ಮೊಬೈಲ್ ಜಗತ್ತಿನಿಂದ ಮಕ್ಕಳು ಹೊರಬರಬೇಕು: ಯಶೋದಾ ವಂಟಗೋಡಿ
Children should get out of the mobile world: Yashoda Vantagodi
ಲೋಕದರ್ಶನ ವರದಿ
ಶಿಗ್ಗಾವಿ 25 : ನಮ್ಮ ಮಕ್ಕಳಿಗೆಹೊರಗಿನ ಜಗತ್ತನ್ನು ಪರಿಚಯಿಸದೆ ಮೊಬೈಲಗೆ ಅವರನ್ನು ಕಟ್ಟಿಹಾಕಿದ್ದೇವೆ ಮೊಬೈಲ್ ಬಳಕೆ ಮತ್ತು ಕೆಟ್ಟ ಚಟಗಳು ಮಕ್ಕಳ ಅಭಿವೃದ್ಧಿಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತವೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಯಶೋದಾ ವಂಟಗೋಡಿ ಹೇಳಿದರು. ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಭಾರತ ಸೇವಾ ಸಂಸ್ಥೆವತಿಯಿಂದ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರುಮೊಬೈಲ್ ದೇಹ, ಮನಸ್ಸು, ವರ್ತನೆ ಮೂರು ಕ್ಷೇತ್ರಗಳನ್ನೂ ಸ್ಪರ್ಶಿಸುತ್ತದೆ. ಇದೇ ರೀತಿ ಮುಂದುವರೆದರೆ ದೈಹಿಕ ಮತ್ತು ಮಾನಸಿಕವಾಗಿ ಬಹಳಷ್ಟು ಸಮಸ್ಯೆಗಳನ್ನು ನಮ್ಮ ಮಕ್ಕಳು ಎದುರಿಸಬೇಕಾಗುತ್ತದೆ ಆದ್ದರಿಂದ ದಿನನಿತ್ಯದ ಅಭ್ಯಾಸದಲ್ಲಿ ಅವರನ್ನು ಕ್ರೀಡೆಗಳಲ್ಲಿಯು ಸಹ ತೊಡಗಿಸಬೇಕಾಗಿದೆ ಮತ್ತು ಅವರ ಚಟಗಳಿಗೆ ಕಡಿವಾಣ ಹಾಕಿ ಚಟಗಳಿಗೆ ಅವರನ್ನು ದಾಸರನ್ನಾಗಿ ಮಾಡದೆ ಒಳ್ಳೆಯ ಅಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿ ಅವರನ್ನು ಹುರುದುಂಬಿಸಿ ಉತ್ತಮ ನಾಗರಿಕರನ್ನಾಗಿ ಮಾಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಗುರುಶಾಂತಪ್ಪ ಕೆ.ವಿದೈಹಿಕ ಶಿಕ್ಷಕರುಗಳಾದ ಬಸವರಾಜ ಹೊಸಪೇಟೆ ಭರತ ಕಳ್ಳಿಮನಿ, ಸಾಧಿಕ ಸವಣೂರ, ಮಂಜುನಾಥ, ಮಹಾಂತೇಶ ಸೇರಿದಂತೆ ನವೀನ ಸಾಸನೂರ, ರಮೇಶ್ ಸಾತಣ್ಣವರ, ರವಿ ಮಡಿವಾಳರ, ವಿಶ್ವನಾಥ ಗಾಣಿಗೇರ, ಚಂದ್ರು ಜಕ್ಕಣ್ಣವರ ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 