ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಕ್ರೀಡಾಭಿಮಾನ ಬೆಳೆಸಬೇಕು: ಬಸವರಾಜಪ್ಪಾ ಆರ್
Children should be instilled with a love of sports at the primary level: Basavarajappa R
ರಾಯಬಾಗ, 19 : ಕಲುಷಿತ ವಾತಾವರದಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬಿರಿ ಮಕ್ಕಳಲ್ಲಿ ಕ್ರೀಡಾಭಿರುಚಿ ಕುಸಿತಾಯಿದೆ. ಇದರಿಂದ ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಕಡಿಮೆಯಾಗುತ್ತಿದೆೆ ಆದ್ದರಿಂದ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೆ ಕ್ರೀಡಾಭಿಮಾನ ಬೆಳೆಯಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಪ್ಪಾ ಆರ್.ಹೇಳಿದರು.
ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪ್ರಸಕ್ತ ಸಾಲಿನ ಇಲಾಖೆ ಕ್ರೀಡಾಕೂಟದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ನಿರ್ಣಾಯಕರು ತಾರತಮ್ಯವನ್ನು ಮಾಡದೆ ಒಳ್ಳೆಯ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಬೇಕೆಂದರು.ತಾಲೂಕಾ ದೈಹಿಕ ಶಿಕ್ಷಣ ಪರೀವೀಕ್ಷಕರಾದ ಮಾಹಾವೀರ ಜಿರಗ್ಯಾಳ ಮಾತನಾಡಿ ಮಗುವಿನ ಸಾಮರ್ಥ್ಯವನ್ನು ಗಮನಿಸಿ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಬೇಕು. ಶಾಲೆಗೆ ದೈಹಿಕ ಶಿಕ್ಷಕರು ಶಿಸ್ತಿನ ಸಿಪಾಯಿಗಳಿದಂತೆ ಕರ್ತವ್ಯ ಮತ್ತು ಕರ್ತವ್ಯದ ಸಮಯವನ್ನು ಹೊರತು ಪಡಿಸಿಯೂ ಶಾಲೆಯ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದರು. ಕೇಂದ್ರ, ವಲಯ ಮಟ್ಟದ ಕ್ರೀಡಾಕೂಟದ ದಿನಾಂಕ ಹಾಗೂ ಸ್ಥಳಗಳನ್ನು ನಿಗದಿ ಮಾಡಲಾಯಿತು. ರಾಜ್ಯಾ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ವ್ಹಿ ಬಿ ಅರಗೆ ದೈಹಿಕ ಶಿಕ್ಷಕರಿಗೆ ಕ್ರೀಡಾಕೂಟದ ನಿಯಮಗಳನ್ನು ಹಾಗೂ ಸಂಘಟನೆಯ ಬಗ್ಗೆ ಹೇಳಿದರು.
ಎಸ್‌ಸಿ-ಎಸ್‌ಟಿ ಸಂಘದ ಪ್ರಧಾನ ಕಾರ್ಯದರ್ಶಿ ಎಮ್‌ಸಿ ಐಹೋಳೆ. ಅಶೋಕ ಗಸ್ತಿ. ಎನ್. ಬಿ. ಮಠದಕರ. ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್ ಟಿ ಅರಬಳ್ಳಿ. ಬುರ್ಲಟ್ಟಿ. ಶಿಂಗೆ.ಬಿ. ಎಮ್. ಮಾಳಿ , ಉಪಸ್ಥಿತಿತರಿದ್ದರು. ಕಾರ್ಯದರ್ಶಿ ಲಕ್ಷ್ಮಣ ಬಂಡಗರ ಕಾರ್ಯಕ್ರಮ ನಿರೂಪಿಸಿದರು. ವ್ಹಿ. ಡಿ ಉಪಾದ್ಯಾಯ ವಂದಿಸಿದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 