ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯನ್ನೇ ಆಯ್ದುಕೊಳ್ಳಿ : ಶೈಲ ಗುಡುಮಿ
Choose a government school for your children's bright future: Shaila Gudumi
ಲೋಕದರ್ಶನ ವರದಿ
ಗುರ್ಲಾಪೂರ 03 : ಪಿಎಂಶ್ರೀ ಶಾಸಕರ ಸರ್ಕಾರಿ ಮಾದರಿ ಶಾಲೆ ಗುರ್ಲಾಪೂರ ಮೂಡಲಗಿ ತಾಲೂಕಿನ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡಲಗಿ,ತಾಲೂಕಾ ದಂಡಾಧಿಕಾರಿಗಳಾದ ಶ್ರೀಶೈಲಗುಡುಮಿ, ಮಾತನಾಡಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯನ್ನೇ ಆಯ್ದುಕೊಳ್ಳಿ ಎಂದರು. ಮಾತನಾಡುತ್ತಾ ಗುರ್ಲಾಪೂರ ಗ್ರಾಮದ ಜನ ತುಂಬಾ ಶಿಕ್ಷಣ ಪ್ರೇಮಿ ಯುಳ್ಳವರು ಎಂದು ನುಡಿಯುತ್ತಾ ಒಳ್ಳೆಯ ಶಾಲೆಯು ಆ ಊರಿನ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
ಪದೋನ್ನತಿ ಪ್ರಧಾನ ಗುರುಗಳು ಆದ ಬಿಬಿಸ ಸಾಲಟ್ಟಿ ಬನ್ನಿ ಮೂಡಲಗಿ ತಾಲೂಕಿನ ಗುರ್ಲಾಪುರದ ಪಿಎಂಶ್ರೀ ಶಾಸಕರ ಮಾದರಿ ಶಾಲೆಯನ್ನ ಒಮ್ಮೆ ನೋಡೋಣ ಬನ್ನಿ. 1928ರಲ್ಲಿ ಪ್ರಾರಂಭವಾಗಿದೆ ಈ ಶಾಲೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಹತ್ತು ಹಲವಾರು ಸಾವಿರಾರು ಮಕ್ಕಳ ಭವಿಷ್ಯವನ್ನೇ ಬದಲಾಯಿಸಿ ಹಲವಾರು ಇಲಾಖೆಗಳಲ್ಲಿ ಸರ್ಕಾರಿನೌಕರಿಗಳನ್ನು ಪಡೆದುಕೊಂಡು ಸಮಾಜವನ್ನೇ ಬದಲಾಯಿಸುವಂಥ ಶಕ್ತಿಪಡೆದುಕೊಂಡಿರುವ ಈಶಾಲೆಗೆ ಬನ್ನಿಕರೆಕೊಟ್ಟರು.
ಮೂಡಲಗಿ ತಾಲೂಕಿನ ಒಂದು ಸಣ್ಣಹಳ್ಳಿಯಲ್ಲಿ ಧ್ರುವತಾರೆಯಂತೆ ಹೊಳೆಯುತ್ತಿರುವ ಸರ್ಕಾರಿ ಶಾಲೆ ಇದು. ಸಣ್ಣಸಣ್ಣ ಕೈತೋಟ ಹೂದೋಟ ಸುತ್ತಮುತ್ತಲು ಹಸಿರು ಗದ್ದೆಗಳ ಮಧ್ಯೆ ರಾರಾಜಿಸುತ್ತಿರುವ ಈಶಾಲೆ ಪಿಎಂಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುರ್ಲಾಪುರ್, ಸನ್ 2018 26ನೇ ಶೈಕ್ಷಣಿಕ ಸಾಲಿನಲ್ಲಿ ಪಿಎಂಶ್ರೀ ಶಾಲೆಯಾಗಿ ಮಾರ್ಪಟಟಿತ್ತು ಹಾಗೂ ಹತ್ತು ಹಲವಾರು ಶೈಕ್ಷಣಿಕ ಪ್ರಗತಿ ಹಾಗೂ ಸಾಧನೆಯನ್ನ ಮಾಡಿದ ಹೆಮ್ಮೆ ಈ ಶಾಲೆಗೆ ಸಿಗುತ್ತದೆ. "ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು" ಎಂಬಂತೆ ಎಲ್ಕೆಜಿಯಿಂದ ಯುಕೆಜಿವರೆಗೆ ಮಕ್ಕಳು ಇಂಗ್ಲಿಷ್ನಲ್ಲಿ ಮಾತನಾಡುವುದು ಪದ್ಯಗಳನ್ನ ಹಾಡುವುದು ನುಡಿಗಟ್ಟುಗಳನ್ನು ಹೇಳುವುದರಲ್ಲಿ ಮುಂಚೆನೆಯಲ್ಲಿದ್ದಾರೆ.
ಸುಮಾರು 18 ಜನ ಶಿಕ್ಷಕ/ಶಿಕ್ಷಕಿಯರು ಕೆಲಸ ನಿರ್ವಹಿಸುತ್ತಾ ಇದ್ದಾರೆ. ಈ ಶಾಲೆಯಲ್ಲಿ ಪ್ರತ್ಯೇಕವಾದ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾವಿಭಾಗ, ಕಂಪ್ಯೂಟರ್ವಿಭಾಗ, ಸ್ಪೋಕನ್ ಇಂಗ್ಲೀಷ ತರಗತಿಗಳು ,ಕ್ರಾಫ್ಟ ತರಗತಿ ಯೋಗಾ ತರಗತಿ ,ಕರಾಟೆ ,ಕರಿಯರ್ ರಗತಿಗಳು ಹಾಗೂ ಸಂಗೀತ ಶಿಕ್ಷಣದೊಂದಿಗೆ ತಂತ್ರಜ್ಞಾನದ ಮೂಲಕ ಹೊಸ ಹೊಸಯೋಜನೆಗಳ ಮೂಲಕ ಬೋಧನೆ ಸಾಗುತ್ತಾ ಇದೆ. ಎಲ್ಕೆಜಿ ಇಂದ 8ನೇತರಗತಿವರೆಗೆ ವಿಶೇಷ ನುರಿತ ಶಿಕ್ಷಕರ ಸಮೂಹವಿದೆ.
ಸುತ್ತಮುತ್ತಲಿನ ಎಲ್ಲಾ ಶಾಲೆಯ ಶಿಕ್ಷಕರು ಇಲಾಖೆಯ ಅಧಿಕಾರಿ ವರ್ಗದವರು ಬಂದು ಈ ಶಾಲೆಗೆ ಭೇಟಿ ಕೊಟ್ಟು ಶ್ಲಾಘನೀಯ ಮಾತುಗಳು ಆಡಿಹೋಗುತ್ತಾರೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಕ್ಲಸ್ಟರ್ ಅಂತ ತಾಲೂಕ ಹಂತ ಹಾಗೂ ಜಿಲ್ಲಾಹಂತದಲ್ಲಿ ಕಲೆ ಕ್ರೀಡೆಯಲ್ಲಿ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚುಸುತ್ತ ಇದ್ದಾರೆ. ಪಿಎಂಶ್ರೀ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಹಿರಿಯರು ಶಿಕ್ಷಣ ಪ್ರೇಮಿಗಳು ಪಾಲಕ ಪೋಷಕರು, ಹಳೆ ವಿದ್ಯಾರ್ಥಿಗಳ ಸಂಘ ಸಹಕಾರದೊಂದಿಗೆ ಪ್ರಗತಿಯತ್ತ ಸಾಗುತ್ತಿದೆ, ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಶ್ರೀಪಿಬಿ ಹಿರೇಮಠ, ಇ ಛ ಒಪಾಂಚಾಳ್ , ದೈಹಿಕವಿಷಯ ಪರೀವೀಕ್ಷಕರು ಆದ ಎಸ್ಬಿಹಳಿಗೌಡರ, ಕ್ಷೇತ್ರಶಿಕ್ಷಣಾಧಿಕಾರಿಗಳಕಾರ್ಯಾಲಯ ಮೂಡಲಗಿಯ ಸಿಬ್ಬಂದಿಯವರಾದ ಸಿಆರ್ಿ ಎಸ್‌ಎನ್ದಬಾಡಿ, ಚೇತನ್ಕುರಿ ಹುಲಿ, ಸಲೀಂ , ಸಂತೋಷ್ , ಚಿದಾನಂದ, ಎಸ್ಡಿಎಂ. ಸಿ ಅಧ್ಯಕ್ಷರಾದ ಎಲ್ಪಿನೇಮ ಗೌಡರ , ಉಪಾಧ್ಯಕ್ಷರಾದ ಶಿವಬಸುಕದಂ ,, ಮುಖ್ಯೋಪಾಧ್ಯರಾದ ಜಿಆರ್ ಪತ್ತಾರ ಸರ್,, ಅಧ್ಯಕ್ಷರು ಪಿ.ಕೆ.ಪಿ.ಎಸ್‌ಗುರ್ಲಾಪೂರ.,ತಹಶೀಲ್ದಾರ್ಕಚೇರಿ ಸಿಬ್ಬಂದಿ ಅವರಾದ ನಾಗರಾಜ್ಯ ಯದ್ದಲಗುಡ್ಡ.ಮೂಡಲಗಿ ಶಿಕ್ಷಣಸಂಸ್ಥೆಯ ಬಿಪಿಏಡ್ಹಾ ಗೂ ಎಂಪಿಏಡ್ಕಾಲೇಜಿನ ಎನ್‌ಎಸ್‌ಎಸ್ಸಿ ಬಿರಾರ್ಥಿಗಳು, ಹಾಗೂ ಶಿಕ್ಷಕ ಅಡುಗೆ ಸಿಬ್ಬಂದಿ ವರ್ಗ ಮತ್ತು ಮಕ್ಕಳು. ಭಾಗಿಯಾಗಿದ್ದರು.
.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 