ಬಾಗಲಕೋಟೆ 11:
ಕಳೆದ ಮೂರು ನಾಲ್ಕು ತಿಂಗಳಿಂದ
ಸುದ್ದಿಯಲ್ಲಿದ್ದ ಛಬ್ಬಿಯ ಪ್ರಾಥಮಿಕ ಕೃಷಿ ಪತ್ತಿನ ಸಂಘದ
ಅಧ್ಯಕ್ಷರಾಗಿ ಸೊಕನಾದಗಿಯ ಮಲ್ಲಪ್ಪ ಸಂಗಪ್ಪ ಲಿಂಗದಳ್ಳಿ, ಉಪಾದ್ಯಕ್ಷರಾಗಿ ಛಬ್ಬಿ ಗ್ರಾಮದ ಗೌರವ್ವ ಕಾಕನೂರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಆರ್.ಬಿ.ಬೂದಿ
ಘೋಷಿಸಿದ್ದಾರೆ.
ಯಡಹಳ್ಳಿ, ಛಬ್ಬಿ, ಸೊಕನಾದಗಿ ಗ್ರಾಮಗಳನ್ನೊಳಗೊಂಡ ಈ ಸಂಘಕ್ಕೆ ಕಳೆದ
ಆಗಷ್ಟ 30 ರಂದು ಚುನಾವಣೆ ನಡೆದಿತ್ತು.
ಈ ಸಂಘ ಕಾರ್ಯ ಪ್ರಾರಂಭಗೊಂಡು
ಕಳೆದ 40 ವರ್ಷಗಳಿಂದ ಇದುವರೆಗೂ ಚುನಾವಣೆ ಎದುರಿಸದಿರುವುದು ಒಂದು ವಿಶೇಷ. ಆದರೆ
ಕಳೆದ ಬಾರಿಯ ಅಧ್ಯಕ್ಷ ಹಾಗೂ ಕಾರ್ಯದಶರ್ಿಯ ಅವ್ಯವಹಾರ
ಹಾಗೂ ದುರಾಡಳಿತಕ್ಕೆ ಮೂರು ಗ್ರಾಮದ ಜನ
ರೋಷಿ ಹೋಗಿ ಈ ಬಾರಿ
ಅನಿವಾರ್ಯವಾಗಿ ಚುನಾವಣೆ ಮಾಡಬೇಕಾದ ಪ್ರಸಂಗ ಬಂದಿತ್ತು. ತುರುಸಿನ ಚುನಾವಣೆ ಇದಾಗಿದ್ದರಿಂದ ಬಾಗಲಕೋಟ ಗ್ರಾಮೀಣ ಸರ್ಕಲ್ ಇನ್ಸ್ಪೆಕ್ಟರ ಡಿ.ಡಿ.ದೂಳಖೇಡ,
ಕಲಾದಗಿ ಪಿಎಸ್ಐ ಅಶೋಕ ಚವ್ಹಾಣ ಹಾಗೂ
ಸಿಬ್ಬಂದಿ ವರ್ಗದ ದಕ್ಷ ಕಾರ್ಯದಿಂದ ಶಾಂತಿಯುತವಾದ
ಚುನಾವಣೆ ಜರುಗಿತು.
ಛಬ್ಬಿಯ ರಾಮಣ್ಣ ಸಾಳಗುಂದಿ, ಯಡಹಳ್ಳಿಯ ಅಶೋಕ ಮೇಟಿ, ಛಬ್ಬಿಯ
ಶಿವಾನಂದ ಬೀಳಗಿ, ಸೊಕನಾದಗಿಯ ಅಜರ್ುನ ಮಲ್ಲವ್ವಗೋಳ, ಯಡಹಳ್ಳಿಯ ಭರಮಪ್ಪ ಮೆಣಸಗಿ, ಛಬ್ಬಿಯ ಮುತ್ತಪ್ಪ ಮಾದರ ಹಾಗೂ ಅಧ್ಯಕ್ಷ
ಉಪಾಧ್ಯಕ್ಷ ಸೇರಿದಂತೆ 8 ಜನರ ಸದಸ್ಯರಿದ್ದ ಪ್ರಯುಕ್ತ
ಇವರ ವಿರುದ್ದ ಯಾರು ಚುನಾವಣೆಗೆ ಸ್ಪಧರ್ಿಸದೇ
ಇರುವದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಪ್ರಕ್ರಿಯೆಯಲ್ಲಿ ಸೊಕನಾದಗಿ
ಗ್ರಾಮದ ಸಿದ್ರಾಯಪ್ಪ ರಾಯಪ್ಪನವರ, ರಾಮಚಂದ್ರ ಪೊಲೀಸ್, ಗಿರಿಯಪ್ಪ ಪೊಲೀಸ್, ತಿಮ್ಮಣ್ಣ ನಾವಲಗಿ, ಮಲ್ಲಪ್ಪ ಮಲ್ಲವಗೋಳ, ಮಲ್ಲೇಶ ವಾಲಿಕಾರ, ಲಕ್ಷ್ಮಣ ಚೋರಗತ್ತಿ, ಸಾಬಣ್ಣ ಪೊಲೀಸ್, ಛಬ್ಬಿ ಗ್ರಾಮದ ರಮೇಶ ಅಂತಾಪೂರ, ಮುದಕಪ್ಪ
ಬೂದಿಹಾಳ, ಹಣಮಂತ ಸಾಳಗುಂದಿ, ರಮೇಶ ಮೇಟಿ, ಶೇಖರ
ಸಾಳಗುಂದಿ, ಎಂ.ಸಿ.ಮುರನಾಳ,
ವಿಠಲ ಯಂಕಂಚಿ, ಶ್ರವಣಕುಮಾರ ಸಾಳಗುಂದಿ ಹಾಗೂ ಯಡಹಳ್ಳಿ ಗ್ರಾಮದ
ಎಚ್.ಎನ್.ನೀಲಣ್ಣವರ, ಗುರಪ್ಪ
ನೀಲಣ್ಣವರ, ಪರುತಪ್ಪ ಹದ್ಲಿ, ಶಿವಪ್ಪ ಮೇಲಿಗಿರಿಯಪ್ಪ ನೀಲಣ್ಣವರ, ಜುಮ್ಮಣ್ಣ ಹದ್ಲಿ ಸೇರಿದಂತೆ ಇತರರು ಇದ್ದರು.