ಸಿನಿದರ್ಶನ ಲ್ಯಾಂಡ್ ಲಾರ್ಡ್ -ಸಾರಥಿ
Cinematography Land Lord - Sarathi
ಲ್ಯಾಂಡ್ ಲಾರ್ಡ್ -ಸಾರಥಿ ಸಿನಿಮಾಗಳ ಬಗ್ಗೆ ಹೆಮ್ಮೆಯಿದೆ: ಸತ್ಯಪ್ರಕಾಶ್ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಕಂಟೆಂಟ್ ಇರುವ ಸಿನಿಮಾ ಲ್ಯಾಂಡ್ ಲಾರ್ಡ್ ಸಾರಥಿ ಸಿನಿಮಾ ಬಗ್ಗೆ ಇಂದಿಗೂ ನಮಗೆ ಹೆಮ್ಮೆಯಿದೆ. ಆಪ್ಟರ್ 14 ವರ್ಷಗಳ ನಂತರ ಸಮಾನತೆ ಹಾಗೂ ನಮ್ಮ ಮಣ್ಣಿನ ಕಥೆ ಹೇಳುವ ಲ್ಯಾಂಡ್ ಲಾರ್ಡ್ ಸಿನಿಮಾ ಬಗ್ಗೆ ಖುಷಿ-ಹೆಮ್ಮೆ ಎನಿಸುತ್ತದೆ, ಎಂದು ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್ ಹೇಳಿದರು. ಹಿಂದೆ ಡಾ.ರಾಜ್ ಕುಮಾರ್ ಬಂಗಾರದ ಮನುಷ್ಯ ಸಿನಿಮಾ ಮಾಡಿ ಹಳ್ಳಿಬದುಕಿಗೆ ಸ್ಪೂರ್ತಿಯಾಗಿದ್ದರು. ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ರೈತ ಹಾಗೂ ಹೋರಾಟಗಾರನ ಪಾತ್ರದಲ್ಲಿ ವಿಜಯ್ ನಟನೆಯಲ್ಲಿ ರಾಜ್ ಕುಮಾರ್ ರೀತಿ ಜನರಿಗೆ ಇಷ್ಟವಾಗುತ್ತಾರೆ, ಎಂದು ತಮ್ಮ ಸಿನಿಮಾ ಬಗ್ಗೆ ಸತ್ಯಪ್ರಕಾಶ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡರು.
ಹಿಂದೆ ಕಾಟೇರಾ ಸಿನಿಮಾಕ್ಕೆ ಚಿತ್ರಕಥೆ ಬರೆದ ಜಡೇಶ್ ಕೆ.ಹಂಪಿ ಲ್ಯಾಂಡ್ ಲಾರ್ಡ್ ಸಿನಿಮಾಕ್ಕೆ ನಿರ್ದೇಶಕರು. ಬಹುಕೋಟಿ ಬಂಡವಾಳದ ಈ ಸಿನಿಮಾದಲ್ಲಿ ದುನಿಯಾ ವಿಜಯ್, ರಚಿತಾ ರಾಮ್ , ರಾಜ್ ಬಿ ಶೆಟ್ಟಿ, ರಿತನ್ಯಾ ವಿಜಯ್ ಸೇರಿದಂತೆ ದೊಡ್ಡಬಳಗ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲ್ಯಾಂಡ್ ಲಾರ್ಡ್ ಟ್ರೇಲರ್ ನ್ನು ದುನಿಯಾ ವಿಜಯ್ ಬೆಂಗಳೂರಿನ ನಂದಿಲಿಂಕ್ಸ್ ಗ್ರೌಂಡ್ ನಲ್ಲಿ ಅದ್ಧೂರಿ ಕಾರ್ಯಕ್ರಮದಲ್ಲಿ ರೀಲೀಸ್ ಮಾಡಿದರು. ಈ ಸಿನಿಮಾ ಸಮಾನತೆಯನ್ನು ಸಾರುವ ಕಂಟೆಂಟ್ ಹೊತ್ತುಬರಲಿದೆ. ಎಲ್ಲಿ ಬಡವರು, ದಮನಿತರಿಗೆ ಗೌರವ ಕೊಡುವುದಿಲ್ಲವೋ, ಅಲ್ಲಿ ನಾನು ಇರುವುದಿಲ್ಲ, ನೀವು ಇರಕೂಡದು ಎಂದು ದುನಿಯಾ ವಿಜಯ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.
ಸಮಾನತೆ ಪಾಠ ವನ್ನು ಹೇಳುವ ಲ್ಯಾಂಡ್ ಲಾರ್ಡ್ ಸಿನಿಮಾ ಎಲ್ಲರ ಬದುಕಿಗೂ ಕನೆಕ್ಟ್ ಆಗುವ ಸಿನಿಮಾ. ಸಿನಿಮಾ ಆರಂಭದಿಂದ ರೀಲೀಸ್ ವರೆಗೂ ಸಲಗ ವಿಜಯ್ ನಮ್ಮ ಜೊತೆ ಇದ್ದು ಸಿನಿಮಾ ಅತ್ಯುತ್ತಮವಾಗಿ ಮೂಡಿಬರುವಂತೆ ಮಾಡಿದ್ದಾರೆ, ಎಂದು ನಿರ್ಮಾಪಕ ಹೇಮಂತ್ ಗೌಡ ಕೆ.ಎಸ್.ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು. ಟ್ರೇಲರ್ ಹಾಗೂ ಹಾಡುಗಳಿಂದ ಜನರ ಮನಸ್ಸನ್ನು ಸೆಳೆದ ಲ್ಯಾಂಡ್ ಲಾರ್ಡ್ ಸಿನಿಮಾ ನೋಡಲು ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾ ರಾಜ್ಯ ಮಾತ್ರವಲ್ಲದೇ ಮುಂಬೈ, ಹೈದರಾಬಾದ, ಚೆನೈ ಸೇರಿದಂತೆ ದುಬೈನಲ್ಲೂ 300 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಜನವರಿ 23 ರಂದು ರೀಲೀಸ್ ಮಾಡಲು ಸಾರಥಿ ಫಿಲಂಸ್ ಅದ್ಧೂರಿ ಸಿದ್ಧತೆಯನ್ನು ಮಾಡಿಕೊಂಡಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 