ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಕ್ಕಳೇ ದಾರೀದೀಪ: ಗದಗದಲ್ಲಿ ಶಾಲಾ ಮಕ್ಕಳಿಂದ ‘ಪರಿಸರ ಕ್ರಾಂತಿ’

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಕ್ಕಳೇ ದಾರೀದೀಪ: ಗದಗದಲ್ಲಿ ಶಾಲಾ ಮಕ್ಕಳಿಂದ ‘ಪರಿಸರ ಕ್ರಾಂತಿ’ Children are the beacon of hope for a plastic-free society: 'Environmental revolution' by school chi

ಗದಗ 01: ಸಾಂಪ್ರದಾಯಿಕ ಹಬ್ಬಗಳು ಕೇವಲ ಸಾಂಸ್ಕೃತಿಕ ಆಚರಣೆಗಳಾಗದೆ, ಪ್ರಕೃತಿಯನ್ನು ರಕ್ಷಿಸುವ ವೈಚಾರಿಕ ವೇದಿಕೆಗಳಾಗಬೇಕು ಎಂದು ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮುಳುಗುಂದ ಪ್ರತಿಪಾದಿಸಿದರು. ನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 15ರಲ್ಲಿ ಕಾರ ಹುಣ್ಣಿಮೆ ಹಬ್ಬದ ಅಂಗವಾಗಿ ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪ್ಲಾಸ್ಟಿಕ್ ರಹಿತ ಹಾಗೂ ಕಾಗದದ ಗಾಳಿಪಟ ತಯಾರಿಸುವ ವಿಶಿಷ್ಟ ಸ್ಪರ್ಧೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿ ಇಂದಿನ ಆಧುನಿಕ ಆಚರಣೆಗಳಲ್ಲಿ ಪ್ಲಾಸ್ಟಿಕ್ ಮಹಾಮಾರಿ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಪ್ರಕೃತಿಯನ್ನು ನಾಶಮಾಡಿ ಆಚರಿಸುವ ಯಾವುದೇ ಹಬ್ಬ ನೈಜ ಸಂಸ್ಕೃತಿಯಾಗಲು ಸಾಧ್ಯವಿಲ್ಲ. ವಿಷಕಾರಿ ಪ್ಲಾಸ್ಟಿಕ್‌ನಿಂದ ಭೂಮಿಯನ್ನು ಮುಕ್ತಗೊಳಿಸುವ ಸಂಕಲ್ಪ ನಮ್ಮದಾಗಬೇಕು. ಇಂದು ಮುದ್ದು ಮಕ್ಕಳು ಕಾಗದದ ಗಾಳಿಪಟ ಹಾರಿಸುವ ಮೂಲಕ ಇಡೀ ಸಮಾಜಕ್ಕೆ ದೊಡ್ಡ ಪರಿಸರ ಜಾಗೃತಿಯ ಸಂದೇಶ ನೀಡಿದ್ದಾರೆ" ಎಂದು ಶ್ರೀಮತಿ ಶಕುಂತಲಾ ಮುಳುಗುಂದ ಹೇಳಿದರು.  ಸಹಶಿಕ್ಷಕಿಯವರಾದ ಶ್ರೀಮತಿ ಪ್ರೇಮ ಬ್ಯಾಳಿ ಅವರು ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಪರಿಸರ ಹಾನಿಯನ್ನು ತಡೆಯಲು ಬಾಲ್ಯದಿಂದಲೇ ಇಂತಹ ಪರ್ಯಾಯ ಮಾರ್ಗಗಳನ್ನು ರೂಢಿಸುವುದು ಇಂದಿನ ತುರ್ತು ಅಗತ್ಯ" ಎಂದರು.