ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯನ್ನೇ ಆಯ್ದುಕೊಳ್ಳಿ: ಶ್ರೀಶೈಲ ಗುಡುಮಿ

   ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯನ್ನೇ ಆಯ್ದುಕೊಳ್ಳಿ: ಶ್ರೀಶೈಲ  ಗುಡುಮಿ  Choose a government school for your children's bright future: Srishaila Gudumi

ಲೋಕದರ್ಶನ ವರದಿ 

ಗುರ್ಲಾಪೂರ  02:   ಪಿಎಂಶ್ರೀ ಶಾಸಕರ ಸರ್ಕಾರಿ ಮಾದರಿ ಶಾಲೆ ಗುರ್ಲಾಪೂರ ಮೂಡಲಗಿ ತಾಲೂಕಿನ  ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ.     ದಂಡಾಧಿಕಾರಿಗಳಾದ  ಶ್ರೀಶೈಲ ಗುಡುಮಿ , ಮಾತನಾಡಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯನ್ನೇ ಆಯ್ದುಕೊಳ್ಳಿ ಎಂದರು  ಕ್ಷೇತ್ರ ಸಂಪನ್ಮೂಲ ಸಮನ್ವಾಧಿಕಾರಿಗಳು ಆದ   ರೇಣುಕಾ ಆನಿ,  ಮಾತನಾಡುತ್ತಾ ಮಕ್ಕಳಿಗೆ ಕೇವಲ ಸೌಲಭ್ಯ ಕೊಡುವುದು ಮಕ್ಕಳನ್ನು ದೇಶದ ಸಂಪನ್ಮೂಲ್ವನ್ನಾಗಿ ಮಾಡಿ ಎಂದರು.  ನಾಗರಾಜ   ಮಾತನಾಡುತ್ತಾ ಗುರ್ಲಾಪೂರ ಗ್ರಾಮದ ಜನ ತುಂಬಾ ಶಿಕ್ಷಣ ಪ್ರೇಮಿಯುಳ್ಳವರು ಎಂದು ನುಡಿಯುತ್ತಾ ಒಳ್ಳೆಯ ಶಾಲೆಯು ಆ ಊರಿನ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳನ್ನು ಪ್ರತಿಬಿಂಬಿಸುತ್ತದೆ ಎಂದರು,   

 ಪದೋನ್ನತಿ ಪ್ರಧಾನ ಗುರುಗಳು ಆದ  ಬಿ ಬಿ ಸಸಾಲಟ್ಟಿ  ಬನ್ನಿ ಮೂಡಲಗಿ ತಾಲೂಕಿನ ಗುರ್ಲಾಪುರದ ಪಿಎಂಶ್ರೀ ಶಾಸಕರ ಮಾದರಿ ಶಾಲೆ ಯನ್ನ ಒಮ್ಮೆ ನೋಡೋಣ ಬನ್ನಿ. 1928ರಲ್ಲಿ ಪ್ರಾರಂಭವಾಗಿದೆ ಈ ಶಾಲೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಹತ್ತು ಹಲವಾರು ಸಾವಿರಾರು ಮಕ್ಕಳ ಭವಿಷ್ಯವನ್ನೇ ಬದಲಾಯಿಸಿ ಹಲವಾರು ಇಲಾಖೆಗಳಲ್ಲಿ ಸರ್ಕಾರಿ ನೌಕರಿಗಳನ್ನು ಪಡೆದುಕೊಂಡು ಸಮಾಜವನ್ನೇ ಬದಲಾಯಿಸುವಂಥ ಶಕ್ತಿ ಪಡೆದುಕೊಂಡಿರುವ ಈ ಶಾಲೆಗೆ ಬನ್ನಿ ಕರೆ ಕೊಟ್ಟರು. ಮೂಡಲಗಿ ತಾಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಧ್ರುವತಾರೆಯಂತೆ ಹೊಳೆಯುತ್ತಿರುವ ಸರ್ಕಾರಿ ಶಾಲೆ ಇದು.

ಸಣ್ಣ ಸಣ್ಣ ಕೈತೋಟ ಹೂದೋಟ ಸುತ್ತಮುತ್ತಲು ಹಸಿರು ಗದ್ದೆಗಳ ಮಧ್ಯೆ ರಾರಾಜಿಸುತ್ತಿರುವ ಈ ಶಾಲೆ ಪಿಎಂ ಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುರ್ಲಾಪುರ್, ಸನ್ 2018 26ನೇ ಶೈಕ್ಷಣಿಕ ಸಾಲಿನಲ್ಲಿ ಪಿಎಂ ಶ್ರೀ ಶಾಲೆಯಾಗಿ ಮಾರ​‍್ಪಟಟಿತ್ತು ಹಾಗೂ ಹತ್ತು ಹಲವಾರು ಶೈಕ್ಷಣಿಕ ಪ್ರಗತಿ ಹಾಗೂ ಸಾಧನೆಯನ್ನ ಮಾಡಿದ ಹೆಮ್ಮೆ ಈ ಶಾಲೆಗೆ ಸಿಗುತ್ತದೆ. "ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು" ಎಂಬಂತೆ ಎಲ್ ಕೆ ಜಿಯಿಂದ ಯುಕೆಜಿ ವರೆಗೆ ಮಕ್ಕಳು ಇಂಗ್ಲಿಷ್ ನಲ್ಲಿ ಮಾತನಾಡುವುದು ಪದ್ಯಗಳನ್ನ ಹಾಡುವುದು ನುಡಿಗಟ್ಟುಗಳನ್ನು ಹೇಳುವುದರಲ್ಲಿ ಮುಂಚೆನೆಯಲ್ಲಿದ್ದಾರೆ.

ಸುಮಾರು 18 ಜನ ಶಿಕ್ಷಕ/ಶಿಕ್ಷಕಿಯರು ಕೆಲಸ ನಿರ್ವಹಿಸುತ್ತಾ ಇದ್ದಾರೆ. ಈ ಶಾಲೆಯಲ್ಲಿ ಪ್ರತ್ಯೇಕವಾದ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ವಿಭಾಗ, ಕಂಪ್ಯೂಟರ್ ವಿಭಾಗ, ಸ್ಪೋಕನ್ ಇಂಗ್ಲೀಷ್ ತರಗತಿಗಳು ,ಕ್ರಾಫ್ಟ್‌ ತರಗತಿ ಯೋಗಾ ತರಗತಿ ,ಕರಾಟೆ ,ಕರಿಯರ್ ತರಗತಿಗಳು ಹಾಗೂ ಸಂಗೀತ ಶಿಕ್ಷಣ ದೊಂದಿಗೆ ತಂತ್ರಜ್ಞಾನದ ಮೂಲಕ ಹೊಸ ಹೊಸ ಯೋಜನೆಗಳ ಮೂಲಕ ಬೋಧನೆ ಸಾಗುತ್ತಾ ಇದೆ.

ಎಲ್ಕೆಜಿ ಇಂದ 8ನೇ ತರಗತಿವರೆಗೆ ವಿಶೇಷ ನುರಿತ ಶಿಕ್ಷಕರ ಸಮೂಹವಿದೆ. ಸುತ್ತಮುತ್ತಲಿನ ಎಲ್ಲಾ ಶಾಲೆಯ ಶಿಕ್ಷಕರು ಇಲಾಖೆಯ ಅಧಿಕಾರಿ ವರ್ಗದವರು ಬಂದು ಈ ಶಾಲೆಗೆ  ಭೇಟಿಕೊಟ್ಟು ಶ್ಲಾಘನೀಯ ಮಾತುಗಳು ಆಡಿ ಹೋಗುತ್ತಾರೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಕ್ಲಸ್ಟರ್ ಅಂತ ತಾಲೂಕ ಹಂತ ಹಾಗೂ ಜಿಲ್ಲಾ ಹಂತದಲ್ಲಿ ಕಲೆ ಕ್ರೀಡೆಯಲ್ಲಿ ಸಾಧನೆ ಮಾಡಿ ಶಾಲಿಯ ಕೀರ್ತಿಯನ್ನು ಹೆಚ್ಚುಸುತ್ತ ಇದ್ದಾರೆ. ಪಿಎಂ ಶ್ರೀ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಹಿರಿಯರು ಶಿಕ್ಷಣ ಪ್ರೇಮಿಗಳು ಪಾಲಕ ಪೋಷಕರು, ಹಳೆ ವಿದ್ಯಾರ್ಥಿಗಳ ಸಂಘ  ಸಹಕಾರದೊಂದಿಗೆ ಪ್ರಗತಿಯತ್ತ ಸಾಗುತ್ತಿದೆ , ಎಂದರು.  ಈ ಸಂದರ್ಬದಲ್ಲಿ ಋಢದನಡಢಎಗಿ ತಣಎನಕಿಥಃಢ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಶ್ರೀ ಪಿ ಬಿ ಹಿರೇಮಠ, ಇ ಛ ಒ   ಪಾಂಚಾಳ್ , ದೈಹಿಕ ವಿಷಯ  ಪರೀವೀಕ್ಷಕರು ಆದ ಎಸ್ ಬಿ ಹಳಿಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಯ ಸಿಬ್ಬಂದಿ ಯವರಾದ ಸಿ ಆರ್ ಪಿ   

ಎಸ್ ಎನ್ ದಬಾಡಿ , ಚೇತನ್ ಕುರಿಹುಲಿ , ಸಲೀಂ ,  ಸಂತೋಷ್ , ಚಿದಾನಂದ , ಎಸ್ ಡಿ ಎಂ. ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ , ಉಪಾಧ್ಯಕ್ಷರಾದ  ಶಿವಬಸು ಕದಂ , , ಮುಖ್ಯೋಪಾಧ್ಯರಾದ  ಜಿ ಆರ್  ಪತ್ತಾರ ಸರ್,,  ಜಢಂಚಿಃಣಞಢ ಅಧ್ಯಕ್ಷರು ಪಿ.ಕೆ.ಪಿ.ಎಸ್ ಗುರ್ಲಾಪೂರ. ಪುರಸಭೆ ಸದಸ್ಯರಾದ ಆನಂದ್ ಟಪಾಲದಾರ , ತಹಶೀಲ್ದಾರ್ ಕಚೇರಿ ಸಿಬ್ಬಂದಿ ಅವರಾದ  ನಾಗರಾಜ್ ಯದ್ದಲಗುಡ್ಡ    ಮೂಡಲಗಿ ಶಿಕ್ಷಣ ಸಂಸ್ಥೆಯ ಬಿ ಪಿ ಏಡ್ ಹಾಗೂ ಎಂ ಪಿ ಏಡ್ ಕಾಲೇಜಿನ ಎನ್ ಎಸ್ ಎಸ್ ಸಿಬಿರಾರ್ಥಿಗಳು, ಹಾಗೂ ಶಿಕ್ಷಕ ಅಡುಗೆ ಸಿಬ್ಬಂದಿ ವರ್ಗ ಮತ್ತು ಮಕ್ಕಳು.   ಭಾಗಿಯಾಗಿದ್ದರು.