ಸಿದ್ದಾರ್ಥ ಬೋಡರ್ಿಂಗದಲ್ಲಿ ಮಕ್ಕಳ ದಿನಾಚರಣೆ, ದೀಪಾವಳಿ ಸಂಭ್ರಮ

ಸಿದ್ದಾರ್ಥ ಬೋಡರ್ಿಂಗದಲ್ಲಿ ಮಕ್ಕಳ ದಿನಾಚರಣೆ, ದೀಪಾವಳಿ ಸಂಭ್ರಮ


ಬೆಳಗಾವಿ 14:  ಶಹಪೂರದ ನಾಥಪೈ  ವೃತ್ತದ ಬಳಿಯಿರುವ ಸಿದ್ದಾರ್ಥ ಬೋಡರ್ಿಂಗದಲ್ಲಿ ಸಮರ್ಪಣಾ ಸಂಘನೆಯವರು  ಬೋಡರ್ಿಂಗದಲ್ಲಿ ಅನಾಥ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಸಂಭ್ರಮವನ್ನು ಆಚರಿಸಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಮಹಾನಗರ ಸೇವಕಿ ಶ್ರೀಮತಿ ಸರಳಾ ಹೇರೇಕರ ಸುಮಾರು  ಅರವತ್ತು ವರ್ಷಗಳ ಇತಿಹಾಸ ಕಂಡಿರುವ ಸಿದ್ದಾರ್ಥ ಬೋಡರ್ಿಂಗ ರುವಾರಿಗಳಾದ ನಿವೃತ್ತ ಶಾಲಾ ಶಿಕ್ಷಕರೂ, ಮಾಜಿ ಎಂ.ಎಲ್.ಎ.ಗಳಾದ ಪರಷುರಾಮ ನಂದಿಹಳ್ಳಿಯವರು ದೇವರ ಅಸ್ತಿತ್ವವನ್ನು ನಂಬುವುದಿಲ್ಲ. ಇಲ್ಲಿರುವ ಅನಾಥ ಮಕ್ಕಳನ್ನೇ ದೇವರೆಂದು ನಂಬಿರುವ ಮಹಾನ್ ವ್ಯಕ್ತಿಗಳು ಎಂದು ಹೇಳಿದ ಅವರು ನಾವು ತಂದೆ ತಾಯಿ, ಹಿರಿಯರನ್ನು ಗೌರವಿಸುವುದರೊಂದಿಗೆ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ  ಮನೋಭಾವವನ್ನು ಬೆಳೆಯಿಸಿಕೊಳ್ಳಬೇಕು ಎಂದು ಹೇಳಿದರು. 

ಮಾಜಿ ಎಂ.ಎಲ್.ಎ. ಪರಷುರಾಮ ನಂದಿಹಳ್ಳಿಯವರು ಮಾತನಾಡಿ ನಮ್ಮ ಬೋಡರ್ಿಂಗ್ ಪಕ್ಕದಲ್ಲಿಯೇ ಇನ್ನಷ್ಟು ಜಾಗವಿದ್ದು ಈ ಜಾಗೆಯಲ್ಲಿ ಅನಾಥ ಮಕ್ಕಳಿಗಾಗಿ ಶೌಚಾಲಯ ಹಾಗೂ ಒಂದು ಕೋಣೆಯನ್ನು ಕಟ್ಟಿಸಿಕೊಡುವಂತೆ ಮಹಾನಗರಸಭೆ ಆಯುಕ್ತರಿಗೆ ಈಗಾಗಲೇ ವಿನಂತಿಸಿಕೊಳ್ಳಲಾಗಿದೆ. ಈ ವಿಷಯ ಕುರಿತಂತೆ ನೀವು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಯ ಫಲಪ್ರದ ಮಾಡಿಕೊಡಬೇಕೆಂದು ನಗರಸೇವಕಿ ಸರಳಾ ಹೇರೇಕರರಲ್ಲಿ ವಿನಂತಿಸಿಕೊಂಡರು.

ಸಮರ್ಪಣಾ ಸಂಘಟನೆಯ ಅಧ್ಯಕ್ಷರಾದ  ರಾಖೇಶ ದೇಶಪಾಂಡೆ ಅನಾಥ ಮಕ್ಕಳ ಒಳತಿಗಾಗಿ ಭಿಕ್ಷೆ ಬೇಡಲೂ ನಾನು ಸಿದ್ದ ನನಗದು ಮುಜುಗರವೆನ್ನಿಸುವುದಿಲ್ಲ ಬದಲಾಗಿ ಅಭಿಮಾನವೆನಿಸುತ್ತದೆ ಎಂದ ಅವರು  ಜನ  ಏನೇನೋ ಕೊಂಕು ನುಡಿಗಳನ್ನಾಡುತ್ತಾರೆ ಅವುಗಳಿಗೆಲ್ಲ ನಾನು ಕಿವಿಗೊಡುವುದಿಲ್ಲ. ಸಮಾಜ  ಸೇವೆ ನನಗೇನೋ ಅವಣರ್ೀಯ ಖುಷಿಯನ್ನು ತಂದು ಕೊಡುತ್ತದೆ ಎಂದರು.

ರಾಜು ಚೊಣ್ಣದ ಹಾಗೂ ನಾಗರಿಕ ಸಹಕಾರಿ ಬ್ಯಾಂಕ್, ಮಂಬೈ ಇವರು ತಲಾ ಐದು ಸಾವಿರ ಬೋಡರ್ಿಂಗ್ ಗಾಗಿ ಹಾಗೂ ತಿಳಕವಾಡಿಯ ಅನಂತ ಚಿಂಚಣಿ, ವಿ. ಎಮ್. ಕುಲಕಣರ್ಿ, ರಾಜನ್ ಲೋಬೋ, ಲೋಹಾರ ಮಕ್ಕಳಿಗಾಗಿ ಸೈಕಲ್ಗಳನ್ನು ದೇಣಿಗೆ ನೀಡಿದರು. 

ಅನಂತ ಚಿಂಚಣಿ, ಪರಷುರಾಮ ನಂದಿಹಳ್ಳಿ, ರಾಖೇಶ ದೇಶಪಾಂಡೆ ಹಾಗೂ ವಿದ್ಯಾ ದೇಶಪಾಂಡೆಯವರನ್ನು  ಸರಳಾ ಹೇರೇಕರ ಶಾಲು ಹೊದಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.

ಅನಾಥ ಮಕ್ಕಳಿಗೆ ಆರತಿ ಮಾಡಿ ದೀಪಾವಳಿ ಹಬ್ಬದ ಫಲಾಹಾರವನ್ನು ನೀಡಿ ಹೆತ್ತ ತಾಯಿತಂದೆ ಪ್ರೀತಿಯನ್ನು ಸಮರ್ಪಣಾ ಸಂಸ್ಥೆಯ ಸದಸ್ಯರು ನೀಡಿದರು.  ಈ ದೃಶ್ಯ ಕೂಡಿದ ಜನರ ಮನಕಲುಕಿತು.

ಅನಂತ ಚಿಂಚಣಿ, ಆನಂದ ದೇಶಪಾಂಡೆ, ವಿದ್ಯಾ ದೇಶಪಾಂಡೆ, ಟಿ. ಆರ್. ಗಣಪತಿ, ಜೆ.ಎನ್.ಎಸ್. ರಾವ್, ಲಕ್ಷ್ಮೀ ಕುಲಕಣರ್ಿ, ಪ್ರಸಾದ ಕಾರಜೋಳ, ದೀಪಾ ಪದಕಿ ಹಾಗೂ ಸಮರ್ಪಣ ಸಂಸ್ಥೆಯ ಎಲ್ಲ ಪದಾಧಿಕರಿಗಳು,  ಸದಸ್ಯರು ಉಪಸ್ಥಿತರಿದ್ದರು.  ಸಂತೋಷ ಹೊಂಗಲ ನಿರೂಪಿಸಿದರು.