ಶರಣರ ವೇಷಭೂಷಣದಲ್ಲಿ ಬಸವ ಸಂಸ್ಕೃತಿ ಶಾಲೆಯ ಮಕ್ಕಳು
Children of Basava Sanskriti School in their Sharan costumes
ಲೋಕದರ್ಶನ ವರದಿ
ಹುಬ್ಬಳ್ಳಿ 23 : ಬಸವಕೇಂದ್ರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ಬಸವ ಜಯಂತಿಯ ಅಂಗವಾಗಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಹಾಗೂ ಎಲ್ಲ ಶರಣರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಯು ಗೋಕುಲ ರಸ್ತೆ, ಅರ್ಜುನ ವಿಹಾರ ಕ್ರಾಸ್‌ನಲ್ಲಿ ಪ್ರಾರಂಭವಾಗಿ ಲೋಹಿಯಾ ನಗರ, ಮುರಾರ್ಜಿ ನಗರದ ಮೂಲಕ ಬಸವಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿ ಶಾಲೆಗೆ ಬಂದು ಸೇರಿತು. ಮೆರವಣಿಗೆಯಲ್ಲಿ ಬಸವಾದಿ ಶರಣರ ವಚನಗಳನ್ನು ಹಾಡಿದರು. ಬಸವ ಸಂಸ್ಕೃತಿ ಶಾಲೆಯ ಮಕ್ಕಳು ಶರಣರ ವೇಷಭೂಷಣದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದರು. ವಿಶೇಷವಾಗಿ ಕಂಚಿನ ಕಂಠದ ಗಾಯಕಿ, ದಾನೇಶ್ವರಿ ಸಂಗೀತಪಾಠ ಶಾಲೆಯ ಪ್ರೊ. ಶೋಭಾಜಾಬಿನ್ ಅವರು ಅದ್ಭುತವಾಗಿ ವಚನ ಗಾಯನ ಪ್ರಸ್ತುತ ಪಡಿಸಿದರು.
ಬಸವಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡ ಶೆಟ್ಟಿ ಅವರು ಉದ್ಘಾಟಿಸಿದರು. ಬಸವಕೇಂದ್ರದ ಉಪಾಧ್ಯಕ್ಷ ಪ್ರಭು ಅಂಗಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ ಮಲ್ಲಿಕಾರ್ಜುನ ಯಾವಗಲ್ ಅವರು ಅನುಭಾವ ನೀಡಿದರು. ಕೆ.ಎಸ್. ಇನಾಮತಿ ನಿರೂಪಿಸಿದರು. ಶಿವಯೋಗಿ ಮೂರ್ಖಂಡೆ ಅವರು ಪ್ರಸಾದ ಸೇವೆ ಗೈದರು. ನೀಲಕಂಠ ಅಸೂಟಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಸೋಹನ್ಸುರೇಶ್ಹೊರಕೇರಿ , ಡಾ ಪ್ರಕಾಶಮುನ್ನೊಳ್ಳಿ, ಇದ್ದರು. ಶರಣರ ವೇಷಭೂಷಣ ತೊಟ್ಟಮಕ್ಕಳ ಹೆಸರು ಹಾಗೂ ಶರಣರ ಹೆಸರು ಇಂತಿವೆ. ಕೃತಿಕಾ (ಅಕ್ಕಮಹಾದೇವಿ), ಸಂಜನಾ (ಗಂಗಾಂಬಿಕಾ), ಶ್ರೇಯಾ (ನೀಲಾಂಬಿಕಾ), ಚಂದನಾ (ಆಯ್ದಕ್ಕಿಲಕ್ಕಮ್ಮ), ರಾಶಿ (ಕಲ್ಯಾಣಮ್ಮ), ಪೂರ್ವಿಕಾ (ಅಕ್ಕಮಹಾದೇವಿ), ಸಮರ್ಥ (ಅಲ್ಲಮಪ್ರಭು), ಖುಷಿ (ಸತ್ಯಕ್ಕ), ಅಪ್ಪು (ಬಸವಣ್ಣ), ವಿಜಯ್ (ಬಸವಣ್ಣಮಹಾರಾಜ್), ಶ್ರೇಯಸ್ (ಹರಳಯ್ಯ), ಸಮರ್ಥ (ಬಸವಣ್ಣ), ಅಶ್ವಿನಿ (ಚನ್ನಬಸವಣ್ಣ), ರೇವತಿ (ಮುಕ್ತಾಯಕ್ಕ). ಮಕ್ಕಳು ಸಂತಸದಿಂದ ಕುಣಿದುಕುಪ್ಪಳಿಸಿದರು. ಶಿಕ್ಷಕರಾದ ಮಧುಕಂಠಿ, ನೇಹಾಕಂಠಿ, ಈಶ್ವರಿ ಬೆಸ್ತಾ, ಆರತಿಜಮ್ಯಾಳ, ಶೃತಿಇಂಬ್ರಹಿಂಪುರ ಅವರು ಮಕ್ಕಳಿಗೆ ಪ್ರೇರಣೆ ನೀಡಿದ್ದಾರೆ.
ಶಂಕರ ಕೋಳಿವಾಡ, ದಾಕ್ಷಾಯಣಿ ಕೋಳಿವಾಡ, ಬಸವರಾಜ ಲಿಂಗಶೆಟ್ಟರ್, ಬಸವರಾಜ ಕಮಡೊಳ್ಳಿ, ಶೋಭಾಜಾಬಿನ್, ಲಕ್ಷ್ಮೀಲಿಂಗಶೆಟ್ಟರ್, ಉಮಾಹುಲಿ ಕಂತಿಮಠ, ಪ್ರಭುಶೆಟ್ಟರ್, ವೀರಣ್ಣಗೋವೇಶ್ವರ, ಶಾಂತಾ ಪಟ್ಟಣಶೆಟ್ಟಿ, ವಿದ್ಯಾವಂಟ ಮುರಿ, ಅನುಪಮಾ ಪಾಟೀಲ, ಬಸವ ಕೇಂದ್ರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾಘಟಕ, ಮಹಿಳಾ ಘಟಕ, ಯುವ ಘಟಕದ ಪದಾಧಿಕಾರಿಗಳು, ಸದಸ್ಯರು, ಬಸವಾಭಿಮಾನಿಗಳು, ಸಾಹಿತ್ಯಾಸಕ್ತರು, ಶಿಕ್ಷಕರು , ಮಕ್ಕಳು, ಮುಂತಾದವರು ಉತ್ಸಾಹದಿಂದ ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 