ಕೊಲೊಂಬೊ 25: ನಾಗರಿಕ ಯುದ್ದ ನಂತರ ಹಲವು ದಶಕಗಳಿಂದ ದುರಸ್ಥಿಗೊಳ್ಳದೆ ಇರುವ ಉತ್ತರ ಶ್ರೀಲಂಕಾದಲ್ಲಿ ಮನೆ, ರಸ್ತೆ ನಿಮರ್ಿಸಲು ಚೀನಾ ಮುಂದಾಗಿದ್ದು, ದಕ್ಷಿಣ ದ್ವೀಪದಾಚೆಗೆ ಅದರ ಪ್ರಭಾವಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ಚೀನಾ ಮತ್ತು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಸಕರ್ಾರ ಮತ್ತು ತಮಿಳು ಪ್ರತ್ಯೇಕತಾವಾದಿಗಳ ನಡುವಿನ 26 ವರ್ಷಗಳ ಕದನ 2009 ರಲ್ಲಿ ಅಂತ್ಯಗೊಂಡಿದ್ದು, ಶ್ರೀಲಂಕಾದ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಕಟ್ಟಡ ನಿಮರ್ಿಸಲು ಚೀನಾಕ್ಕೆ ನೆರವು ಬೇಕಿದೆ ಎಂದು ಕೊಲೊಂಬೊದಲ್ಲಿನ ಚೀನಾ ರಾಯಬಾರಿ ಲ್ಯೂ ಚೊಂಗೊ ಹೇಳಿದ್ದಾರೆ.
ಶ್ರೀಲಂಕಾದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಹೆಚ್ಚಿನ ಯೋಜನೆ ಕೈಗೊಳ್ಳಲು ಸಕರ್ಾರ ಹಾಗೂ ತಮಿಳು ಸಮುದಾಯದದಿಂದ ಸಹಕಾರವನ್ನು ಬಯಸುವುದಾಗಿ ಅವರು ಹೇಳಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಚೀನಾ ರೈಲ್ವೆ ಬಿಜಿಂಗ್ ಎಂಜಿನಿಯರಿಂಗ್ ಕಂಪನಿ ಶ್ರೀಲಂಕಾದ ಉತ್ತರ ಜಿಲ್ಲೆ ಜಪ್ಪ್ ನಾದಲ್ಲಿ 40 ಸಾವಿರ ಮನೆಗಳನ್ನು ನಿಮರ್ಿಸಲು 300 ಮಿಲಿಯನ್ ಗೂ ಹ್ಚೆ್ಚು ಯೋಜನೆಗಳನ್ನು ಪಡೆದುಕೊಂಡಿತ್ತು.
ಆದರೆ, ಕಾಂಕ್ರಿಟ್ ಬದಲಿಗೆ ಇಟ್ಟಿಗೆ ಮನೆ ಬೇಕೆಂದು ನಿವಾಸಿಗಳು ಆಗ್ರಹಿಸಿದ್ದರಿಂದ ಯೋಜನೆ ಸ್ಥಗಿತಗೊಂಡಿತ್ತು. ಇದು ಭಾರತದೊಂದಿಗೆ ಮುಕ್ತ ಮಾತುಕತೆಗೆ ಅವಕಾಶ ಮಾಡಿಕೊಟ್ಟಿತ್ತು ಎಂದು ತಮಿಳು ರಾಷ್ಟ್ರೀಯ ಒಕ್ಕೂಟದ ಶಾಸಕಿ ಎಂ. ಎ. ಸುಮತ್ರಿಯನ್ ಹೇಳುತ್ತಾರೆ.
ಶ್ರೀಲಂಕಾದ ಅನುದಾನದಿಂದ ಭಾರತ ಈಗಾಗಲೇ 44 ಸಾವಿರ ಮನೆಗಳನ್ನು ಉತ್ತರ ಭಾಗದಲ್ಲಿ ಪೂರ್ಣಗೊಳಿಸಿದೆ. ಅಲ್ಲದೇ ಪಲಾಲಿ ವಿಮಾನ ನಿಲ್ದಾಣ ಮತ್ತು ಕಂಕೇಸಂತುರೈ ಬಳಿ ಮರು ನಿಮರ್ಾಣ ಮಾಡಲು ಚಿಂತನೆ ನಡೆಸಿದೆ.
ಭಾರತಕ್ಕಿಂತ ಕಡಿಮೆ ದರದಲ್ಲಿ ಚೀನಾ ಮನೆ, ರಸ್ತೆ, ನಿಮರ್ಾಣ ಮಾಡಲಿದೆ ಎಂದು ಹೇಳುತ್ತಿದೆ ಎಂದು ಶ್ರೀಲಂಕಾದ ಇಬ್ಬರು ಹಿರಿಯ ಸಚಿವರು ಹೇಳಿದ್ದಾರೆ. ರಸ್ತೆ ಸಂಪರ್ಕ, ನೀರು ಪೂರೈಕೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದಾಗಿ ಚೀನಾ ಹೇಳಿದೆ ಎಂದು ಅವರು ತಿಳಿಸಿದ್ದಾರೆ
ಶ್ರೀಲಂಕಾ ತಮಿಳರೊಂದಿಗೆ ಸಾಂಸ್ಕೃತಿಕ ಮತ್ತು ಮೌಲ್ಯಗಳ ಮೂಲಕ ಭಾರತ ಉತ್ತಮ ಸಂಬಂಧ ಹೊಂದಿದೆ. ಆದರೆ. ಏಷ್ಯಾದಾದ್ಯಂತ ಸ್ನೇಹಮಯ ಬಂದರು ನಿಮರ್ಿಸುವ ಕಾರ್ಯತಂತ್ರದೊಂದಿಗೆ ಇತ್ತೀಚಿಗೆ ಚೀನಾ ಈ ದ್ವೀಪ ಪ್ರದೇಶದಲ್ಲಿ ಬಂದರು ನಿಮರ್ಾಣ, ವಿದ್ಯುತ್ ಘಟಕ, ಹೆದ್ದಾರಿ ನಿಮರ್ಾಣ ಮಾಡುತ್ತಿದೆ.