ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ನಾಗರಿಕರು: ಅನಾರೋಗ್ಯ ಉಂಟಾಗುವ ಭೀತಿ

ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ನಾಗರಿಕರು: ಅನಾರೋಗ್ಯ ಉಂಟಾಗುವ ಭೀತಿ Citizens throwing garbage everywhere: Fear of illness

ಗದಗ 28: ಮುದ್ರಣ ನಗರಿ ಎಂದೇ ಖ್ಯಾತಿಯನ್ನು ಪಡೆದ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 23 ನೇ ವಾರ್ಡಿನ ಒಕ್ಕಲಗೇರಿ ಓಣಿಯ ಕುಲಕರ್ಣಿ ಗಲ್ಲಿ ಹಾಗೂ ಹನಮನ ಗರಡಿ ಬಡಾವಣೆಯ ವ್ಯಾಪ್ತಿಯ ಪ್ರಮುಖ ರಸ್ತೆಯು ಶ್ರೀ ವೀರ ನಾರಾಯಣ ದೇವಸ್ಥಾನ, ಮುಳಗುಂದ ನಾಕಾ, ಸರಾಫ್ ಬಜಾರ್ ಹಾಗೂ ಗಂಜೀ ಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಶಾಬಾದಿಮಠ ರವರ ಮನೆ ( ಲಿಜ್ಜತ್ ಪಾಪಡ್ ಘಟಕ) ದ ಎದುರಿಗೆ ಸಾರ್ವಜನಿಕ ಮುತ್ರಾಲಯವಿದ್ದು, ಅದಕ್ಕೆ ಹೊಂದಿಕೊಂಡಿರುವ ಸಾರ್ವಜನಿಕ ಜಾಗದಲ್ಲಿ ಅವೈಜ್ಞಾನಿಕವಾಗಿ ಬಡಾವಣೆಯ ನಾಗರಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿರುವರು ಇದರಿಂದ ಸದರ ಬಡಾವಣೆಯು ದುರ್ವಾಸನೆಯಿಂದ ಕೂಡಿ ರೋಗರೂಜೀನದಿಂದ ಅನಾರೋಗ್ಯ ಉಂಟಾಗುವ ಭೀತಿಯಲ್ಲೇ ಜೀವಿಸುವಂತಾಗಿರುತ್ತದೆ. ಈ ಬಡಾವಣೆಯ ಮೂಲಕ ಸಂಚರಿಸುವ ನಾಗರಿಕರಿಗೆ ಕಸದ ರಾಶಿಯ ಹತ್ತಿರದಲ್ಲಿರುವ ಬೀಡಾಡಿ ದನಗಳು  ಹಾಗೂ ಬೀದಿ ನಾಯಿಗಳ ಆಕ್ರಮಣದಿಂದ ಹಲವಾರು ನಾಗರಿಕರಿಗೆ ದೈಹಿಕವಾಗಿ ಅಪಾರ ತೊಂದರೆ ಆಗಿರುತ್ತವೆ.   

ಸಾರ್ವಜನಿಕ ಸ್ಥಳದಲ್ಲಿ ಕಂಡ ಕಂಡಲ್ಲಿ ಕಸ ಹಾಕಿದವರಿಗೆ ದಂಡ ವಿಧಿಸಿ : ಗದಗ ಬೆಟಗೇರಿ ನಗರಸಭೆಯಿಂದ  ಕಸದ ವಿಲೇವಾರಿಗಾಗಿ ಮನೆ ಮನೆಗೆ ಕಸ ಸಂಗ್ರಹ ವಾಹನಗಳನ್ನು ಪ್ರತಿದಿನವೂ ಒದಗಿಸುತ್ತಿದ್ದರೂ ಅದರಂತೆ ನಗರದ ಸ್ವಚ್ಛತೆಗಾಗಿ ಹಲವಾರು ಅಗತ್ಯ ಕ್ರಮಗಳನ್ನು ಕ್ರೈಂಗೊಂಡರೂ ಜನಸಾಮಾನ್ಯರು ಮಾತ್ರ ಸಾರ್ವಜನಿಕ ಮುಕ್ತ ಪ್ರದೇಶದಲ್ಲಿ ಕಸ ಎಸೆಯುವ ಪ್ರವೃತ್ತಿ ಬಿಟ್ಟಿಲ್ಲ. ಹೀಗಾಗಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ಮತ್ತು ಕ್ರಿಮಿನಲ್ ದಾವೆಯನ್ನು  ಹೂಡುವ ಕ್ರಮಕ್ಕೆ ಮುಂದಾಗಲು ಅಗತ್ಯ ನಿಗದಿತ ಸಾರ್ವಜನಿಕ ಸ್ಥಳಗಳಲ್ಲಿ ಸಿ ಸಿ ಕ್ಯಾಮರಾ ಅಳವಡಿಸಲು ನಗರಸಭೆಯು ಮುಂದಾಗಬೇಕಾಗಿರುತ್ತದೆ 

ಈಗಾಗಲೇ ನಗರಸಭೆಯ ವತಿಯಿಂದ ಸಾರ್ವಜನಿಕರಿಗೆ ಕಸವನ್ನು ಹಸಿ ಮತ್ತು ಒಣ ಕಸ ವಿಂಗಡಿಸಿ ಕಸ ವಿಲೇವಾರಿ ವಾಹನಕ್ಕೆ ನೀಡುವ ಅವಿಸ್ಮರಣೀಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿರುತ್ತದೆ. ಆದರೂ ಕೂಡಾ ಬಡಾವಣೆಯ ಪ್ರಮುಖ ಸಾರ್ವಜನಿಕ ರಸ್ತೆಗಳು ಮಾತ್ರ ಕಸದ ರಾಶಿಯ ಗೂಡಾಗುತ್ತಿರುವದು ಇದು ಅವಳಿ ನಗರದ ಸೌಠರ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.  

ಆದುದರಿಂದ ಈ ಕುರಿತು ಗದಗ ಬೆಟಗೇರಿ ನಗರಸಭೆಯ ವತಿಯಿಂದ ಕಠಿಣ ನಿರ್ಧಾರ ಕೈಗೊಂಡು ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆಯುವವರನ್ನು ಕಂಡಲ್ಲಿ ಹಿಡಿದು ದಂಡ ವಿಧಿಸುವಂತಾಗಬೇಕು. ಇಂಥವರ ಪತ್ತೆ ಹಚ್ಚಿ ಹಿಡಿಯಲು ನಗರಸಭೆ ಹಗಲು ರಾತ್ರಿ ಗಸ್ತು, ಹಾಗೂ ಸಿ ಸಿ ಕ್ಯಾಮರಾ ನೆರವಿನ ಮೂಲಕ  ರಾತ್ರಿ ಹಾಗೂ ನಸುಕಿನ ಜಾವದಲ್ಲಿ ಈ ಭಾಗದಲ್ಲಿ ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಕುವುದನ್ನು ತಡೆಯಲು ಮುಂದಾಗಬೇಕೆಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.