ಚೋಕಾವಿ ಹಾಗೂ ತಮದಡ್ಡಿ ಗ್ರಾಮದಿಂದ ಪ್ರಜಾಸೌಧ ಸ್ಥಳ ವಿರೋಧ-56ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ
Chokavi and Tamadadi villages oppose Praja Soudha site - full support for the 56th day of the sit-in
ತಾಳಿಕೋಟೆ: ತಾಲೂಕಿನ ಮಲ್ಲೇಶ್ವರ ಗ್ರಾಮದ ಬಳಿ ನಿರ್ಮಿಸಲು ಗುರುತಿಸಿರುವ ಪ್ರಜಾಸೌಧ ಸ್ಥಳ ಆಯ್ಕೆ ವಿರೋಧಿಸಿ ನಡೆಯುತ್ತಿರುವ ಅನರ್ದಿಷ್ಟಾವದಿ ಧರಣಿ ಸತ್ಯಾ ಗ್ರಹ ಯಶಸ್ವಿಯಾಗಿ 57ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ 56 ದಿನಗಳನ್ನು ಪೂರೈಸಿದ ಈ ಹೋರಾಟಕ್ಕೆ ಚೊಕಾವಿ ಹಾಗೂ ತಮದಡ್ಡಿ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡಿ ಹೋರಾಟಕ್ಕೆ ಭಾಗವಹಿಸಿದ್ದರು.
ದ ಸಂ ಸಬೆಳಗಾವಿ ವಿಭಾಗೀಯ ಸಂಚಾಲಕ ದೇವಿಂದ್ರ ಹಾದಿಮನಿ ಮಾತನಾಡಿ ಪ್ರಜಾಸೌದ ನಾಲ್ಕರಿಂದ ಐದು ಕಿಲೋಮೀಟರ ದೂರದಲ್ಲಿ ನಿರ್ಮಾಣವಾದರೆ ರೈತರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರು, ಅಂಗವಿಕಲರು, ವೃದ್ದರಿಗೆ ತುಂಬಾ ತೊಂದರೆಯಾಗುತ್ತದೆ. ಈ ಹೋರಾಟ ನಡೆದು 56 ದಿನಗಳು ಕಳೆದರೂ ಸಹ ಮತಕ್ಷೇತ್ರದ ಶಾಸಕರು ನೋಡಿದರೂ ಸಹ ನೋಡದ ಹಾಗೆ ಹೋಗುತ್ತಿರುವುದು ನೋಡಿದರೆ ಇದೆ ತಾಳಿಕೋಟಿ ಜನರಿಗೆ ನೀಡುವ ಕೊಡುಗೆ ಎಂದು ತಿಳಿಸಿದರು.
ಸಚೀನ ತಳವಾರ ಯುವ ಮುಖಂಡ ಮಾತನಾಡಿ ಸಮಸ್ತ ತಾಲೂಕಿನ ಜನರಿಗೆ ಅನುಕೂಲಕರ ರೀತಿಯಲ್ಲಿ ಪಟ್ಟಣದಲ್ಲಿಯೇ ಪ್ರಜಾಸೌದ ನಿರ್ಮಿಸಿ ಆದರೆ ಸುಮಾರು 5ಕಿಲೋಮೀಟರ ದೂರದಲ್ಲಿ ಪ್ರಜಾಸೌದ ನಿರ್ಮಿಸುವುದು ಯಾರ ಹಿತಕ್ಕಾಗಿ ಎಂಬುದು ಸಾರ್ವಜನಿಕರಿಗೆ ತಿಳಿದು ಬಂದಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳೇ ನಿರ್ಣಾಯಕರಾಗಿರುತ್ತಾರೆ ಇದನ್ನು ಅರಿತು ತಾಲೂಕ ಆಡಳಿತ ಪ್ರಜಾಸೌಧ ಜನರು ತಲಪುವ ಹಾಗೆ ಸೂಕ್ತ ಸ್ಥಳದಲ್ಲಿ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ತಾಲೂಕು ಹೋರಾಟ ಸಮಿತಿ ಉಪಾಧ್ಯಕ್ಷರಾದ ಸುರೇಶ ಹಜೇರಿ ಮಾತನಾಡಿ ಪ್ರಜಾಸೌಧ ಪ್ರಜೆಗಳ ಸಲುವಾಗಿ ಇರುವುದು ಇದನ್ನು ಅರಿಯದೆ ಪ್ರಜೆಗಳ ಅಭಿಪ್ರಾಯ ಪಡೆಯದೇ ನಿರ್ಮಾಣ ಮಾಡಲು ಹೊರಟಿದ್ದಾರೆ. ಬಡವರ ಬಗ್ಗೆ ಕಾಳಜಿ ಇಲ್ಲದ ಶಾಸಕರು ಮತಕ್ಷೇತ್ರದಲ್ಲಿದ್ದಾರೆ. ಈ ಹೋರಾಟ ಹತ್ತಿಕ್ಕಲು ಹಲವರು ಹಲವಾರು ರೀತಿಯ ಪ್ರಯತ್ನ ಪಡುತ್ತಿರುವುದು ನಮಗೆ ತಿಳಿದು ಬಂದಿದೆ ಎಂದು ಆರೋಪಿಸಿದರು.
ಈ ಸಮಯದಲ್ಲಿ ಬಸವನಗೌಡ ನಾನಾಗೌಡ ಬಿರಾದಾರ, ಭೀಮಣ್ಣ ವಡ್ಡರ, ನಾನಗೌಡ ಆಸ್ಕಿ, ಸೋಮನಗೌಡ ಭಂಟನೂರ, ಅನಿಲ ಜೋಶಿ, ಖಾಜೇಸಾಬ ಮಕಾಂದರ, ಅನಿಲ ವಡ್ಡರ, ಈರ್ಪ ಕೋಚಬಾಳ, ಹನುಮಂತ ನಾಟಿಕಾರ, ಬಸವರಾಜ ಬೂದಿಹಾಳ, ವೀರೇಶ ಬಿರಾದಾರ, ಗುರ್ಪ ನಾಟಿಕಾರ, ಪರಶುರಾಮ ನಾಯ್ಕೋಡಿ, ಧೂಳೆಪ್ಪ ದೊಡ್ಡಮನಿ, ದೇವಿಂದ್ರ ಪೂಜಾರಿ ಹಲವರು ಉಪಸ್ಥಿತರಿದ್ದರು.
ತಾಲೂಕ ಹೋರಾಟ ಸಮಿತಿ ಅಧ್ಯಕ್ಷ ಧಶರತಸಿಂಗ ಮನಗೂಳಿ,ಮುತ್ತಪ್ಪ ಚಮಲಾಪುರ,ಕಾಶೀನಾಥ ಮುರಾಳ,ಎಂ.ಎಸ.ಸರಶೆಟ್ಟಿ, ಆರ.ಎಸ.ಪಾಟೀಲ ಕೂಚಬಾಳ,ಮಸೂಮಸಾಬ ಕೆಂಭಾವಿ,ಮಡು ಸಾಹುಕಾರ ಬಿರಾದಾರ,ಪರಶುರಾಮ ತಂಗಡಗಿ,ಪ್ರಕಾಶ ಹಜೇರಿ, ಮಯೂರ ಪಾಟೀಲ, ರಾಮಣ್ಣ ಕಟ್ಟಿಮನಿ, ಸಂಜು ಬರದೇನಾಳ, ಸದ್ದಾಂ ಬೀಳಗಿ, ರವಿ ಕಟ್ಟಿಮನಿ, ಸಿರಸಕುಮಾರ ಹಜೇರಿ, ಮಹೇಶ ಛಲವಾದಿ, ಅಮಿತಸಿಂಗ ಮನಗೂಳಿ, ನಾಗೇಶ ಕಟ್ಟಿಮನಿ,ಮುದಕಪ್ಪ ಬಡಿಗೇರ,ನೀತಿನ ವಿಜಾಪುರ, ಹಲವಾರು ಗಣ್ಯರು ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 