ಐತಿಹಾಸಿಕ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ 23 ನೇ ವಾರ್ಡಿನ ನಾಗರಿಕರು ಭಾಗಿ

ಐತಿಹಾಸಿಕ  42,345 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ 23 ನೇ ವಾರ್ಡಿನ ನಾಗರಿಕರು ಭಾಗಿ Citizens of Ward 23 participate in historic 42,345 house handover ceremony

ಲೋಕದರ್ಶನ ವರದಿ 

ಐತಿಹಾಸಿಕ  42,345 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ 23 ನೇ ವಾರ್ಡಿನ ನಾಗರಿಕರು ಭಾಗಿ 

ಗದಗ 24:- ರಾಜ್ಯದ ಇತಿಹಾಸದಲ್ಲಿಯೇ ಇದೇ ​‍್ರ​‍್ರಥಮ ಬಾರಿಗೆ ಕರ್ನಾಟಕ ಸರಕಾರದ ವಸತಿ ಇಲಾಖೆಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಇಂದು ದಿನಾಂಕ 24 ರಂದು ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. 

 ಸದರ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಜನಪ್ರಿಯ ನಗರಸಭೆ ಸದಸ್ಯರಾದ ಜನಾಬ್ ಬರಕತ್ ಅಲಿ ಮುಲ್ಲಾ ಹಾಗೂ ಅವರ ಅಭಿಮಾನಿಗಳು, ಬೆಂಬಲಿಗರಾದ ಮಹಾಬೂಬ್ ಸಾಬ್ ಅಡರಕಟ್ಟಿ, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಶಿರಾಜ್ ಸೈಪಣ್ಣವರ ಹಾಗೂ ಬಡಾವಣೆಯ ನಾಗರಿಕರು  ಈ ಒಂದು ಐತಿಹಾಸಿಕ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.