ಮಕ್ಕಳಿಗೆ ಸುಂದರ ಪರಿಸರದಲ್ಲಿ ಪರಿಶುದ್ಧ ವಾತಾವರಣದಲ್ಲಿ ಶಿಕ್ಷಣ ಅಗತ್ಯ: ವೀರೇಶ ಮೋಟಗಿ

ಮಕ್ಕಳಿಗೆ ಸುಂದರ ಪರಿಸರದಲ್ಲಿ ಪರಿಶುದ್ಧ ವಾತಾವರಣದಲ್ಲಿ ಶಿಕ್ಷಣ ಅಗತ್ಯ: ವೀರೇಶ ಮೋಟಗಿ  Children need education in a beautiful environment and a clean atmosphere - Veeresh Motagi

ರಾಣೇಬೆನ್ನೂರು 15 :  ಶಿಕ್ಷಕರುನಿಸರ್ಗ ಶಿಕ್ಷಣದ ಮೊದಲ ಗುರು. ನಿಸರ್ಗದಿಂದ ಕಲಿಯುವ ಪಾಠಗಳು ಅನಂತವಾಗಿವೆ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡ ನಿಸರ್ಗದ ಮಡಿಲಿನಲ್ಲಿ ಮಾನವ ಇನ್ನೂ ಕೂಡ ಬೆಳೆಯುತ್ತಿರುವ ಕೂಸುಗಳು. ಹೆಸರಿಗೆ ತಕ್ಕಂತೆ ನೇಚರ್ ವುಡ್ ಶಾಲೆಯು ಪುಟ್ಟ ಮಕ್ಕಳಿಗಾಗಿ ನೈಸರ್ಗಿಕ ಶಿಕ್ಷಣವನ್ನು ಪ್ರೀತಿಪೂರ್ವಕವಾಗಿ ಕೊಡುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಶಾಲೆಯಿಂದ ಆಯೋಜಿತವಾಗಿರುವ ಬೇಸಿಗೆ ಶಿಬಿರವು ಮತ್ತಷ್ಟು ನೈಸರ್ಗಿಕ ಚಟುವಟಿಕೆಗಳನ್ನು ರೂಪಿಸಿಕೊಳ್ಳಲಿ ಎಂದು  ನಗರ ಅಭಿವೃದ್ಧಿ ಯೋಜನಾ  ಪ್ರಾಧಿಕಾರ (ರುಡಾ) ಅಧ್ಯಕ್ಷ ರಾಜಣ್ಣ ಮೋಟಗಿ  ಹೇಳಿದರು. ಅವರು ಇಂದು ಇಲ್ಲಿನ  ಈಶ್ವರ ನಗರದ ನೇಚರ್ ಗುಡ್ ಶಾಲೆಯ 6ನೇ ವಾರ್ಷಿಕೋತ್ಸವ- ನೇಚರ್ ವುಡ್ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು - ಪಾಲಕರು- ಸಮುದಾಯ ತೋರುವ ಪ್ರೀತಿ, ವಿಶ್ವಾಸ ಮತ್ತು ಕಾಳಜಿ  ಮಗುವಿನಲ್ಲಿ ಹೊಸ ಉತ್ಸಾಹ ತುಂಬಲಿದೆ. ಜೊತೆಗೆ ಹೆಚ್ಚಾಗಿ ಪಾಲಕರ ಮುದ್ದಿನ ಪ್ರೀತಿಯೂ ಸಹ  ಮಗುವಿನ ಶಿಕ್ಷಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಆದ್ದರಿಂದ ಮಗುವಿಗಾಗಿ ಸಮಯವನ್ನು ಮೀಸಲಿಟ್ಟು ಇಂದಿನ ಆಧುನಿಕ ಜಗತ್ತಿಗೆ ಮಕ್ಕಳನ್ನು ಸಿದ್ಧಗೊಳಿಸಬೇಕಾಗಿದೆ  ಎಂದು ಅವರು ಕರೆ ನೀಡಿದರು. ಮುದದ ಶಿಕ್ಷಣ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಹಲಗೇರಿ ಉರ್ದು ಪ್ರೌಢಶಾಲೆಯ ಶಿಕ್ಷಕರಾದ ಜಗದೀಶ ಮಳೆಮಠ ಅವರು ಎಂದು ಅವಿಭಕ್ತ ಕುಟುಂಬಗಳು  ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಮಗುವಿನಲ್ಲಿಯ ಭಾವ ವ್ಯತ್ಯಾಸಗಳನ್ನು ತಕ್ಷಣವೇ ಗುರುತಿಸಿ ಅವುಗಳಿಗೆ ಸ್ಪಂದಿಸಬೇಕು. ಮನೆಯಲ್ಲಿಯೂ ಕೂಡ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿ ಮಗುವನ್ನು ಕಲಿಯಲು ಉತ್ತೇಜಿಸಬೇಕು ಎಂದು ಪಾಲಕರಿಗೆ ಕರೆ ನೀಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ  ಸೋಮಶೇಖರ್ ಗುರೂಜಿ ಅವರು ವಹಿಸಿದ್ದರು. ವಾರ್ಷಿಕೋತ್ಸವದ ವಿಶೇಷ ಆಕರ್ಷಣೆಯಾದ ಬೇಬಿ ಶೋ ಸ್ಪರ್ಧೆಯ ನಿರ್ಣಾಯಕರಾಗಿ  ಆಯುಷ್ ಇಲಾಖೆಯ ಆಡಳಿತ ಅಧಿಕಾರಿಗಳಾದ ಡಾ. ಭಾರತಿ ಬಡಕರಿಯಪ್ಪನವರ್ ಹಾಗೂ ಗಡಿಯಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿನೋದ ಭಾಗವಹಿಸಿ ಹೆಲ್ದಿ ಬೇಬಿ, ಚಬ್ಬಿ ಚಿಕ್ಸ್‌ ಬೇಬಿ ಹಾಗೂ ಚಿನ್ ಬೇಬಿ ಗಳನ್ನು ಆಯ್ಕೆ ಮಾಡಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷರಾದ ಸುಮಿತಾ ರಾಘವೇಂದ್ರ  ನೇಚರ್ ವುಡ್ ಶಾಲೆ ನಡೆದು ಬಂದ ದಾರಿಯನ್ನು ವಿವರಿಸಿದರು. 

ವೇದಿಕೆಯಲ್ಲಿ  ಶಾಲೆಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಹೆಚ್‌. ಎ,  ಅಂದಾನಪ್ಪ ಗೂಳಪ್ಪನವರ ,ಲಕ್ಷ್ಮಿಬಾಯಿ ಗೂಳಪ್ಪನವರ, ಶೋಭಾ  ಬಿ, ಸಂಗನಗೌಡ ನಾಗನಗೌಡರ ಮೊದಲಾದವರು ಉಪಸ್ಥಿತರಿದ್ದರು.ಶಾಲೆಯ ಪ್ರಧಾನ ಗುರುಗಳಾದ   ಸಮಿತಾ ಹಾಗೂ ಮೇಘಾ ಹೆಚ್‌. ಆರ್‌. ಸಂಗೀತ ಹಾಗೂ ಅಕ್ಷತಾ ಮಾರ್ಗದರ್ಶನದಲ್ಲಿ ಮಕ್ಕಳಿಂದ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಒನಕೆ ಓಬವ್ವ, ಜಂಬದ ಅಜ್ಜಿ ಮುಂತಾದ ನೃತ್ಯರೂಪಕಗಳು ನೆರೆದ ಪಾಲಕರ ಗಮನ ಸೆಳೆದವು. ಮಕ್ಕಳಿಗಾಗಿ ಬೇಬಿ ಶೋ, ಹೆಲ್ದಿ ಬೇಬಿ- ಪುನರ್ವಿ, ಚಿರಾಗ್ ಮತ್ತು ಆದ್ಯ. ಚಬ್ಬಿ ಚಿಕ್ಸ್‌ - ನಿಧಿ ಎಂ.ಎಂ, ಪ್ರಣವಿ ಮತ್ತು   ಆರ್ಷಲ್ ಬಡಿಗೇರ್‌- ಬೇಬಿ ಚಿನ್ - ಕೃಷ್ಣಾ ಟಿ,ಐಝೆಲ್ ಡಿ. ಹೆಚ್‌. ಮತ್ತು  ಜ್ಞಾನದೇವ ಜಾರಟ್ಗಾರ್ ಇತರರನ್ನು ಬಹುಮಾನ ವಿತರಿಸಲಾಯಿತು.