ಸೊಗಡು ತಿಳಿಸಲು ಪೌರತ್ವ ತರಬೇತಿ ಶಿಬಿರ ತುಂಬಾ ಉಪಯುಕ್ತವಾಗಿದೆ
Citizenship training camp is very useful for conveying the message
ವಿಜಯಪುರ 20: ಜೀವನವನ್ನು ಪರಿಪೂರ್ಣಗೊಳಿಸಲು ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಸೊಗಡು ತಿಳಿಸಲು ಪೌರತ್ವ ತರಬೇತಿ ಶಿಬಿರ ತುಂಬಾ ಉಪಯುಕ್ತವಾಗಿದೆ ಎಂದು ಡಯಟ್ ಪ್ರಾಚಾರ್ಯೆ ಉಮಾದೇವಿ ಸೊನ್ನದ ಹೇಳಿದ್ದಾರೆ.
ಗುರುವಾರ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಬಳಿ ಇರುವ ಸದ್ಗುರು ಸಚ್ಚಿದಾನಂದ ಮಹಾರಾಜಯರ ಆಶ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಜಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್.ಎಸ್.ಎಸ್ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರ ಮಾತನಾಡಿದರು. ಗ್ರಾಮೀಣ ಭಾಗದ ಸಂಸ್ಕೃತಿಯ ಬಗ್ಗೆ ತಿಳಿಯಲು ಇಂಥ ಶಿಬಿರಗಳು ಅನುಕೂಲವಾಗಿವೆ. ಅಲ್ಲದೇ, ನಗರದ ಜೊತೆಗೆ ಗ್ರಾಮೀಣ ಸೊಗಡನ್ನು ಅರ್ಥ ಮಾಡಿಕೊಂಡು ದೇಶದ ಉತ್ತಮ ನಾಗರಿಕನ್ನಾಗಿ ಮಾಡಲು ಸಹಕಾರಿಯಾಗಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಇಟ್ಟಂಗಿಹಾಳ ಸಮತಾ ನಿಕೇತನ ಚಾರಿಟೇಬಲ್ ಟ್ಸಸ್ಟ್ ಸದಸ್ಯ ಎಂ. ಎಂ. ಬಿರಾದಾರ, ಕಾಲೇಜಿನ ಪ್ರಾಚಾರ್ಯೆ ಡಾ. ಬಿ ವೈ ಖಾಸನಿಸ, ಸಹಪ್ರಾಧ್ಯಾಪಕ ಡಾ. ಎಂ. ಬಿ. ಕೋರಿ, ಆಶ್ರಮದ ಚೇರಮನ್ ಡಾ. ಎಂ. ಎಸ್. ಹಿರೇಮಠ, ಏನ್.ಎಸ್.ಎಸ್ ಸಂಯೋಜಕ ಡಾ. ಬಿ. ಎಸ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಧನ್ಯವಾದಗಳು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 