ವೃಕ್ಷಮಾತೆ ತಿಮ್ಮಕ್ಕಳ ಅಗಲಿಕೆಗೆ ಕಂಬನಿ ಮಿಡಿದ ಮಕ್ಕಳು
Children mourn the loss of their three children, the tree mother.
ಲೋಕದರ್ಶನ ವರದಿ
ವೃಕ್ಷಮಾತೆ ತಿಮ್ಮಕ್ಕಳ ಅಗಲಿಕೆಗೆ ಕಂಬನಿ ಮಿಡಿದ ಮಕ್ಕಳು
ಮಹಾಲಿಂಗಪುರ 15: ಮರಗಳನ್ನು ಮಕ್ಕಳಂತೆ ಬೆಳೆಸಿ ನಿಸರ್ಗ ಪರಂಪರೆಯನ್ನು ಹಸಿರಾಗಿಸಿ ಹೋದ ತಿಮ್ಮಕ್ಕ ಸಕಲರಿಗೂ ಮಾದರಿ ಮಹಿಳೆ ಎಂದು ಶಿಕ್ಷಕ, ಕವಿ ಸುರೇಶ ರಾಜಮಾನೆ ಹೇಳಿದರು.
ಸಮೀಪದ ಮೆಟಗುಡ್ಡ ಗ್ರಾಮದ ಡೋಣಿ ತೋಟದ ಶಾಲೆಯಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲ್ರಿವರು ಮಾತನಾಡಿದರು.
ಆರ್.ಎಂ.ಸುತಾರ್ ಮಾತನಾಡಿ ಪರಿಸರ ಪ್ರೇಮ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.
ಸಾಮೂಹಿಕವಾಗಿ ಎಲ್ಲರೂ ಮೌನಾಚರಣೆಯೊಂದಿಗೆ ತಿಮ್ಮಕ್ಕನವರಿಗೆ ದುಃಖತಪ್ತ ನಮನಗಳನ್ನು ಸಲ್ಲಿಸಿದರು. ಪತ್ರಿಕೆಗಳಲ್ಲಿ ಬಂದ ಪತ್ರಿಕಾ ವರದಿಗಳನ್ನು ಮಕ್ಕಳು ಒಟ್ಟುಗೂಡಿಸಿ "ವೃಕ್ಷಮಾತೆಗೆ ನಮನ" ಎಂಬ ಭಿತ್ತಿಪತ್ರ ತಯಾರಿಸಿ ಪ್ರದರ್ಶಿಸಿ ತಿಮ್ಮಕ್ಕಳ ಬಗ್ಗೆ ಸವಿಸ್ತಾರವಾಗಿ ಓದಿ ಹೇಳಿದರು. ವಿದ್ಯಾರ್ಥಿಗಳಾದ ಚೇತನಾ ಮೇತ್ರಿ, ಸೌಜನ್ಯ ಡೋಣಿ, ನಿರ್ಮಲಾ ಆಗೋಜಿ ಶಾಲಾ ಪರಿಸರ ಮತ್ತು ಪರಿಸರದ ಕಾಳಜಿ ಬಗ್ಗೆ ಮಾತನಾಡಿದರು. ಮಕ್ಕಳಷ್ಟೇ ಮರಗಳು ಮುಖ್ಯ ಎಂಬ ಘೋಷಣೆಗೆ ಎಲ್ಲರೂ ಧ್ವನಿಯಾದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 