ನಗರ ಶಾಸಕರಿಂದ ಪಿಸ್ತಾ ಹೌಸ್ ರೆಸ್ಟೋರೆಂಟ್ ಉದ್ಘಾಟನೆ
City MLA inaugurates Pista House restaurant
ಬಳ್ಳಾರಿ 22: ನಗರದ ಹೊಸಪೇಟೆ ರಸ್ತೆಯಲ್ಲಿನ ಕಾಮೀನೇನಿ ಆಸ್ಪತ್ರೆ ಪಕ್ಕದಲ್ಲಿ ಫೈವ್ ಸ್ಟಾರ್ ಸ್ಪೆಷಾಲಿಟಿಯೊಂದಿಗೆ. ಪಿಸ್ತ ಹೌಸ್ ರೆಸ್ಟೋರೆಂಟ್ ಕ್ಷೇತ್ರದಲ್ಲಿ ಪ್ರಸಿದ್ಧ ಆಹಾರ ಬ್ರಾಂಡ್ ಹೆಸರು ಹೊಂದಿರುವ ಪಿಸ್ತಾ ಹೌಸ್ ರೆಸ್ಟೋರೆಂಟ್ ಅದ್ದೂರಿ ಯಾಗಿ ಉದ್ಘಾಟನೆ ಗೊಂಡಿತು .ರೆಸ್ಟೋರೆಂಟ್ ಉದ್ಘಾಟನೆ ಮಾಡಲು ನಗರ ಶಾಸಕ ಭರತ್ ರೆಡ್ಡಿ ಅಗಮಿಸಿ ನಗರದಲ್ಲೆ ಅತಿ ದೊಡ್ಡ ರೆಸ್ಟೋರೆಂಟ್ ಇದಾಗಿದ್ದು ಇಂತಹ ರೆಸ್ಟೋರೆಂಟ್ ನಿಂದ ನಗರದ ಅರ್ಕಷಣೆಗೊಂಡಿದೆ ಎಂದರು..ಈ ಪಿಸ್ತಾ ಹೌಸ್ ಮಾಲೀಕ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಪಿಸ್ತಾ ಹೌಸ್ ಬ್ರಾಂಡ್ ಅಮೆರಿಕಾ, ಒಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಖತಾರ್ ಮತ್ತು ಭಾರತದ ಅನೇಕ ಭಾಗಗಳಲ್ಲಿ ಫ್ರಾಂಚೈಸಿಗಳು ಇದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಗುರುತನ್ನು ಪಡೆದಿದೆ.ನಮ್ಮ ಪಿಸ್ತಾ ಹೌಸ್ ನಲ್ಲಿ ಗುಣಮಟ್ಟದ ಶುಚಿ ರುಚಿ ಆಹಾರ ದೊಂದಿಗೆ, ಸ್ವಚ್ಛತೆಗೆ ಆಧ್ಯತೆ ನೀಡಿದೆ.
ಪಿಸ್ತಾ ಹೌಸ್ ವಿಶೇಷತೆಗಳಾದ ಜಾಫ್ರಾನಿ ಬಿರಿಯಾನಿ, ಬೇಕರಿ ಉತ್ಪನ್ನಗಳು ಮತ್ತು ಜಾಫ್ರಾನಿ ಟೀ ಪಿಸ್ತಾ ಹೌಸ್ನ ಪ್ರಮುಖವಾದ ಖಾದ್ಯ ಮತ್ತು ಪಾನೀಯಗಳನ್ನು ಹೊಂದಿದೆ.ಈ ರೆಸ್ಟೋರೆಂಟ್ನಲ್ಲಿ ವೆಜ್ ಮತ್ತು ನಾನ್ ವೆಜ್ ತಯಾರಿಕೆಗೆ ಪ್ರತ್ಯೇಕ ಕಿಚನ್ ವ್ಯವಸ್ಥೆ ಮಾಡಿದೆ. ಈ ರೆಸ್ಟೋರೆಂಟ್ನಲ್ಲಿ 200 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾಮರ್ಥ್ಯದ ಫಕ್ಷನ್ ಹಾಲ್ ಲಭ್ಯವಿದ್ದು, ಇದು ಬರ್ತಡೆ, ಎಂಗೇಜ್ಮೆಂಟ್ ಮತ್ತಿತರೇ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ.ತಾಜಾ ಪದಾರ್ಥಗಳು, ನೈಜ ರುಚಿಗಳು ಮತ್ತು ಉತ್ತಮ ಸೇವೆಗಳ ಮೂಲಕ ಬಳ್ಳಾರಿಯ ಜನರಿಗೆ ಪಿಸ್ತಾ ಹೌಸ್ ಒಂದು ನಂಬಿಗಸ್ತ ಭೋಜನ ಕೇಂದ್ರವಾಗಲಿದೆ, ನಮ್ಮ ಆಹಾರ ಪದಾರ್ಥಗಳನ್ನು ಆನ್ಸೆನ್ ನಲ್ಲಿ ಬುಕ್ ಮಾಡಿದಲ್ಲಿ ಮನೆಗೆ ಸಪ್ಲೈ ಮಾಡಲಿದೆ. ನಮ್ಮ ಈ ಸೇವೆಯನ್ನು ನಗರದ ಜನತೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ.ನಿನ್ನೆ ಸಂಜೆ ಪಿಸ್ತ ಹೌಸ್ ಗೆ ಜನಸಾರವೆ ಹರಿದು ಬಂದಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯ ಉಸ್ತುವಾರಿಯನ್ನು ಮುರಳಿ ಕೃಷ್ಣ ರವರಿಗೆ ವಹಿಸಿದ್ದರು. ರೆಸ್ಟೋರೆಂಟ್ನ ಮ್ಯಾನೇಜರ್ ಹಾಗೂ ಸಹಾಯಕರು ಇತರರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 