಲ್ಲ.ಅಭಿವೃದ್ಧಿ ವಿಷಯದಲ್ಲಿತಮ್ಮ ಸಂಪೂರ್ಣ ಬೆಂಬಲವಿದೆಎಂದು ಪ್ರತಿಪಕ್ಷ ಸದಸ್ಯರು ಆಡಳಿತ ಸದಸ್ಯರಿಗೆ ಸ್ಪಷ್ಟಪಡಿಸಿದರು. 

ನಗರದ ಪ್ರಮುಖ ವೃತ್ತಗಳಿಗೆ ಮಹನೀಯರ ನಾಮಫಲಕಗಳನ್ನು ಹಾಕಿ ಅವರ ಹೆಸರುಗಳಲ್ಲಿ ವೃತ್ತ ನಿರ್ಮಿಸಲು ಈಗಾಗಲೇ ಅನೇಕರು ನಗರಸಭೆಗೆಅರ್ಜಿ ಸಲ್ಲಿಸಿದ್ದಾರೆ.ಕೆಲವು ಕಡೆ ನಾಮಫಲಕಗಳನ್ನು ಹಾಕಿದ್ದಾರೆ.ಸರ್ಕಲ್‌ಗಳನ್ನು ಮಹನೀಯರ ಹೆಸರಿನಲ್ಲಿ ನಿರ್ಮಿಸಬೇಕೋ, ಬೇಡವೋ ಎಂಬ ಚರ್ಚೆಗೆಒಮ್ಮತದ ಪರ ವ್ಯಕ್ತವಾಯಿತು. 

ಬಹುವಿಧದಚರ್ಚೆಯಲ್ಲಿ ಆಡಳಿತ ಪಕ್ಷದಕಾಂಗ್ರೆಸ್ ಮುಖಂಡರಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ಶಶಿಧರ್ ಬಶೇನಾಯ್ಕರ್ ಹಾಗೂ ಬಿಜೆಪಿ ಪ್ರತಿಪಕ್ಷದ ಪ್ರಕಾಶ್ ಬುರುಡಿಕಟ್ಟಿ, ನಿಂಗರಾಜ ಕೋಡಿಹಳ್ಳಿ, ಮಲ್ಲಣ್ಣಅಂಗಡಿ, ರೂಪಾಚಿನ್ನಿಕಟ್ಟಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಪ್ರಭಾವತಿ ತಿಳುವಳ್ಳಿ ಮತ್ತಿತರರು ಭಾಗವಹಿಸಿದ್ದರು. 

ನಗರಸಭಾಅಧ್ಯಕ್ಷೆ ಶ್ರೀಮತಿ ಚಂಪಕರಮೇಶ್ ಬಿಸಲಹಳ್ಳಿ ಅವರುಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ನಾಗರಾಜ್ ಪವಾರ್ (ಕೆಎಮ್‌ಪಿ ಮಣಿ) ಪೌರಾಯುಕ್ತಫಕ್ಕೀರ​‍್ಪ ಇಂಗಳಗಿಇಂಗಳಗಿ ಮತ್ತು ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.