ಮಕ್ಕಳ ಮನಸ್ಸು ಅರಳಿಸಬೇಕು ಕೆರಳಿಸಬಾರದು

ಮಕ್ಕಳ ಮನಸ್ಸು ಅರಳಿಸಬೇಕು ಕೆರಳಿಸಬಾರದು Children's minds should be nurtured, not provoked

ಧಾರವಾಡ  28: ಧಾರವಾಡದ ಜನತಾ ಶಿಕ್ಷಣ ಸಮಿತಿಯ   ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಹಯೋಗದೊಂದಿಗೆ ಪಾಲಕರ ಅಭಿಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಿತು. ಈ ಸಮಾರಂಭಕ್ಕೆ ಧಾರವಾಡದ  ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸಂಸ್ಕೃತ ಅಧ್ಯಾಪಕರಾದ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಆಗಮಿಸಿ ಮಾತನಾಡುತ್ತಾ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಹಾಗೆ ಪಾಲಕರ ಪಾತ್ರವೂ ಅಷ್ಟೇ ಮುಖ್ಯ ಹಾಗಾಗಿ ‘ಮನೆಯೇ ಮೊದಲ ಪಾಠಶಾಲೆ’ ಎಂದು ಹೇಳುತ್ತೇವೆ. ಆದ್ದರಿಂದ ಮನೆಯಲ್ಲಿ ಪಾಲಕರು ಮಕ್ಕಳಿಗಾಗಿ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡಬೇಕು. ತಂದೆ ತಾಯಂದಿರು ಮಕ್ಕಳ ಮುಂದೆ ಧನಾತ್ಮಕ ವಿಚಾರಗಳನ್ನು ಮಾತ್ರ ಮಾತನಾಡಬೇಕು ಎಂದು ಹೇಳಿದರು.

ಮಕ್ಕಳ ಸಮಗ್ರ ವಿಕಾಸಕ್ಕಾಗಿ ನಾವು ನೀವುಗಳು ಏನು ಮಾಡಬೇಕು? ಏನು ಮಾಡಬಾರದು? ಅನ್ನುವುದಕ್ಕೆ ಹಲವಾರು ಅಂಶಗಳನ್ನು ತಿಳಿಸಿಕೊಟ್ಟರು. ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಸಂಸ್ಕಾರ ಕೇಂದ್ರ ಕುಟುಂಬ ಅನ್ನುವುದನ್ನು ಹಾಗೂ ಅದರ ಮಹತ್ವವನ್ನು ಅತ್ಯಂತ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟರು. ಮಕ್ಕಳ ಜೊತೆ ಹೆಚ್ಚು ಹೆಚ್ಚು ಸಮಯವನ್ನು ಕಳೆದು ಅವರನ್ನು ಸ್ನೇಹಿತರಂತೆ ಕಾಣಬೇಕು ಎಂದು ಹೇಳಿದರು ಹಾಗೆಯೇ ಮುಖ್ಯವಾಗಿ ಮಕ್ಕಳ ಮುಂದೆ ಪಾಲಕರು ಹೆಚ್ಚು ಹೊತ್ತು ಮೊಬೈಲ್ ಬಳಸಬಾರದು ಮಕ್ಕಳಿಗೆ ಮೊಬೈಲನ್ನು ನೀಡಲೇಬಾರದು. ಮಕ್ಕಳಿಗೆ ಮನೆಯಲ್ಲಿ ದೈಹಿಕವಾಗಿ ಶ್ರಮವಾಗುವಂತಹ ಕೆಲಸಗಳನ್ನು ನೀಡಬೇಕು ಎಂದು ತಿಳಿಸಿಕೊಟ್ಟರು. ಹೀಗೆ ಹತ್ತು  ಹಲವಾರು ವಿಷಯಗಳನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳು ಪ್ರಗತಿಯ ಪಥದಲ್ಲಿ ಸಾಗುವಂತೆ ಮಾಡಲು ಪಾಲಕರಿಗೆ ಮಾರ್ಗದರ್ಶನ ನೀಡುತ್ತಾ ವಿದ್ಯಾರ್ಥಿಯ ಸರ್ವೋತೋಮುಖ ಬೆಳವಣಿಗೆಯಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಬಹು ಮಹತ್ವದ್ದು ಎಂದು ಹೇಳಿದರು. 

ಅಂಕಗಳೇ ಅಂತಿಮ ಅಲ್ಲ ಸಾಧನೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬಹುದು ಜೆ.ಎಸ್‌.ಎಸ್ ಸಂಸ್ಥೆ ನೈತಿಕ ತಳಹದಿಯ ಮೇಲೆ ಶಿಕ್ಷಣ ನೀಡುತ್ತಿದೆ ಮಕ್ಕಳಲ್ಲಿರುವ ಪ್ರತಿಭೆಯನ್ನು  ಹೊರ ತೆಗೆಯುವದೇ ಶಿಕ್ಷಣ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾವೀರ ಉಪಾಧ್ಯೆಯವರು ಹೇಳಿದರು  

ಪಾಲಕರ ಸಹಕಾರ ಸಹಾಯ ಶಿಕ್ಷಣ ಸಂಸ್ಥೆಗಳಿಗೆ ಅತಿ ಅವಶ್ಯ ನಾವು ನೀಡುವ ಸಲಹೆಗಳನ್ನು ಪಾಲಕರು ಪಾಲಿಸಿದರೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ನಾಗರಿಕರನ್ನಾಗಿ ಮಾಡಬಹುದು ಎಂದು ಪ್ರಾಚಾರ್ಯ ರೇಣು ಪಾಟೀಲ್ ಹೇಳಿದರು 

ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲೆಯ 8, 9, 10 ನೇ ತರಗತಿಯ ಮಕ್ಕಳ ಪಾಲಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ನಂದಾ ಕುಕನೂರ್ ನಿರೂಪಿಸಿ ವಂದಿಸಿದರು.