ಬೇಸಿಗೆಯಲ್ಲಿ ಮಕ್ಕಳು ಹಗುರ, ಸಡಿಲ ಮತ್ತು ತಿಳಿಬಣ್ಣದ ಬಟ್ಟೆ ಧರಿಸಿ. ಮನೆಯಲ್ಲಿ ಸುರಕ್ಷಿತ ಆಟದ ವಾತಾವರಣ ಸೃಷ್ಟಿಸಬೇಕು : ಡಾ.ವಿಶ್ವನಾಥ ಪತ್ತಾರ
Children should wear light, loose and light-colored clothes in summer. A safe play environment shoul
ಬೀಳಗಿ 14 : ’ಬೇಸಿಗೆಯಲ್ಲಿ ಮಕ್ಕಳು ಆರೋಗ್ಯಕರವಾಗಿರುವಂತೆ ಎಚ್ಚರಿಕೆವಹಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಮಕ್ಕಳು ಹಗುರ, ಸಡಿಲ ಮತ್ತು ತಿಳಿಬಣ್ಣದ ಬಟ್ಟೆ ಧರಿಸಿರಬೇಕು. ಅವುಗಳನ್ನು ತಂಪಾಗಿರಿಸಲು ಮತ್ತು ಕಿರಣಗಳಿಂದ ಮಕ್ಕಳ ಚರ್ಮ ರಕ್ಷಿಸಬೇಕಿದೆ. ಒಳಾಂಗಣ ಆಟಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮನೆಯಲ್ಲಿ ಸುರಕ್ಷಿತ ಆಟದ ವಾತಾವರಣ ಸೃಷ್ಟಿಸಬೇಕು. ಫ್ಯಾನ್ಗಳು ಅಥವಾ ಹವಾನಿಯಂತ್ರಕ ಬಳಸಿ, ಕೋಣೆಯ ಉಷ್ಣತೆಯು ಆರಾಮದಾಯಕ ವಾಗಿರುವುದನ್ನು ಖಚಿತಪಡಿಸಿಕೊಂಡು ಮಕ್ಕಳನ್ನು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕಿದೆ. ಬೇಸಿಗೆಯಲ್ಲಿ ನಿಮ್ಮ ಮಗು ಆರೋಗ್ಯಕರವಾಗಿ ಮತ್ತು ಸಂತೋಷಕರ ವಾಗಿರುವಂತೆ ವಿಶೇಷ ಕಾಳಜಿ ಮತ್ತು ಗಮನದ ಅಗತ್ಯವಿದೆ.
ಬೇಸಿಗೆಯಲ್ಲಿ ದೇಹದಲ್ಲಿನ ನಿರ್ಜಲೀಕರಣದಿಂದಾಗಿ ವಾಂತಿ,ಬೇದಿ,ಜ್ವರ ಮತ್ತು ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿದ್ದು ಮಕ್ಕಳಿಗೆ ಮೇಲಿಂದ ಮೇಲೆ ಶುದ್ದವಾದ ನೀರು, ಏಳನೀರು,ಲಿಂಬು ಶರಬತ್,ಮಜ್ಜಿಗೆ,ಕಲ್ಲಂಗಡಿ, ಕರಬೂಜ ,ಸವತೆಕಾಯಿ ಸೇವಿಸುವಂತೆ ತಿಳಿಸಿದರು. ಮಕ್ಕಳ ಆರೈಕೆ ಆಯ್ಕೆಗಳು ಮತ್ತು ಶಿಶುಗಳಿಗೆ ಉತ್ತಮ ಬೇಸಿಗೆ ಆಹಾರ ಕೊಡುವುದರ ಮೂಲಕ ಜಂಕ್ ಫುಡ್ ಹಾಗೂ ಮಕ್ಕಳನ್ನು ಆಕರ್ಷಿಸುವ ತಂಪುಪಾನೀಯ ( ಪ್ರೀಜ್ ನೀರು, ಐಸ್ ಕ್ರಿಮ್, ಜ್ಯೂಸ್) ಗಳಿಂದ ದೂರವಿಡುವ ಮೂಲಕ ಅಪಾಯಗಳಿಂದ ನಿಮ್ಮ ಮಗುವನ್ನು ರಕ್ಷಿಸುವಲ್ಲಿ ಯಾವಾಗಲೂ ಜಾಗರೂಕರಾಗಿರಿ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ವಿಶ್ವನಾಥ ಪತ್ತಾರ ಪ್ರಕಟಣೆಯಲ್ಲಿ ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 