ಮಕ್ಕಳು ವಿಜ್ಞಾನದ ಪ್ರಯೋಗಗಳ ಕಡೆಗೆ ಆಸಕ್ತಿ ವಹಿಸಿ : ಎಸ್‌. ಬಿ. ಅವಟಿ

ಮಕ್ಕಳು ವಿಜ್ಞಾನದ ಪ್ರಯೋಗಗಳ ಕಡೆಗೆ ಆಸಕ್ತಿ ವಹಿಸಿ : ಎಸ್‌. ಬಿ. ಅವಟಿ Children should be interested in science experiments: S. B. Avati

ದೇವರಹಿಪ್ಪರಗಿ 28 : ತಾಲೂಕಿನ ಕಡ್ಲೆವಾಡ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ವಿಜಯಪುರ ಬಸವೇಶ್ವರ ಪ್ರೌಢಶಾಲೆ ಮುಖ್ಯ ಗುರುಗಳಾದ ಎಸ್‌. ಬಿ. ಅವಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ವಿಜ್ಞಾನದ ಪ್ರಯೋಗಗಳ ಕಡೆಗೆ ಆಸಕ್ತಿ ವಹಿಸಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು, ಸರ್ ಸಿ.ವಿ. ರಾಮನ್ ಅವರಿಗೆ ವಿಜ್ಞಾನದ ಕಡೆಗೆ ಇರುವ ಕುತೂಹಲ ಹಾಗೂ ರಾಮನ್ ಪರಿಣಾಮದ ಬಗ್ಗೆ ತಿಳಿಸಿದರು. ಸಂದರ್ಭದಲ್ಲಿ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಸುನಿತಾ ಕೋರವಾರ ಮಕ್ಕಳಿಂದ ಹಲವಾರು ವಿಜ್ಞಾನದ ಪ್ರಯೋಗಗಳನ್ನು ಮಾಡಿಸಿದರು ಶಾಲೆಯ ಮಕ್ಕಳು ತುಂಬಾ ಕ್ರಿಯಾಶೀಲತೆಯಿಂದ ವಿಭಿನ್ನ ವಿಶಿಷ್ಟ ರೀತಿಯ ಪ್ರಯೋಗಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಎ.ವಿ. ತಳಕೇರಿ ಹಾಗೂ ಜಿ. ಬಿ. ಶಿವಣಗಿ, ವೆಂಕಣ್ಣ ಗಣಜಲಿ,  ಕೆ.ಬಿ.ಬಡಿಗೇರ, ಅಜೀಜ ಕಂಬಾರ, ಕುಮಾರಿ ಅಕ್ಷತಾ ಬಿರಾದಾರ ಉಪಸ್ಥಿತರಿದ್ದರು.