ನಾನ್‍ಜಿಂಗ್, ನ 28- ಚೀನಾದ ಗುಯಾಂಗ್‍ಕ್ಸಿ ಜುಯಾಂಗ್ ಸ್ವಾಯತ್ವ ಪ್ರಾಂತ್ಯದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ್ದ 5.2 ತೀವ್ರತೆಯ ಭೂಕಂಪದಿಂದ ಓರ್ವ ಮೃತಪಟ್ಟು, ಐವರು ಗಾಯೊಂಡು 2,000ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ.
ಕಳೆದ ಮಂಗಳವಾರ ಬೆಳಿಗ್ಗೆ 9.15ಕ್ಕೆ ಜಿಯಾಂಕ್ಸಿ ನಗರದಲ್ಲಿ ಭೂಕಂಪನವಾಗಿತ್ತು. ಜಿಯಾಂಕ್ಸಿ ಮತ್ತು ಚೊಂಗ್‍ಜೊ ನಗರಗಳ ಟೌನ್‍ಶಿಪ್‍ಗಳಲ್ಲಿ ಹೆಚ್ಚು ಜನರು ಭೂಕಂಪನದಿಂದ ಬಾಧಿತರಾಗಿದ್ದಾರೆ.
ಗುರುವಾರ ಬೆಳಿಗ್ಗೆ 11 ಗಂಟೆ ವೇಳೆಗೆ 935 ಸಂತ್ರಸ್ತರನ್ನು ಸ್ಥಾಳಾಂತರಿಸಲಾಗಿದ್ದು, ಅಗತ್ಯ ಪರಿಹಾರಗಳನ್ನು ಒದಗಿಸಲಾಗಿದೆ. ಭೂಕಂಪನದಿಂದ 300 ಮನೆಗಳು ಹಾನಿಗೊಂಡಿದ್ದು, ಈ ಪೈಕಿ 12 ಮನೆಗಳು ಸಂಪೂರ್ಣ ನಾಶವಾಗಿವೆ. ಭೂಕಂಪನದಿಂದ 7 ಲಕ್ಷ ಡಾಲರ್ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಭೂಕಂಪ ಭಾದಿತ ಪ್ರದೇಶಗಳಲ್ಲಿ ಗಣಿಗಳನ್ನು ಮುಚ್ಚಲಾಗಿದ್ದು, ಅನೇಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಗಳು ಭರದಿಂದ ಸಾಗಿವೆ.