ಗುಬ್ಬಚ್ಚಿಗೂಡು ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
Children's Day program launched at Gubbachigudu Educational Institute
ಲೋಕದರ್ಶನ ವರದಿ
ಗುಬ್ಬಚ್ಚಿಗೂಡು ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಬೆಳಗಾವಿ 15: ಜ್ಞಾನಾರ್ಜನೆ ಆದರ್ಶ ವಿದ್ಯಾರ್ಥಿಯ ಸೊತ್ತು. ವಿದ್ಯಾರ್ಥಿಗಳು ಜೀವನದಲ್ಲಿ ಕೀಳು ಅಭಿರುಚಿಗಳನ್ನು ತ್ಯಜಿಸಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ದೇಶದಉಜ್ವಲ ಭವಿಷ್ಯ ನಿಮ್ಮನ್ನೆ ಅವಲಂಭಿಸಿದೆ ಎಂದು ನಿವೃತ್ತ ಮುಖ್ಯಾಧ್ಯಾಪಕ ವೀರಣ್ಣಒಡ್ಡೀನ ಹೇಳಿದರು.
ಅವರು ಮಾಳಾಪೂರದ ಗುಬ್ಬಚ್ಚಿಗೂಡು ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವರ್ತಮಾನಕಾಲದ ವಿದ್ಯಾರ್ಥಿಗಳಾದ ತಾವು ಮುಂದೆ ಭವಿಷ್ಯತ್‌ಕಾಲದ ನಾಯಕರಾಗುವವರು. ದೇಶದ ನಿಜವಾದ ಸಂಪತ್ತು ನೀವೇ.ನಿಮ್ಮ ಬಾಲ್ಯ ಸಂತಸದಾಯಕವಾಗಿರಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೇ ಶಾಲಾ ಚಟುವಟಿಕೆಯಲ್ಲಿ ಪಾಲ್ಗೊಂಡು ನಾಯಕತ್ವದಗುಣ ಬೆಳೆಸಿಕೊಳ್ಳಬೇಕು.
ಮಕ್ಕಳು ಈ ನಾಡಿನ ಭಾಗ್ಯೋದಯದ ಶಿಲ್ಪಿಗಳು. ವಿದ್ಯಾರ್ಥಿ ಜೀವನ ಒಂದು ತಪಸ್ಸುಎಂದು ತಿಳಿದು ಸಮಯ ಪ್ರಜ್ಞೆಯೊಂದಿಗೆ ಅಧ್ಯಯನ ಮಾಡಬೇಕು. ಶಾಲೆ ನನ್ನದು, ಗುರುಗಳು ನನ್ನವರು ಎಂಬ ಅಭಿಮಾನ ನಿಮ್ಮಲ್ಲಿರಬೇಕು.ಕಲಿಸಿದ ಗುರುಗಳನ್ನು, ಪಾಲಕರನ್ನು, ಹಿರಿಯರನ್ನು ಗೌರವದಿಂದ ಕಾಣಬೇಕೆಂದು ಹೇಳಿದರು.
ಅತಿಥಿ ಸುನಿತಾಗುಡ್ಡಿನ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಷ್ಟ್ರ ನಾಯಕರಜೀವನ ಶೈಲಿಯೇ ನಿಮಗೆ ಮಾದರಿ.ಅವರಜೀವನದ ಮೌಲ್ಯಗಳು ನಿಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯೆ ನೀಡಿದ ಸಂಸ್ಥೆಯಋಣವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ತಿಳಿಸಿದರು.
ಗುಬ್ಬಚ್ಚಿಗೂಡು ಶಾಲೆಯ ಅಧ್ಯಕ್ಷ ಶಂಕರ ಹಲಗತಿ ್ತಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮಕ್ಕಳಿಂದ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದವು. ವಿಜ್ಞಾನ ನಾಟಕದಲ್ಲಿ ಸಾಧನೆ ಮಾಡಿದ ಅಪ್ರೋಜ ಜಾಲಗಾರ, ಚಂದನಾ ದಿವಟಗಿ, ಶಿಲ್ಪಾ ನಲವಡಿ, ಶಿವಾನಂದ ದೊಡಮನಿ, ತೇಜಸ್ವಿನಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಲಕ್ಷ್ಮಿಜಾಧವ ಸ್ವಾಗತಿಸಿದರು. ದಿಲ್‌ಷಾದ ಕಳಮಡ್ಡಿ ನಿರ್ವಹಿಸಿದರು.ಸಿಕಂದರ ದಂಡಿನ ವಂದಿಸಿದರು.ಕಾರ್ಯಕ್ರಮದಲ್ಲಿ ಭಾರತಿ ಸಾಬಳೆ, ಲಕ್ಷ್ಮಣತಿಕ್ಕುಂಡಿ ಸೇರಿದಂತೆ, ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳ ಪಾಲಕರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 